

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನೇದಿನೆ ಜಟಿಲವಾಗುತ್ತಿದೆ. ಹೊಸ ಹೊಸ ಬೆಳವಣಿಗೆಗಳು, ಬದಲಾವಣೆಗಳಾಗುತ್ತಿವೆ. ಇತ್ತ ಸುಶಾಂತ್ ಕುಟುಂಬದವರು, ಸ್ನೇಹಿತರು ಸುಶಾಂತ್ ಸಾವಿಗೆ ನ್ಯಾಯ ಸಿಗುವುದಕ್ಕೆ ದೊಡ್ಡ ಅಭಿಯಾನವನ್ನೇ ಆರಂಭಿಸಿದ್ದಾರೆ. ಜಸ್ಟಿಸ್ ಫಾರ್ ಸುಶಾಂತ್, ಪ್ರೇ ಫಾರ್ ಸುಶಾಂತ್ ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅದೇ ರೀತಿ ವಿದೇಶಗಳಲ್ಲೂ ಸಾವಿಗೆ ನ್ಯಾಯ ಸಿಗಬೇಕೆಂದು ಅಭಿಯಾನ ಮಾಡಲಾಗುತ್ತಿದೆ.
ಇದೀಗ ಆಸ್ಟ್ರೇಲಿಯಾದ ನಾಮಫಲಕಗಳಲ್ಲಿ , ಸಿಗ್ನಲ್ ಬೋರ್ಡ್ಗಳಲ್ಲಿ ಜಸ್ಟಿಸ್ ಫಾರ್ ಸುಶಾಂತ್ ಸಿಂಗ್ ಎಂಬ ಅಕ್ಷರಗಳು ಕಾಣುತ್ತಿವೆ. ಅದರ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ, ಎಲ್ಲೆಲ್ಲಿ ಆ ಬೋರ್ಡ್ಗಳನ್ನು ಕಾಣಬಹುದಾಗಿದೆ ಎಂಬ ಮಾಹಿತಿಯನ್ನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ಆಸ್ಟ್ರೇಲಿಯಾದ ಹಲವೆಡೆ ಒಟ್ಟು ಏಳು ಬೋರ್ಡ್ಗಳನ್ನು ಅಳವಡಿಸಲಾಗಿದೆ. ಅಲ್ಲಿನ ಜನ ಸುಶಾಂತ್ ಸಾವಿಗೆ ನ್ಯಾಯ ಬೇಕೆನ್ನುತ್ತಿದ್ದಾರೆ. ಸೌತ್ ಬ್ಯಾಂಕ್, ವಿಲಿಯಮ್ಸ್ ಲ್ಯಾಂಡಿಂಗ್, ವಾಂಟರಿನಾ ಸೌತ್, ಈಪ್ಪಿಂಗ್ ಕೂಪರ್, ಬೆಂಟ್ಲೈ, ಡರ್ಮೈಟ್, ಬೈಸ್ ವಾಟರ್ ಗಳಲ್ಲಿ ಬೋರ್ಡ್ ಹಾಕಲಾಗಿದೆ. ಈ ಎಲ್ಲ ಬಿಲ್ ಬೋರ್ಡ್ಗಳನ್ನು ನೋಡುತ್ತಿದ್ದರೆ, ಇಡೀ ಆಸ್ಟ್ರೇಲಿಯಾ ಸುಶಾಂತ್ ಪರವಾಗಿದ್ದಾರೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಆ ಬೋರ್ಡ್ಗಳ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)