More

    ಇಂಧನ ದರ ಗಗನಮುಖಿ – ಎರಡು ವಾರದಲ್ಲಿ ಪೆಟ್ರೋಲ್​ 2 ರೂಪಾಯಿ, ಡೀಸೆಲ್ ಅಂದಾಜು 3 ರೂಪಾಯಿ ಹೆಚ್ಚಳ

    ನವದೆಹಲಿ: ಇಂಧನ ದರ ಇಂದು ಮತ್ತೆ ಏರಿಕೆಯಾಗಿದ್ದು, ಎರಡು ವರ್ಷಗಳ ಅವಧಿಯಲ್ಲಿ ಗರಿಷ್ಠ ಮಟ್ಟಕ್ಕೇರಿದ ದಾಖಲೆ ನಿರ್ಮಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಳವಾದ ಕಾರಣ ಕಳೆದ 15 ದಿನಗಳ ಅವಧಿಯಲ್ಲಿ ಇದು 13ನೇ ಬಾರಿಗೆ ಇಂಧನದ ಪರಿಷ್ಕರಣೆಯಾಗಿದೆ. ಇಂದು ಪೆಟ್ರೋಲ್​ ದರ ಲೀಟರಿಗೆ 25 ಪೈಸೆ ಹಾಗೂ ಡೀಸೆಲ್ ದರ ಲೀಟರಿಗೆ 27 ಪೈಸೆ ಹೆಚ್ಚಳವಾಗಿದೆ.

    ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರಿಗೆ 82.86 ರೂಪಾಯಿ ಇದ್ದುದು 83.13 ರೂಪಾಯಿ, ಡೀಸೆಲ್ ದರ 73.07 ರೂಪಾಯಿಯಿಂದ 73.32 ರೂಪಾಯಿಗೆ ಏರಿಕೆಯಾಗಿದೆ. 2018ರ ಸೆಪ್ಟೆಂಬರ್ ತಿಂಗಳ ಪೆಟ್ರೋಲ್ ಮತ್ತು ಡೀಸೆಲ್ ದರ ಹೋಲಿಸಿದರೆ ಇದು ಗರಿಷ್ಠವಾಗಿದೆ. ಕಳೆದ ಹದಿನೈದು ದಿನಗಳ ಅವಧಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರಿಗೆ 2.07 ರೂಪಾಯಿ ಮತ್ತು ಡೀಸೆಲ್ ದರ ಪ್ರತಿ ಲೀಟರಿಗೆ 2.86 ರೂಪಾಯಿ ಹೆಚ್ಚಳವಾಗಿದೆ.

    ಇದನ್ನೂ ಓದಿ: ಸೀಮೆಎಣ್ಣೆ ದೀಪ ಉರಿಸ್ತಿದ್ರೂ ಮೂರು ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿಸುತ್ತಿದ್ದಾರೆ ಈ ಮಹಿಳೆ!
    ಬೆಂಗಳೂರಿನಲ್ಲಿ ಪೆಟ್ರೋಲ್ ದರ ನಿನ್ನೆ 21 ಮತ್ತು ಇಂದು 28 ಪೈಸೆ ಹೆಚ್ಚಳವಾಗಿದ್ದು, ಲೀಟರಿಗೆ 85.91 ರೂಪಾಯಿಗೆ. ಡೀಸೆಲ್ ದರ ನಿನ್ನೆ 24 ಪೈಸೆ ಇಂದು 27 ಪೈಸೆ ಹೆಚ್ಚಳವಾಗಿದ್ದು,ಲೀಟರಿಗೆ 77.73 ರೂಪಾಯಿಗೆ ತಲುಪಿದೆ. (ಏಜೆನ್ಸೀಸ್)

    ಇತಿಹಾಸ ಸೃಷ್ಟಿಸಿದ ಸೆನ್ಸೆಕ್ಸ್,ನಿಫ್ಟಿ – ಒಂದೇ ವಾರದಲ್ಲಿ 60ಕ್ಕೂ ಅಧಿಕ ಷೇರುಗಳ ಮೌಲ್ಯ ಶೇಕಡ 10-50 ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts