ಗುಂಜನ್​ ಜತೆ ನಾನೂ ಏರ್​ಫೋರ್ಸ್​​ನಲ್ಲಿದ್ದೆ, ನನ್ನನ್ಯಾಕೆ ತೋರಿಸಿಲ್ಲ; ಚಿತ್ರತಂಡದ ವಿರುದ್ಧ ಶ್ರೀವಿದ್ಯಾ ಆರೋಪ

Sreevidya
Published on

ಇತ್ತೀಚೆಗಷ್ಟೇ ಬಿಡುಗಡೆಯಾದ ಗುಂಜನ್​ ಸಕ್ಸೆನಾ; ದಿ ಕಾರ್ಗಿಲ್​ ಗರ್ಲ್​ ಚಿತ್ರ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಏರ್​ಫೋರ್ಸ್​​ ವ್ಯವಸ್ಥೆಗೆ ಚ್ಯುತಿ ತರುವ ರೀತಿಯಲ್ಲಿ ದೃಶ್ಯಾವಳಿಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿ ಸ್ವತಃ ಏರ್​ಫೋರ್ಸ್ ಸೆನ್ಸಾರ್ ಮಂಡಳಿಗೆ ದೂರು ನೀಡಿತ್ತು. ಇದೀಗ ಇದೇ ಚಿತ್ರದ ವಿರುದ್ಧ ಮಾಜಿ ಮಹಿಳಾ ಏರ್​ಫೋರ್ಸ್ ಪೈಲಟ್​ವೊಬ್ಬರು ಚಿತ್ರತಂಡದ ಮೇಲೆ ಹೊಸ ಆರೋಪವೊಂದನ್ನು ಮಾಡಿದ್ದಾರೆ.

ಚಿತ್ರದಲ್ಲಿ ಪುರುಷ ಪೈಲಟ್​ಗಳ ಜತೆಗೆ ಕೇವಲ ಒಬ್ಬೇ ಒಬ್ಬ ಮಹಿಳಾ ಪೈಲಟ್​ ಇದ್ದರು. ಆಕೆಯನ್ನು ಇನ್ನುಳಿದ ಪುರುಷ ಪೈಲಟ್​ಗಳು ಸರಿಯಾಗಿ ನೋಡಿಕೊಳ್ಳಲಿಲ್ಲ. ಸಹಕರಿಸಲಿಲ್ಲ ಎಂದು ಬಿಂಬಿಸಲಾಗಿದೆ. ಆದರೆ, ‘ಆ ಸಂದರ್ಭದಲ್ಲಿ ಗುಂಜನ್​ ಜತೆಗೆ ನಾನೂ ಇದ್ದೆ..’ ಎಂದಿದ್ದಾರೆ ಶ್ರೀವಿದ್ಯಾ ರಾಜನ್​!

1996ರಲ್ಲಿ ಉದಮ್​ಪುರ್​ ಬೇಸ್​ನಲ್ಲಿ ಕೇವಲ ಗುಂಜನ್​ ಅಷ್ಟೇ ಮಹಿಳಾ ಪೈಲಟ್​ ಇರಲಿಲ್ಲ. ನಾನೂ ಅದೇ ಬೇಸ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಆಗಿನ ಪುರುಷ ಪ್ರಧಾನ ಟೀಮ್​ ಎಲ್ಲ ರೀತಿಯಲ್ಲಿ ಸಹಕಾರ ನೀಡಿತ್ತು. ಕೇವಲ ಓರ್ವ ವ್ಯಕ್ತಿ ಸಹಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಇಡೀ ಟೀಮ್​ ಸದಸ್ಯರ ಮೇಲೆಯೇ ಬಿಂಬಿಸಲಾಗಿದೆ. ಇನ್ನೊಂದು ಗಮನಿಸಬೇಕಾದ ವಿಚಾರ ಏನೆಂದರೆ, ಒಮ್ಮೊಮ್ಮೆ ಕಾರಣಾಂತರಗಳಿಂದ ಹೆಲಿಪಾಕ್ಟರ್ ಏರಿ ರೈಡ್​ಗೆ ಹೋಗಲು ಆಗುತ್ತಿರಲಿಲ್ಲ. ಆದರೆ, ಅದನ್ನೇ ಸಿನಿಮಾದಲ್ಲಿ ನೆಗೆಟಿವ್​ ರೀತಿಯಲ್ಲಿ ತೋರಿಸಲಾಗಿದೆ. ನಾನೂ ಸಹ ಕಾರ್ಗಿಲ್​​ ಯುದ್ಧದಲ್ಲಿ ಭಾಗವಹಿಸಿದ್ದೇನೆ’ ಎಂದು ಸುದೀರ್ಘವಾದ ಬರಹವೊಂದನ್ನು ಫೇಸ್​ಬುಕ್​ ಗೋಡೆ ಮೇಲೆ ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net