More

    ಪೆಟ್ರೋಲ್-ಡೀಸೆಲ್ ಲಾರಿ ಸೈಲೆನ್ಸರ್‌ನಲ್ಲಿ ಬೆಂಕಿ

    ಕಾರಟಗಿ: ಪಟ್ಟಣದ ಶ್ರೀ ಶರಣಬಸವೇಶ್ವರ ಶಿಕ್ಷಣ ಸಂಸ್ಥೆಯ ಮುಂಭಾಗದ ಆರ್‌ಜಿ ರಾಜ್ಯಹೆದ್ದಾರಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಾಗಿಸುತ್ತಿದ್ದ ಲಾರಿಯ ಸೈಲೆನ್ಸರ್‌ನಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದ್ದು, ನಂದಿಸುವ ಮೂಲಕ ಅಗ್ನಿಶಾಮಕ ಸಿಬ್ಬಂದಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

    ಕಲಬುರಗಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ತುಂಬಿಕೊಂಡು ಬಳ್ಳಾರಿ ಜಿಲ್ಲೆಯ ಕುಡತಿನಿಗೆ ತೆರಳುತ್ತಿದ್ದ ಲಾರಿ ಸೈಲೆನ್ಸರ್ ಪೈಪ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ದಾರಿಹೋಕರು ಲಾರಿ ನಿಲ್ಲಿಸಿ ಚಾಲಕನಿಗೆ ತಿಳಿಸಿದ್ದಲ್ಲದೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.

    ಬೆಂಕಿಯ ಕೆನ್ನಾಲಿಗೆ ಲಾರಿಯನ್ನು ಆವರಿಸಿಕೊಳ್ಳುವ ಮುನ್ನವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಠಾಣಾಧಿಕಾರಿ ಶಿವರಾಜ ನೇತೃತ್ವದ ಸಿಬ್ಬಂದಿ, ಬೆಂಕಿ ನಂದಿಸಿ ಭಾರಿ ಅವಘಡ ತಪ್ಪಿಸಿದ್ದಾರೆ. ಲಾರಿಯ ಸೈಲೆನ್ಸರ್ ಬ್ಲಾಕ್ ಆಗಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆಯೆಂದು ಚಾಲಕ ನವೀನ್ ತಿಳಿಸಿದ್ದಾರೆ. ಟ್ಯಾಂಕರ್‌ನಲ್ಲಿ 8ಸಾವಿರ ಲೀಟರ್ ಡಿಸೇಲ್ ಮತ್ತು 4ಸಾವಿರ ಲೀಟರ್ ಪೆಟ್ರೋಲ್ ಸಾಗಿಸಲಾಗುತ್ತಿತ್ತು.

    ಲಾರಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ರಾಜ್ಯಹೆದ್ದಾರಿಗೆ ಹೊಂದಿಕೊಂಡಿರುವ ಶಾಲಾ ಕೊಠಡಿಗಳಲ್ಲಿನ ಮಕ್ಕಳನ್ನು ಶಿಕ್ಷಕರು ಬೇರೆ ಕೊಠಡಿಗಳಿಗೆ ಸ್ಥಳಾಂತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts