ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

marriage
Published on

ಲಖನೌ: ಆತ ಇನ್ನೂ ಯುವಕ. ಚಂದದ ಹುಡುಗಿಯನ್ನ ಹುಡುಕಿದ್ದ ಕುಟುಂಬ ಇದೇ ತಿಂಗಳು ಮದುವೆಯನ್ನೂ ನಿಶ್ಚಯಿಸಿತ್ತು. ಇನ್ನೇನು ಮದುವೆಗೆ ಮೂರೇ ದಿನ ಬಾಕಿಯಿತ್ತು. ಆಗಲೇ ಯುವಕನಿಗೆ ಗಂಡಾಂತರ ಎದುರಾಗಿದ್ದು ಮರ್ಮಾಂಗವೇ ಇಲ್ಲದಂತಾಗಿದೆ.

ಉತ್ತರ ಪ್ರದೇಶದ ಕೊಟ್ವಾಲಿ ನಗರದ ಇಡ್ಗಾ ಪ್ರದೇಶದ ಸಮೀರ್​ ತನ್ನ ಸ್ನೇಹಿತ ಪರ್ವೇಜ್​ ಬಳಿ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದ. ಈ ವಿಚಾರವಾಗಿ ಆಗಾಗ ಜಗಳ ಆಗುತ್ತಿತ್ತಂತೆ. ಈ ಮಧ್ಯೆ ಸಮೀರ್​ನ ಮದುವೆ ನಿಕ್ಕಿಯಾಗಿದೆ. ಇನ್ನೇನು ಮದುವೆಗೆ ಮೂರು ದಿನಗಳಿವೆ ಎನ್ನುವಾಗ ಪರ್ವೇಜ್​ ತನ್ನ ಇಬ್ಬರು ಸ್ನೇಹಿತರನ್ನು ಸಮೀರ್​ ಬಳಿ ಕಳುಹಿಸಿಕೊಟ್ಟಿದ್ದಾನೆ. ದುಡ್ಡಿಲ್ಲ ಎಂದ ಸಮೀರ್​ನನ್ನು ಆ ಯುವಕರು ಕಾಡೊಂದಕ್ಕೆ ಕರೆದೊಯ್ದಿದ್ದಾರೆ.

ಕಾಡೊಳಗೆ ಸಮೀರ್​ನನ್ನು ಕರೆದೊಯ್ದ ಯುವಕರು ಆತನನ್ನು ಕಟ್ಟಿ ಮರ್ಮಾಂಗವನ್ನೇ ಕತ್ತರಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದ ಸಮೀರ್​ನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಸಮೀರ್​ ತನ್ನ ಫೋನ್​ನಿಂದ ಮನೆಗೆ ಕರೆ ಮಾಡಿ ವಿಚಾರ ತಿಳಿಸಲಾಗಿದೆ. ತಕ್ಷಣವೇ ಸ್ಥಳಕ್ಕೆ ಬಂದ ಕುಟುಂಬಸ್ಥರು ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಸಮೀರ್​ ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿರುವುದಾಗಿ ವರದಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net