More

    ಅಗ್ನಿ ಶಾಮಕ ಸಿಬ್ಬಂದಿಗೆ ಗೌರವ ತೋರಿ

    ಕಾರಟಗಿ: ಎರಡನೇ ಮಹಾಯುದ್ಧದ ವೇಳೆ ಮುಂಬೈ ಹಡಗು ದುರಂತದ ಅಗ್ನಿ ಅನಾಹುತದಲ್ಲಿ 66ಜನ ಅಗ್ನಿಶಾಮಕ ಸಿಬ್ಬಂದಿ ಹುತಾತ್ಮರಾದ ಹಿನ್ನೆಲೆಯಲ್ಲಿ ಇಲಾಖೆಯಿಂದ ಏಳು ದಿನಗಳ ಕಾಲ ಅಗ್ನಿಶಾಮಕ ಸೇವಾ ಸಪ್ತಾಹ ಆಚರಿಸಲಾಗುತ್ತದೆ ಎಂದು ಪ್ರಭಾರ ಅಗ್ನಿಶಾಮಕಾಧಿಕಾರಿ ಕೆ.ನರಸಪ್ಪ ಹೇಳಿದರು.

    ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಸೋಮವಾರ ಏರ್ಪಡಿಸಿದ್ದ ಅಗ್ನಿಶಾಮಕ ಸೇವಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಹಡಗು ದುರಂತ ತಪ್ಪಿಸಲು ಹೋದ 66ಜನ ಅಗ್ನಿ ಶಾಮಕ ಸಿಬ್ಬಂದಿ ಜೀವದ ಹಂಗು ತೋರೆದು ಸಾರ್ವಜನಿಕರ ಪ್ರಾಣ, ಆಸ್ತಿ, ಮಾನರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಮತ್ತು ಗೌರವ ಸೂಚಿಸುವ ಸಲುವಾಗಿ ಪ್ರತಿ ವರ್ಷ ಏ.14ರಿಂದ ಸತತವಾಗಿ ಏಳು ದಿನಗಳ ಕಾಲ ಅಗ್ನಿಶಾಮಕ ಸೇವಾ ಸಪ್ತಾಹ ಆಚರಿಸಲಾಗುತ್ತದೆ.

    ಅಗ್ನಿಶಾಮಕ ಸಿಬ್ಬಂದಿ ಪ್ರತಿಯೊಂದು ತುರ್ತು ಸಂದರ್ಭಗಳಲ್ಲಿ ಜಾತಿ, ಮತ, ಪಂಥ, ಲಿಂಗ ಮತ್ತು ವಯೋಬೇಧವಿಲ್ಲದೇ ಸಾರ್ವಜನಿಕರ ಜೀವ ರಕ್ಷಣೆಗೆ ಮುಂದಾಗುತ್ತಾರೆ. ಸಾರ್ವಜನಿಕರು ಅಗ್ನಿ ಅವಘಡಗಳ ಬಗೆಗೆ ಎಚ್ಚರಿಕೆ ವಹಿಸುವ ಜತೆಗೆ ಸಿಬ್ಬಂದಿ ಬಗೆಗೆ ಗೌರವಭಾವನೆ ಹೊಂದಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts