FACT CHECK; ಲಿವರ್​ ಸಮಸ್ಯೆಯಿಂದ ಬಾಲಿವುಡ್​ನ ಖ್ಯಾತ ನಿರ್ದೇಶಕ ನಿಧನ?

nati
Published on

ಬಾಲಿವುಡ್​ನ ಖ್ಯಾತ ನಿರ್ದೇಶಕ ನಿಷಿಕಾಂತ್ ಕಾಮತ್ (50) ಲಿವರ್​ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕಳೆದ ಹಲವು ದಿನಗಳಿಂದ ಹೈದರಾಬಾದ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ಇಂದು ಬೆಳಗ್ಗೆ 10.30ಕ್ಕೆ ಚಿಕಿತ್ಸೆ ಫಲಿಸಲಾಗದೇ ಸಾವನ್ನಪ್ಪಿದರು ಎಂದು ಇಂಡಿಯನ್​ ಎಕ್ಸ್​​ಪ್ರೆಸ್​ ಆನ್​ಲೈನ್​ ಪೋರ್ಟಲ್​ ವರದಿ ಮಾಡಿತ್ತು.

ಈ ಬಗ್ಗೆ ಫಿಲಂ ಮೇಕರ್​ ಮಿಲಾಪ್​ ಜವೇರಿ ಖಚಿತ ಪಡಿಸಿದ್ದು, ತೀವ್ರ ನಿಗಾ ಘಟಕದಲ್ಲಿ ನಿಷಿಕಾಂತ್​ ಅವರನ್ನು ಇರಿಸಿ ಚಿಕಿತ್ಸೆ ಮುಂದುವರಿಸಲಾಗಿದೆಯಂತೆ. ಅವರ ಸಾವಿನ ಸುದ್ದಿ ತಿಳಿದ ತಕ್ಷಣ ಆಸ್ಪತ್ರೆಯಿಂದ ಮಾಹಿತಿ ಪಡೆದುಕೊಂಡ ಮಿಲಾಪ್​, ನಿಷಿಕಾಂತ್​ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ದೊಂಬಿವಾಲಿ ಫಾಸ್ಟ್​, ಮುಂಬೈ ಮೇರಿ ಜಾನ್​, ರಾಕಿ ಹ್ಯಾಂಡ್​ಸಮ್​, ಫೋರ್ಸ್​​, ಮದಾರಿ, ದೃಶ್ಯಂ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ನಿಷಿಕಾಂತ್​, ಲಿವರ್​ ಸಮಸ್ಯೆಯಿಂದ ಇತ್ತೀಚೆಗಷ್ಟೇ ಹೈದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ.

2005ರಲ್ಲಿ ಮರಾಠಿಯಲ್ಲಿ ತೆರೆಕಂಡಿದ್ದ ದೊಂಬಿವಾಲಿ ಫಾಸ್ಟ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಿಷಿಕಾಂತ್​, ಪದಾರ್ಪಣೆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿಕೊಂಡಿದ್ದರು. 2008ರಲ್ಲಿ ಮುಂಬೈ ಮೇರಿ ಜಾನ್​ ಸಿನಿಮಾ ಮೂಲಕ ಬಾಲಿವುಡ್​ಗೆ ಕಾಲಿಟ್ಟಿದ್ದರು. ನಿರ್ದೇಶನದ ಜತೆಗೆ ಡ್ಯಾಡಿ, ರಾಕಿ ಹ್ಯಾಂಡ್​ಸಮ್​, ಜೂಲಿ 2, ಭವೇಶ್​ ಜೋಶಿ ಸಿನಿಮಾಗಳಲ್ಲಿ ನಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net