More

  ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹ್ಯಾಟ್ರಿಕ್ ಗೆಲುವು!

  ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 1,52,513 ಮತಗಳ ಅಂತರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಎದುರಾಳಿಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಅವರನ್ನು ಸೋಲಿಸಿದ್ದಾರೆ.

  ಇದನ್ನೂ ಓದಿ: ಅಮೇಠಿಯಲ್ಲಿ ಸ್ಮೃತಿ ಇರಾನಿಗೆ ಹೀನಾಯ ಸೋಲು: ಕಿಶೋರಿ ಲಾಲ್‌ ಶರ್ಮಾಗೆ ದಾಖಲೆಯ ಗೆಲುವು

  ಈ ಕ್ಷೇತ್ರದಲ್ಲಿ ಕಾಂಗ್ರೆಸ್​​ನಿಂದ ಅಜಯ್ ರೈ, ಬಿಎಸ್​​ಪಿಯಿಂದ ಅಥರ್ ಜಮಾಲ್ ಲಾರಿ ಸ್ಪರ್ಧಿಸಿದ್ದಾರೆ. ಉಳಿದಂತೆ, ದಿನೇಶ್ ಕುಮಾರ್ ಯಾದವ್, ಗಗನ್ ಪ್ರಕಾಶ್ ಯಾದವ್, ಸಂಜಯ್ ಕುಮಾರ್ ತಿವಾರಿ, ಕೋಲಿಶೆಟ್ಟಿ ಶಿವಕುಮಾರ್ ಸ್ಪರ್ಧಿಸಿದ್ದಾರೆ.

  ಪ್ರಧಾನಿ ಮೋದಿ 6,12,970 ಮತಗಳನ್ನು ಪಡೆದಿದ್ದಾರೆ. ಅವರ ಎದುರಾಳಿಯಾಗಿರುವ ಕಾಂಗ್ರೆಸ್‌ನ ಅಜಯ್ ರಾಯ್ ಅವರಿಗೆ 4,60,457 ಮತಗಳನ್ನು ಪಡೆದಿದ್ದಾರೆ. ಪ್ರಧಾನಿಯ ಗೆಲುವಿನ ಅಂತರ 1,52,513. ಬಹುಜನ ಸಮಾಜ ಪಕ್ಷದ ಅಥೆರ್ ಜಮಾಲ್ ಲಾರಿ ಅವರು 33,766 ಮತಗಳನ್ನು ಪಡೆದಿದ್ದಾರೆ. ವಾರಾಣಸಿ ಕ್ಷೇತ್ರದಲ್ಲಿ 8478 ಮತಗಳು ನೋಟಾಕ್ಕೆ ಚಲಾವಣೆಯಾಗಿದೆ. ನೋಟಾ ನಾಲ್ಕನೇ ಸ್ಥಾನ ಪಡೆದಿದೆ.

  ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ವಾರಾಣಸಿಯಲ್ಲಿ ಸ್ಪರ್ಧಿಸಿದ್ದಾಗ 3.71,000 ಮತಗಳ ಅಂತದಲ್ಲಿ ಹಾಗೂ 2019ರಲ್ಲಿ 4,79,505 ಮತಗಳ ಅಂತದಲ್ಲಿ ಜಯಭೇರಿ ಭಾರಿಸಿದ್ದರು. ಆದರೆ 2024ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರ ಗೆಲುವಿನ ಅಂತರದಲ್ಲಿ ಭಾರಿ ಇಳಿಕೆಯಾಗಿದೆ.

  ಮಂಡಿ: ಮೊದಲ ಚುನಾವಣೆಯಲ್ಲೇ ಕಂಗನಾ ರಣಾವತ್ ಜಯಭೇರಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts