

ಕೋಯಿಕ್ಕೋಡ್: ಬರೋಬ್ಬರಿ 25 ಲಕ್ಷ ರೂ. ಮೌಲ್ಯದ ಮಾದಕ ವಸ್ತು 'ಚರಾಸ್' ಅನ್ನು ಕಳ್ಳಸಾಗಾಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕೇರಳದ ಅಬಕಾರಿ ಜಾರಿ ದಳದ ಅಧಿಕಾರಿಗಳು ಕೋಯಿಕ್ಕೋಡ್ನ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಬಂಧಿಸಿದ್ದಾರೆ.
ಬಂಧಿತನನ್ನು ಮುಹಮ್ಮದ್ ರಶೀಬ್ ಎಂದು ಗುರುತಿಸಲಾಗಿದ್ದು, ಈತ ಕೋಯಿಕ್ಕೋಡ್ನ ಪಲ್ಲಿಯಾರ್ಕಂಡಿಯ ನಿವಾಸಿ. ಶುಕ್ರವಾರ ನಸುಕಿನ ಜಾವ ಆರೋಪಿಯನ್ನು ಬಂಧಿಸಲಾಗಿದೆ.
ಚರಾಸ್ ಅನ್ನು ಬ್ಲೂಟೂತ್ ಸ್ಪೀಕರ್ನಲ್ಲಿಟ್ಟು ರಶೀಬ್ ಕಳ್ಳಸಾಗಾಣೆ ಮಾಡಲು ಯತ್ನಿಸಿದ್ದ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚರಾಸ್ ಮೌಲ್ಯ 25 ಲಕ್ಷ ರೂ. ಇದೆ. ಅಬಕಾರಿ ಕಮೀಷನರ್ ನೀಡಿದ ರಹಸ್ಯ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್)