

'ದಿಯಾ' ಚಿತ್ರದ ನಂತರ ನಟ ಪೃಥ್ವಿ ಅಂಬರ್ಗೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸುವುದಕ್ಕೆ ಆಫರ್ಗಳು ಸಿಕ್ಕವು. ಆದರೆ, ಯಾವುದೋ ಒಂದು ಚಿತ್ರವನ್ನು ಒಪ್ಪಿ, ಶೂಟಿಂಗ್ಗೆ ಹೋಗಬೇಕು ಎನ್ನುವಷ್ಟರಲ್ಲಿ ಲಾಕ್ಡೌನ್ ಶುರುವಾಯಿತು.
ಈ ಮಧ್ಯೆ, ಪೃಥ್ವಿ ಆ ಚಿತ್ರದಲ್ಲಿ ನಟಿಸುತ್ತಾರೆ, ಈ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಬರುತ್ತಲೇ ಇತ್ತು. ಆದರೆ, ಲಾಕ್ಡೌನ್ ಮುಂದುವರೆದಿದ್ದರಿಂದ ಯಾವ ಚಿತ್ರ ಸಹ ಶುರುವಾಗಲಿಲ್ಲ. ಇದೀಗ ಪೃಥ್ವಿ, 'ಶುಗರ್ಲೆಸ್' ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಸುದ್ದಿ ಬಂದಿದೆ.
ಇದನ್ನೂ ಓದಿ: ಆಲಿಯಾ ಬದ್ಲಾಗಲ್ಲ … ರಾಜಮೌಳಿ ಮಹತ್ವದ ತೀರ್ಮಾನ
ವಿಶೇಷವೆಂದರೆ, ಇಂದು ಪೃಥ್ವಿ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿರುವುದು ವಿಶೇಷ. ಅಷ್ಟೇ ಅಲ್ಲ, ಪೃಥ್ವಿ ಅವರ ಹುಟ್ಟುಹಬ್ಬದಂದು, ಚಿತ್ರತಂಡದವರು ಪೋಸ್ಟರ್ ಬಿಡುಗಡೆ ಮಾಡಿ, ಶುಭಾಶಯಗಳನ್ನು ತಿಳಿಸಿದ್ದಾರೆ.
'ಶುಗರ್ಲೆಸ್', ಕೆ.ಎಂ. ಶಶಿಧರ್ ನಿರ್ದೇಶನದ ಹೊಸ ಚಿತ್ರ. ಈ ಹಿಂದೆ 'ಡಾಟರ್ ಆಫ್ ಪಾರ್ವತಮ್ಮ' ಚಿತ್ರವನ್ನು ನಿರ್ಮಿಸಿದ್ದರು ಅವರು. ಸದ್ಯ, ಪ್ರಜ್ವಲ್ ಅಭಿನಯದ 'ವೀರಂ' ಚಿತ್ರವನ್ನು ಅವರು ನಿರ್ದೇಶಿಸುತ್ತಿದ್ದಾರೆ. ಈ ಮಧ್ಯೆ, ತಾವೇ ಕಥೆ-ಚಿತ್ರಕಥೆ ಬರೆದು, ನಿರ್ದೇಶನ ಮಾಡುವುದಕ್ಕೆ ಹೊರಟಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ನಿಂದ ಬಣ್ಣ ಕಳೆದುಕೊಂಡವರ ಕಥೆ …
ಯುವಕನೊಬ್ಬನಿಗೆ ಚಿಕ್ಕ ವಯಸ್ಸಿನಲ್ಲೇ ಸಕ್ಕರೆ ಖಾಯಿಲೆ ಬಂದರೆ, ಅವನು ಅದನ್ನು ಏನೆಲ್ಲಾ ಅನುಭವಿಸುತ್ತಾನೆ ಎಂಬುದನ್ನು ಈ ಚಿತ್ರವನ್ನು ಹಾಸ್ಯಮಯವಾಗಿ ಹೇಳಲಾಗುತ್ತದಂತೆ. ಪೃಥ್ವಿ ನಾಯಕನಾಗಿ ಕಾಣಿಸಿಕೊಂಡರೆ, ಧರ್ಮಣ್ಣ ಇನ್ನೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಅಂದಹಾಗೆ, ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ಅರ್ಪಿಸುತ್ತಿರುವುದಷ್ಟೇ ಅಲ್ಲ, ವಿತರಣೆ ಸಹ ಮಾಡುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಕಲಾವಿದರು ಹಾಗೂ ತಂತ್ರಜ್ಱರ ಆಯ್ಕೆ ಸಹ ನಡೆಯುತ್ತಿದೆ. ಸೆಪ್ಟೆಂಬರ್ನಿಂದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.