More

    ಭಾರತದೊಳಗೆ ಶಸ್ತ್ರಾಸ್ತ್ರ ಸಾಗಿಸಲು ಪಾಕ್ ಉಗ್ರರು ಬಳಸುತ್ತಿರುವ ಈ ತಂತ್ರ ಹೇಗಿದೆ ನೋಡಿ!

    ನವದೆಹಲಿ: ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಮತ್ತು ಬೇಹುಗಾರಿಕೆ ಸಂಸ್ಥೆ ಐಎಸ್‌ಐನ ಬತ್ತಳಿಕೆಯಲ್ಲಿ ಚೀನಾ ನಿರ್ಮಿತ ದೊಡ್ಡ ಡ್ರೋನ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪಂಜಾಬ್ ಹಾಗೂ ಜಮ್ಮು- ಕಾಶ್ಮೀರದೊಳಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡುವ ಸಾಮರ್ಥ್ಯ ಹೆಚ್ಚಿಸಲು ಚೀನಿ ಡ್ರೋನ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.

    ಇದನ್ನೂ ಓದಿ: ಎಲೆಕ್ಷನ್‌ಗೆ ಬಿಜೆಪಿ ಕೊಟ್ಟ ದುಡ್ಡನ್ನು ಯೋಗೇಶ್ವರ್ ಲಪಟಾಯಿಸಿದ್ರು: ವಿಶ್ವನಾಥ್‌ ವಾಕ್ಸಮರ

    ಕಳೆದ ಕೆಲವು ವರ್ಷಗಳಿಂದ ಸಣ್ಣ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಕಳ್ಳಸಾಗಣೆ ಮಾಡುತ್ತಿರುವ ಉಗ್ರ ಸಂಘಟನೆಗಳು ಹಾಗೂ ಐಎಸ್‌ಐ ಈಗ ಹೆಚ್ಚು ಪ್ರಮಾಣದ ಶಸ್ತ್ರಾಸ್ತ್ರ ಸಾಗಿಸುವ ಸಾಮರ್ಥ್ಯ ಹೊಂದಿರುವ ಮೇಲ್ದರ್ಜೆಗೇರಿಸಿದ ಡ್ರೋನ್‌ಗಳನ್ನು ಚೀನಾದಿಂದ ಖರೀದಿಸುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರಿಗೆ ಪೂರೈಸಲೆಂದು ಪಂಜಾಬ್‌ನಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಡ್ರೋನ್ ಮೂಲಕ ಇಳಿಸಲಾಗುತ್ತಿದೆ. ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಎತ್ತರದ ಗುಡ್ಡಗಾಡು ಪ್ರದೇಶಗಳು ಹಿಮಾವೃತವಾಗಿರುವುದರಿಂದ ಜಮ್ಮು-ಕಾಶ್ಮೀರದೊಳಗೆ ನುಸುಳಲು ಜಿಹಾದಿಗಳಿಗೆ ಕಷ್ಟವಾಗುತ್ತಿದೆ. ಹೀಗಾಗಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು ಅವರಿಗೆ ಅನಿವಾರ್ಯವಾಗಿದೆ ಎಂದು ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ನಾನು ಹಣ ಪಡೆದಿರುವುದನ್ನು ಸಿದ್ದರಾಮಯ್ಯ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ: ಜಿ.ಟಿ. ದೇವೇಗೌಡ ಸವಾಲು

    ಭಾರತ ಮತ್ತು ಚೀನಾ ನಡುವೆ ಗಡಿ ಉದ್ವಿಗ್ನತೆ ಮುಂದುವರಿದಿರುವುದುರ ನಡುವೆಯೇ ಚೀನಾ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಮಿಲಿಟರಿ ಒಪ್ಪಂದಕ್ಕೆ ಸಹಿ ಹಾಕಿವೆ. ಈಗಿರುವ ಮಿಲಿಟರಿ ಬಾಂಧವ್ಯವನ್ನು ಬಲಪಡಿಸುವುದು ಅದರ ಉದ್ದೇಶವಾಗಿದ್ದು ಭಾರತಕ್ಕೆ ಕಳವಳ ಮೂಡಿಸುವಂತಿದೆ. ಚೀನಾದ ರಕ್ಷಣಾ ಸಚಿವ ವೀ ಫೆಂಗೆ ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನ ಸೇನೆಯ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದಾಗ ಒಡಂಬಡಿಕೆಗೆ ಸಹಿ ಹಾಕಿದ್ದು, ಮಿಲಿಟರಿಯಲ್ಲಿ ಪರಸ್ಪರ ಸಹಕಾರ ಒಪ್ಪಂದದ ಪ್ರಮುಖ ಅಂಶವಾಗಿದೆ.

    ಮಗಳ ಮದುವೆಗೆ ಅಮೆರಿಕಗೆ ಹೋದ ದಂಪತಿ ಪುತ್ರಿಯ ಕಣ್ಣೆದುರಲ್ಲೇ ದುರಂತ ಸಾವು, ಪುತ್ರನೂ ಮೃತ..!

    ಸಾಲ ವಾಪಾಸು ಕೇಳಲು ಬಂದವಳನ್ನೇ ರೇಪ್​ ಮಾಡಿಬಿಟ್ಟ; ಸಾಲ ಕೇಳಿದರೆ ಹುಷಾರ್​!

    ಮಗನಿಗೆ ನೋವಾಗಬಾರದೆಂದು ಕೊಂದೇ ಬಿಟ್ಟ! ಮಗನ ಶವದ ಜತೆಯೇ ರಾತ್ರಿ ಮಲಗಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts