More

  ಅಮೇಠಿಯಲ್ಲಿ ಸ್ಮೃತಿ ಇರಾನಿಗೆ ಹೀನಾಯ ಸೋಲು: ಕಿಶೋರಿ ಲಾಲ್‌ ಶರ್ಮಾಗೆ ದಾಖಲೆಯ ಗೆಲುವು

  ಉತ್ತರ ಪ್ರದೇಶ: ಗಾಂಧಿ ಕುಟುಂಬದ ಭದ್ರಕೋಟೆ ಅಮೇಠಿಯಲ್ಲಿ ಸ್ಮೃತಿ ಇರಾನಿ ಸೋಲು ಕಂಡಿದ್ದಾರೆ. ಗಾಂಧಿ ಕುಟುಂಬದ ಬಲಗೈ ಬಂಟ ಕಿಶೋರಿ ಲಾಲ್‌ ಶರ್ಮಾ ಇಲ್ಲಿ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ.

  ಇದನ್ನೂ ಓದಿ: ಮಂಡಿ: ಮೊದಲ ಚುನಾವಣೆಯಲ್ಲೇ ಕಂಗನಾ ರಣಾವತ್ ಜಯಭೇರಿ!

  ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಅವರು 1,10,684 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಿಶೋರಿ ಲಾಲ್‌ ಅವರಿಗೆ 3,76,983 ಮತಗಳು ಬಿದ್ದರೆ, ಸ್ಮೃತಿ ಇರಾನಿಯವರಿಗೆ 2,66,299 ಮತಗಳು ಬಿದ್ದಿವೆ. ಇದು ಇನ್ನೂ ಬದಲಾಗಬಹುದು.

  ಉತ್ತರ ಪ್ರದೇಶದ 80 ಸಂಸದೀಯ ಕ್ಷೇತ್ರಗಳಲ್ಲಿ ಒಂದಾದ ಅಮೇಠಿ ಲೋಕಸಭಾ ಕ್ಷೇತ್ರವು ಐತಿಹಾಸಿಕವಾಗಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಬಿಜೆಪಿಯ ಕೇಂದ್ರ ಸಚಿವೆ ಸ್ಮೃತಿ ಇರಾನಿ 2019 ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಗಾಂಧಿ ಭದ್ರಕೋಟೆಯಾದ ಅಮೇಥಿಯಿಂದ ಆಗಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು 50 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು.

  lal

  ಸ್ಮೃತಿ ಇರಾನಿ ಅವರು ಗುಜರಾತ್‌ನಿಂದ 2011 ರಲ್ಲಿ ಮೊದಲ ಬಾರಿಗೆ ರಾಜ್ಯಸಭೆಗೆ ಪ್ರವೇಶಿಸಿದ್ದರು. ನಂತರ ಆಗಸ್ಟ್ 2017 ರಲ್ಲಿ ಮರು ಆಯ್ಕೆಯಾದರು. ಪ್ರಸ್ತುತ ಅವರು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಜವಳಿ ಖಾತೆ ಸಚಿವರಾಗಿದ್ದಾರೆ. ಮೇ 2014 ಮತ್ತು ಜುಲೈ 2016 ರ ನಡುವೆ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಜುಲೈ 2017 ರಿಂದ ಮೇ 2018 ರವರೆಗೆ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ನಿರ್ವಹಿಸಿದರು.

  ಅಮೇಥಿ ಕ್ಷೇತ್ರವು ಐದು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಮೇ 20 ರಂದು ಆರನೇ ಹಂತದಲ್ಲಿ ಅಮೇಥಿ ಸ್ಥಾನಕ್ಕೆ ಮತದಾನ ನಡೆಯಿತು. ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ವಿಚಾರದಲ್ಲಿ ಅಮೇಥಿ ಮತ್ತು ರಾಯ್ ಬರೇಲಿಯನ್ನು ಸಮಾನವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದ್ದರು.

  ಭದ್ರಕೋಟೆ ಮತ್ತೆ ಕೈ ವಶ: 2019ರಲ್ಲಿ ರಾಹುಲ್ ಗಾಂಧಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋಲುವವರೆಗೂ ಅಮೇಠಿ ಹೇಳಿ ಕೇಳಿ ಗಾಂಧಿ ಕುಟುಂಬದ ಭದ್ರಕೋಟೆಯಾಗಿತ್ತು. 2004 ರಿಂದ 2019ರವರೆಗೆ ರಾಹುಲ್‌ ಗಾಂಧಿ ಇದೇ ಅಮೇಠಿ ಲೋಕಸಭಾ ಕ್ಷೇತ್ರವನ್ನೇ ಪ್ರತಿನಿಧಿಸಿದ್ದರು.

  ಅವರು 2019ರಲ್ಲಿ ಅವರು ಇಲ್ಲಿ ಸೋಲು ಕಂಡರೆ ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದರು. ಈ ಬಾರಿ ಅವರು ರಾಹುಲ್‌ ಗಾಂಧಿ ಕೇರಳದ ವಯನಾಡ್‌ ಹಾಗೂ ಅವರ ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರ ದಿಂದ ಕಣಕ್ಕಿಳಿದಿದ್ದರು. ಇದರಲ್ಲಿ ಎರಡೂ ಕಡೆ ಅವರು ಗೆಲುವು ಸಾಧಿಸಿದ್ದಾರೆ. ಇತ್ತ ಅವರು ಪ್ರತಿನಿಧಿಸುತ್ತಿದ್ದ ಅಮೇಠಿಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದೂ, ಮೂರೂ ‘ಕೈ’ ಪಾಲಾಗಿದೆ.

  ಜೂನ್ 9 ರಂದು ಚಂದ್ರಬಾಬು ನಾಯ್ಡು ಸಿಎಂ ಆಗಿ ಪ್ರಮಾಣ ವಚನ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts