ಬೇರೆಯವರಿಗೆ ಹೃದಯಕೊಟ್ಟಾಕೆಗೆ ಅನ್ಯಾಯ ಮಾಡಲಾರೆ ಎಂದು ಪತ್ನಿಯನ್ನು ಪ್ರಿಯಕರನಿಂದ ಒಪ್ಪಿಸಿದ ಪತಿ!

marraige
Published on

ಜಾರ್ಖಂಡ್​: ಕೆಲವೊಮ್ಮೆ ನಿಜ ಜೀವನದಲ್ಲಿಯೂ ಸಿನಿಮೀಯ ಘಟನೆಗಳು ನಡೆದುಹೋಗುತ್ತವೆ. ಅದರಲ್ಲಿಯೂ ಪ್ರೀತಿ ಪ್ರೇಮದ ವಿಷಯದಲ್ಲಿ ತ್ಯಾಗದ ಬಗ್ಗೆ ಬಂದಾಗ ಸಿನಿಮಾದಲ್ಲಿ ನಡೆಯುವುದು ನಿಜಜೀವನದಲ್ಲಿ ನಡೆಯುವುದು ಕಷ್ಟವೇ ಎನ್ನಬಹುದು.

ಆದರೆ ಇಲ್ಲೊಂದು ಪ್ರಕರಣದಲ್ಲಿ ಮಾತ್ರ ಸಿನಿಮಾ ಕಥೆಯನ್ನೂ ಮೀರುವ ಪ್ರಕರಣ ನಡೆದಿದೆ. ಅದೇನೆಂದರೆ, ಜಾರ್ಖಂಡ್‍ನಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಪ್ರೀತಿಗಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿರುವ ಘಟನೆ!

ಜಾರ್ಖಂಡಿನ ರಾಂಚಿಯಲ್ಲಿ ಅಪರೂಪದ ಘಟನೆ ನಡೆದಿದೆ. ಇಲ್ಲಿ ಯುವತಿ ಬೇರೊಬ್ಬ ಯುವಕನನನ್ನು ಪ್ರೀತಿಸುತ್ತಿದ್ದಳು. ಆದರೆ ಮನೆಯವರಿಗೆ ಇದು ಇಷ್ಟವಿರಲಿಲ್ಲ. ಅವರು ಬೇರೆ ಹುಡುಗನನ್ನು ನೋಡಿ ಮದುವೆ ಮಾಡಿದ್ದಾರೆ. ಆದರೆ ಮದುವೆಯಾದ 17 ದಿನಗಳ ಬಳಿಕ ಗಂಡನ ಮನೆಬಿಟ್ಟು ಹೋಗಿದ್ದಾಳೆ. ಆಗ ಗಂಡನ ಮನೆಯವರು ಆಕೆಯನ್ನು ಹುಡುಕಿದ್ದಾರೆ. ಹುಡುಗಿಯ ಮನೆಯ ಕಡೆಗೂ ವಿಷಯ ಮುಟ್ಟಿಸಿದ್ದಾರೆ. ನಂತರ ಹುಡುಗಿಯ ಮನೆಯವರಿಗೆ ಸಂದೇಹ ಬಂದಿದ್ದು, ಲವರ್​ ಮನೆಗೆ ಹೋಗಿದ್ದಾರೆ. ಯುವತಿ ಅಲ್ಲಿಯೇ ಇರುವುದು ಕಂಡಿದೆ.

ಜಪ್ಪಯ್ಯ ಎಂದರೂ ತಾನು ಪತಿಯ ಮನೆಗೆ ಬರುವುದಿಲ್ಲ ಎಂದು ಹೇಳಿದ್ದಾಳೆ. ಲವರ್​ ಜತೆಗೇ ಇರುವುದಾಗಿ ಹೇಳಿದ್ದಾಳೆ. ನಂತರ ಈ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಆದರೆ ಇಷ್ಟು ಹೊತ್ತಿಗಾಗಲೇ ಪತಿ ಒಂದು ಗಟ್ಟಿ ಮನಸ್ಸು ಮಾಡಿಬಿಟ್ಟಿದ್ದಾನೆ.

ಆಕೆಯ ಪಾಲಕರಿಗೂ ಒಪ್ಪಿಸಿದ ಗಂಡ, ಬೇರೆಯವರಿಗೆ ಹೃದಯ ಕೊಟ್ಟಾಕೆ ತನ್ನ ಜತೆ ಸಂಸಾರ ಮಾಡಿದರೆ ಅದು ತನಗೂ ಒಳ್ಳೆಯದಲ್ಲ, ಆ ಜೋಡಿಗೂ ಒಳ್ಳೆಯದಲ್ಲ ಎಂದುಕೊಂಡ ಗಂಡ ಪತ್ನಿಯನ್ನು ಆಕೆಯ ಪ್ರಿಯಕರನಿಗೆ ಒಪ್ಪಿಸಿದ್ದಾನೆ. ನಂತರ ಪೊಲೀಸ್​ ಠಾಣೆಯಲ್ಲಿಯೇ ಇಬ್ಬರಿಂದಲೂ ಸಹಿ ಹಾಕಿಸಿಕೊಂಡು ಪತ್ನಿಯನ್ನು ಪ್ರಿಯಕರನಿಗೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net