ಬ್ಲೂ ಫಿಲ್ಮ್​ ವಿಚಾರ ಶಿಲ್ಪಾಗೆ ಗೊತ್ತಿತ್ತಾ? ಪೊಲೀಸರಿಂದ ವಿಚಾರಣೆ- ಕುಂದ್ರಾಗೆ 27ರವರೆಗೆ ಜೈಲು

shilpa
Published on

ಮುಂಬೈ: ಉದ್ಯಮಿ ರಾಜ್​ಕುಂದ್ರಾ ಬ್ಲೂ ಫಿಲ್ಮ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ನಟಿ ಶಿಲ್ಪಾ ಶೆಟ್ಟಿಯ ಮನೆಗೆ ಧಾವಿಸಿರುವ ಮುಂಬೈ ಕ್ರೈಂಬ್ರ್ಯಾಂಚ್​ ಪೊಲೀಸರು ಅವರ ವಿಚಾರಣೆ ನಡೆಸುತ್ತಾರೆ ಎನ್ನಲಾಗಿದೆ. ಪತಿಯ ಈ ಉದ್ಯೋಗದ ಬಗ್ಗೆ ಅವರಿಗೆ ತಿಳಿದಿತ್ತಾ ಎನ್ನುವ ವಿಚಾರವನ್ನು ತನಿಖೆಯ ನಂತರ ಪೊಲೀಸರು ಬಹಿರಂಗಪಡಿಸಬೇಕಿದೆ.

ಈ ನಡುವೆಯೇ ಕುಂದ್ರಾ ಅವರ ಪೊಲೀಸ್ ಕಸ್ಟಡಿ ಅವಧಿಯನ್ನು ಮುಂಬೈ ಕೋರ್ಟ್ ಜುಲೈ 27ರ ವರೆಗೆ ವಿಸ್ತರಿಸಿದೆ. ನೀಲಿ ಚಿತ್ರ ತಯಾರಿಕೆಗೆ ಕುರಿತಂತೆ ಪೊಲೀಸರು ತನಿಖೆ ಮುಂದುವರೆಸಿದ್ದು, ಹಲವಾರು ಬ್ಯಾಂಕ್​ಗಳಲ್ಲಿ ಕುಂದ್ರಾ ಹಣದ ಹೊಳೆ ಹರಿಸಿರುವುದನ್ನು ಗಮನಿಸಿದ್ದಾರೆ.

ಬ್ಲೂ ಫಿಲ್ಮ್ಂ ಮಾಡಿ ಅದನ್ನು ವಿದೇಶಕ್ಕೆ ರವಾನೆ ಮಾಡುತ್ತಿದ್ದ ಕುಂದ್ರಾ ಆಫ್ರಿಕಾದ ಬ್ಯಾಂಕ್​ನಲ್ಲಿಯೂ ಹಣ ಇಟ್ಟಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಇದರ ತನಿಖೆಗೆ ಮುಂದಾಗಿದ್ದಾರೆ. ಜತೆಗೆ ನಟಿ ಶಿಲ್ಪಾ ಶೆಟ್ಟಿ ಅವರ ವಿಚಾರಣೆ ಕೈಗೊಳ್ಳುವ ಸಾಧ್ಯತೆ ಇದೆ.

ಕುಂದ್ರಾ ಅವರನ್ನು ಜುಲೈ 19 ರ ರಾತ್ರಿ ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ. ಇವರ ಪೊಲೀಸ್ ಕಸ್ಟಡಿ ಅವಧಿ ಇಂದು (ಶುಕ್ರವಾರ) ಅಂತ್ಯಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಮತ್ತೆ ತಮ್ಮ ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net