ಕೊಲೆಯಾದ ಅಮ್ಮನ ಬಳಿ ಕುಳಿತು ಆಡುತ್ತಿದ್ದ ಮಕ್ಕಳು: ತಿನ್ನಲು ಬರ್ಗರ್‌ ಕೊಟ್ಟಾಗ ಹೇಳಿದರು ಭಯಾನಕ ಸತ್ಯ

death
Published on

ಚೆನ್ನೈ: ತಾಯಿಯ ಶವದ ಬಳಿಯೇ ಮಕ್ಕಳು ಆಟವಾಡುತ್ತಾ ಕುಳಿತಿದ್ದು, ಅವರಿಗೆ ತಿನ್ನಲು ಪೊಲೀಸರು ಬರ್ಗರ್‌ ಕೊಟ್ಟಾಗ ತಾಯಿಯ ಕೊಲೆಯ ಭಯಾನಕ ಸತ್ಯವನ್ನು ಬಾಯಿಬಿಟ್ಟಿರುವ ಘಟನೆ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ.

ಚಾಕುವಿನಿಂದ ಇರಿದ ಕಾರಣ ರಕ್ತಸಿಕ್ತವಾಗಿ ಹೆಣವಾಗಿದ್ದ ಮಹಿಳೆಯ ಬಳಿ ಇಬ್ಬರು 20 ವರ್ಷದ ಆಸುಪಾಸಿನ ಮಕ್ಕಳು ಗೊಂಬೆಯ ಜೊತೆ ಆಟವಾಡುತ್ತ ಕುಳಿತುಕೊಂಡಿದ್ದರು. ಬಾಗಿಲು ಹಾಕಿಕೊಂಡಿದ್ದನ್ನು ಕಂಡು ಅಕ್ಕಪಕ್ಕದ ಮನೆಯವರಿಗೆ ಕೊಲೆಯ ವಿಷಯ ತಿಳಿದು ಪೊಲೀಸರಿಗೆ ದೂರು ನೀಡಿದಾಗ ಮನೆಯೊಳಕ್ಕೆ ನುಗ್ಗಿದಾಗ ಪೊಲೀಸರೇ ಬೆಚ್ಚಿಬಿದ್ದಿರುವ ಘಟನೆ ಇದಾಗಿದೆ.

ಗಂಡನಿಂದ ದೂರವಾಗಿದ್ದ ಉಷಾ ಎಂಬ ಮಹಿಳೆಗೆ ಇಬ್ಬರು ಹೆಣ್ಣುಮಕ್ಕಳು. 20 ವರ್ಷದ ಆಸುಪಾಸಿನ ಈ ಇಬ್ಬರೂ ಹೆಣ್ಣುಮಕ್ಕಳು ಮಾನಸಿಕ ಅಸ್ವಸ್ಥರು. ಅಲ್ಲಿ ಇಲ್ಲಿ ಕೆಲಸ ಮಾಡಿ, ಟ್ಯೂಷನ್‌ ಮಾಡಿ ಉಷಾ ಈ ಮಕ್ಕಳನ್ನು ಸಲಹುತ್ತಿದ್ದರು. ಇದು ಅಕ್ಕಪಕ್ಕದ ಮನೆಯವರಿಗೂ ತಿಳಿದಿತ್ತು. ನಿನ್ನೆ ಎಷ್ಟು ಹೊತ್ತಾದರೂ ಮನೆಯ ಬಾಗಿಲು ತೆರೆದಿರಲಿಲ್ಲ. ಕಿಟಕಿಯಿಂದ ನೆರೆಮನೆಯವರು ನೋಡಿದಾಗ ರಕ್ತಸಿಕ್ತ ದೇಹ ಕಂಡಿದೆ.

ಕೂಡಲೇ ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಬಂದಾದ ಈ ಯುವತಿಯರಿಬ್ಬರೂ ಬೊಂಬೆಯ ಜೊತೆ ಆಟವಾಡುತ್ತಿದ್ದರು. ರಕ್ತಸಿಕ್ತವಾದ ಬಟ್ಟೆಯಲ್ಲಿಯೇ ಓರ್ವ ಸಹೋದರಿ ಮತ್ತೋರ್ವಳಿಗೆ ಬಿಸ್ಕಿಟ್ ತಿನ್ನಿಸುತ್ತಿದ್ದಳು. ತಾಯಿಗೆ ಏನಾಯಿತು ಎಂದು ಇಬ್ಬರೂ ಹೇಳಲಿಲ್ಲ. ನಂತರ ತಾನೇ ಕೊಂದಿದ್ದು ಎಂದಿದ್ದಾಳೆ!

ಸದ್ಯ ಇಬ್ಬರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದ್ದು, ಕೊಲೆಯ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net