

ಸಿನಿಮಾ ಸ್ಟಾರ್ಗಳ ಜನ್ಮ ದಿನ ಬಂತೆಂದರೆ ಅವರ ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ. ಬಗೆಬಗೆ ಸಿಡಿಪಿ (ಕಾಮನ್ ಡಿಸ್ಲೇ ಪಿಕ್ಚರ್) ಗಳನ್ನು ಸಿದ್ಧಪಡಿಸಿ ಫ್ಯಾನ್ ಪೇಜ್ಗಳಲ್ಲಿ ಶೇರ್ ಮಾಡಿಕೊಂಡು ಹಬ್ಬದಂತೆ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡುತ್ತಾರೆ. ವಿಶೇಷ ಏನೆಂದರೆ, ಒಂದಷ್ಟು ಸಿಡಿಪಿಗಳನ್ನು ಸ್ಟಾರ್ ನಟರ ಕಡೆಯಿಂದಲೇ ಬಿಡುಗಡೆ ಮಾಡಿಸುತ್ತಾರೆ. ಅದೇ ರೀತಿ ಟಾಲಿವುಡ್ ಸ್ಟಾರ್ ನಟನ ಬರ್ತ್ಡೇ ಮೋಷನ್ ಪೋಸ್ಟರ್ ಅನ್ನು ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಲಿದ್ದಾರೆ.
ಹಾಗಾದರೆ ಯಾರು ಆ ಟಾಲಿವುಡ್ನ ಸ್ಟಾರ್ ನಟ? ಮೆಗಾಸ್ಟಾರ್ ಚಿರಂಜೀವಿ. ಹೌದು, ಆಗಸ್ಟ್ 22ಕ್ಕೆ ಚಿರಂಜೀವಿ ಹುಟ್ಟುಹಬ್ಬ. ಆ ಪ್ರಯುಕ್ತ ಗಣೇಶ್, ಚಿರು ಬರ್ತ್ಡೇ ಮೋಷನ್ ಪೋಸ್ಟರ್ ಅನ್ನು 21ರ ಸಂಜೆ 7ಗಂಟೆಗೆ ಬಿಡುಗಡೆ ಮಾಡಲಿದ್ದಾರೆ. ಈ ಹಿಂದೆ ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ತಮಿಳು ನಟ ಸೂರ್ಯ ಸೇರಿ ಸಾಕಷ್ಟು ಮಂದಿಯ ಸಿಡಿಪಿಯನ್ನು ಬಿಡುಗಡೆ ಮಾಡಿದ್ದರು.
ಇನ್ನು ಅಭಿಮಾನಿ ವಲಯದಲ್ಲಿ ಈಗಾಗಲೇ ಸಂಭ್ರಮಾಚರಣೆ ಶುರುವಾಗಿದ್ದು, ಚಿರು ಅವರ ಸಿನಿಮಾಕ್ಕೆ ಸಂಬಂಧಿಸಿದ ಅಪ್ಡೇಟ್ಸ್ಗೆ ಅಭಿಮಾನಿಗಳು ಬೇಡಿಕೆ ಇಟ್ಟಿದ್ದು, ಆಚಾರ್ಯ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗುವ ಸಾಧ್ಯತೆ ಇದೆ. (ಏಜೆನ್ಸೀಸ್)