More

  ಸರ್ಕಾರಿ ಶಾಲೆಯ ಪ್ರಾಂಶುಪಾಲನಿಂದ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ; ವಿಚಾರಣೆ ವೇಳೆ ಹೊರಬಿತ್ತು ಸ್ಪೋಟಕ ಸಂಗತಿ

  ಜೈಪುರ: ವಿದ್ಯಾರ್ಥಿನಿಯರಿಗೆ ಚಾಕಲೇಟ್​ ಆಸೆ ತೋರಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಪ್ರಾಂಶುಪಾಲನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ಧಾರೆ.

  ಘಟನೆಯೂ ರಾಜಸ್ಥಾನದ ಡುಂಗರ್​ಪುರ್​ ಜಿಲ್ಲೆಯಲ್ಲಿ ನಡೆದಿದ್ದು ಬಂಧಿತ ಆರೋಪಿಯನ್ನು ರಮೇಶ್​ ಚಂದ್ರ ಕಟಾರಾ ಎಂದು ಗುರುತಿಸಲಾಗಿದೆ. 8-12 ವರ್ಷದ ಸುಮಾರು 6 ಬಾಲಕಿಯರಿಗೆ ಆರೋಪಿ ಲೈಂಗಿಕ ಕಿರುಕುಳ ನೀಡಿದ್ಧಾನೆ ಎಂದು ತಿಳಿದು ಬಂದಿದೆ.

  ಹೆಚ್ಚಾಗಿ ಅಶ್ಲೀಲ ಚಿತ್ರ ವೀಕ್ಷಣೆ

  ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಂದನ್​ ಕವಾರಿಯಾ ಬಂಧಿತ ಆರೋಪಿಯೂ ಪ್ರತಿನಿತ್ಯ ಅಶ್ಲೀಲ ಚಿತ್ರಗಳನ್ನು ನೋಡುವ ಹವ್ಯಾಸವಿದ್ದು 8-12 ವರ್ಷದ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗಿದ್ದಾನೆ. ಶಾಲೆಗೆ ಬರುತ್ತಿದ್ದ ಹೆಣ್ಣು ಮಕ್ಕಳಿಗೆ ಚಾಕಲೇಟ್​, ಚಿಪ್ಸ್​ ಕೊಡಿಸುವುದಾಗಿ ಆಸೆ ತೋರಿಸಿ ಕೃತ್ಯ ಎಸಗುತ್ತಿದ್ಧಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

  ಇದನ್ನೂ ಓದಿ: ಗಾಯಾಳುಗಳ ರಕ್ಷಣೆಗೆ ಧಾವಿಸಿದ ಆ್ಯಂಬುಲೆನ್ಸ್​ಗೆ ಮಿನಿಬಸ್​ ಡಿಕ್ಕಿ; ಚಾಲಕ ಸೇರಿದಂತೆ ಮೂವರು ಮೃತ್ಯು

  ಬಿಡುವಿನ ವೇಳೆಯಲ್ಲಿ ಬಾಲಕಿಯರನ್ನು ತರಗತಿ ಕುರಿತಾಗಿ ಮಾತನಾಡುವುದಿದೆ ಎಂದು ಹೇಳಿ ಕರೆಸಿಕೊಳ್ಳುತ್ತಿದ್ದ. ಬಳಿಕ ಆರೋಪಿಯೂ ತನ್ನ ಒಡೆತನದ ಖಾಲಿ ಬಂಗಲೆಗೆ ಬಾಲಕಿಯರನ್ನು ಕರೆದುಕೊಂಡು ಹೋಗಿ ಕೃತ್ಯ ಎಸಗುತ್ತಿದ್ದ. ಅವರಿಗೆ ಹಣವನ್ನು ಕೊಟ್ಟು ಚಾಕಲೇಟ್​ ತಿನ್ನುವಂತೆ ಹೇಳುತ್ತಿದ್ದ. ಒಪ್ಪದೆ ಇರುವ ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕುತ್ತಿದ್ದ ಎಂದು ವಿಚಾರಣೆ ವೇಳೆ ಆರೋಪಿಯೂ ಬಾಯ್ಬಿಟ್ಟಿದ್ದಾನೆ.

  ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆ ಸಂಬಂಧ ಸಂತ್ರಸ್ತ ಬಾಲಕಿಯರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿದ್ದು ಅವರ ಹೇಳಿಕೆಗಳನ್ನು ಪಡೆಯಲಾಗಿದೆ ಎಂದು ಡುಂಗರ್​ಪುರ್​ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಂದನ್​ ಕವಾರಿಯಾ ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts