ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?

SUCIDE
Published on

ಲಖನೌ: ಕುಟುಂಬದ ಮೌಲ್ಯವನ್ನು ಎಲ್ಲರೂ ಅರಿತುಕೊಳ್ಳುವುದು ಬಹುಮುಖ್ಯ. ಒಂದು ವೇಳೆ ಕುಟುಂಬ, ಸಂಬಂಧದ ಮೌಲ್ಯಗಳನ್ನು ಅರಿತುಕೊಳ್ಳದೆಯೇ ಬದುಕಲಾರಂಭಿಸಿದರೆ ಅದು ಮುಂದೊಂದು ದಿನ ಕೆಲ ಸಮಸ್ಯೆಗಳಿಗೆ ಮುನ್ನುಡಿಯಾಗಬಹುದು. ಅದೇ ರೀತಿ ಅತ್ತಿಗೆ ಮೈದುನನ ಸಂಬಂಧವನ್ನು ಬೇರೆಯದ್ದೇ ರೀತಿಯಲ್ಲಿ ಬಳಸಿಕೊಂಡ ಇಬ್ಬರು ಇದೀಗ ಸ್ಮಶಾನ ಸೇರಿರುವ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ.

ಗಾಜಿಪುರದ ಬ್ರಹ್ಮಾಂತರ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. 28 ವರ್ಷದ ಸುನಿತಾ ಆ ಮನೆಗೆ ಕೆಲವು ವರ್ಷಗಳ ಹಿಂದೆಯೇ ಸೊಸೆಯಾಗಿ ಬಂದಿದ್ದಳು. ಕುಟುಂಬದ ಮೊದಲನೇ ಸೊಸೆಯಾಗಿ ಬಂದಿದ್ದ ಆಕೆಗೆ ಒಂದು ಮೂರು ವರ್ಷದ ಮಗ ಮತ್ತೊಬ್ಬಳು ಮೂರು ತಿಂಗಳ ಮಗಳಿದ್ದಳು. ಈ ಸುಂದರ ಕುಟುಂಬದಲ್ಲಿ ಕಲ್ಲು ಎಸೆದುಕೊಳ್ಳುವ ಕೆಲಸವನ್ನು ಅವಳು ಮಾಡಿಕೊಂಡಿದ್ದಾಳೆ.

ಗಂಡನ ಜತೆ ಅನ್ಯೋನ್ಯವಾಗಿಯೇ ಇದ್ದ ಸುನಿತಾ ಗಂಡನ ತಮ್ಮನೊಂದಿಗೆ ಸಂಪರ್ಕ ಆರಂಭಿಸಿದ್ದಾಳೆ. 22 ವರ್ಷದ ಮೈದುನನೊಂದಿಗೂ ಸಂಬಂಧ ಬೆಳೆಸಿಕೊಂಡಿದ್ದಾಳೆ. ಈ ಮಧ್ಯೆ ಆತನಿಗೆ ಮದುವೆ ಸಂಬಂಧ ಕೂಡಿಬಂದಿದೆ. 2021ರ ಮೇ 7ಕ್ಕೆ ಮದುವೆಯನ್ನು ನಿಶ್ಚಯಿಸಲಾಗಿದೆ. ಆದರೆ ಅದನ್ನು ಸಹಿಸದ ಅತ್ತಿಗೆ ಮತ್ತು ಮೈದುನ ಇಬ್ಬರು ನೇಣಿಗೆ ಶರಣಾಗಿದ್ದಾರೆ. ಸದ್ಯ ಇಬ್ಬರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net