
ಎರ್ನಾಕುಲಂ: ಹಣಕಾಸು ವಂಚನೆ ಪ್ರಕರಣದಲ್ಲಿ ‘ಮಂಜುಮ್ಮೇಲ್ ಬಾಯ್ಸ್’ ಚಿತ್ರ ನಿರ್ಮಾಪಕರ ವಿರುದ್ಧ ಪೊಲೀಸ್ ತನಿಖಾ ವರದಿ ಸಲ್ಲಿಕೆಯಾಗಿದೆ. ಪೊಲೀಸರು ಹೈಕೋರ್ಟ್‌ಗೆ ಸಲ್ಲಿಸಿರುವ ತನಿಖಾ ವರದಿ ಪ್ರಕಾರ ವಂಚನೆ ಎಸಗಲು ನಿರ್ಮಾಪಕರು ಮೊದಲೇ ಪ್ಲಾನ್ ಮಾಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಚಿತ್ರೀಕರಣ ಪ್ರಾರಂಭವಾಗುವ ಮೊದಲೇ ಮೊದಲ ಶೆಡ್ಯೂಲ್ ಮುಗಿದಿದೆ ಎಂದು ದೂರುದಾರರನ್ನು ನಂಬಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಪರವ ಫಿಲ್ಮ್ ಕಂಪನಿ ಪಡೆದುಕೊಂಡು ಹಣದ ಒಂದು ಭಾಗವನ್ನು ದೂರುದಾರರಿಗೆ ಹಿಂದಿರುಗಿಸಿಲ್ಲ. ಪೊಲೀಸರ ವರದಿ ಪ್ರಕಾರ, ಚಿತ್ರಕ್ಕೆ 22 ಕೋಟಿ ರೂಪಾಯಿ ವೆಚ್ಚವಾಗಿದೆ ಎಂಬ ನಿರ್ಮಾಪಕರ ಹೇಳಿಕೆ ಸುಳ್ಳು ಎಂದು ತಿಳಿದುಬಂದಿದೆ.
ಮಂಜುಮ್ಮೇಲ್ ಬಾಯ್ಸ್ ಚಿತ್ರದ ನಿರ್ಮಾಪಕರ ವಿರುದ್ಧ ನಂಬಿಕೆ ದ್ರೋಹ ಪ್ರಕರಣದ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಎರ್ನಾಕುಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಪ್ರಕಾರ, ಪೊಲೀಸರು ನಿರ್ಮಾಪಕರಾದ ಶಾನ್ ಆಂಟನಿ, ಸೌಬಿನ್ ಶಾಹಿರ್ ಮತ್ತು ಬಾಬು ಶಾಹಿರ್ ವಿರುದ್ಧ ಕ್ರಿಮಿನಲ್ ಪಿತೂರಿ, ನಂಬಿಕೆ ದ್ರೋಹ ಮತ್ತು ಫೋರ್ಜರಿ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಈ ಹಿಂದೆ ಪರವ ಫಿಲಂಸ್ ಮತ್ತು ಶಾನ್ ಆಂಟೋನಿ ಅವರ ಬ್ಯಾಂಕ್ ಖಾತೆಗಳನ್ನು ನ್ಯಾಯಾಲಯ ಸ್ಥಗಿತಗೊಳಿಸಿತ್ತು. ನಿರ್ಮಾಪಕರ ಬಂಧನಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದ ನಂತರ ಪೊಲೀಸರು ಇದೀಗ ತನಿಖಾ ವರದಿ ಸಲ್ಲಿಸಿದ್ದಾರೆ.
ಮಂಜುಮ್ಮೇಲ್ ಬಾಯ್ಸ್ ಚಿತ್ರ ನಿರ್ಮಾಣಕ್ಕೆ 7 ಕೋಟಿ ರೂಪಾಯಿ ಖರ್ಚು ಮಾಡಿರುವ ಅರೂರಿನ ಸಿರಾಜ್ ವಲಿಯತ್ತರ ಹಮೀದ್ ಎಂಬವರು ದೂರು ದಾಖಲಿಸಿದ್ದಾರೆ. ಶೇ. 40 ರಷ್ಟು ಲಾಭದ ಭರವಸೆ ನೀಡಿದ ನಿರ್ಮಾಪಕರು ಲಾಭದ ಪಾಲು ಅಥವಾ ಹೂಡಿಕೆಯನ್ನು ಪಾವತಿಸದೆ ಹಣ ವಸೂಲಿ ಮಾಡಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಒಟಿಟಿ ಪ್ಲಾಟ್‌ಫಾರ್ಮ್ ರೆಟ್‌ಗಳನ್ನು ನೀಡುವ ಮೂಲಕ ಚಿತ್ರದ ನಿರ್ಮಾಪಕರು ಸುಮಾರು 20 ಕೋಟಿ ರೂಪಾಯಿ ಲಾಭ ಗಳಿಸಿದ್ದಾರೆ ಎಂದು ಸಿರಾಜ್ ಹೇಳುತ್ತಾರೆ. ಚಿತ್ರವು ಆರ್ಥಿಕ ಲಾಭವನ್ನು ಗಳಿಸಿದ್ದರೂ, ಒಪ್ಪಂದದ ಪ್ರಕಾರ ಹೂಡಿಕೆ ಅಥವಾ ಲಾಭದ ಪಾಲನ್ನು ಪಾವತಿಸಲಾಗಿಲ್ಲ ಎಂದು ಸಿರಾಜ್ ಆರೋಪಿಸಿದ್ದಾರೆ. ಆದರೆ, ಚಿತ್ರದ ಸಂಪೂರ್ಣ ಕಲೆಕ್ಷನ್ ಮೊತ್ತ ಇನ್ನೂ ಸಿಕ್ಕಿಲ್ಲ ಮತ್ತು ಲೆಕ್ಕಾಚಾರವೂ ನಡೆದಿಲ್ಲ ಎಂದು ನಿರ್ಮಾಪಕರು ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ.
ಅಂದಹಾಗೆ ಚಿದಂಬರಂ ನಿರ್ದೇಶನದ ‘ಮಂಜುಮ್ಮೇಲ್ ಬಾಯ್ಸ್’ ಬಾಕ್ಸ್ಆಫೀಸ್ನಲ್ಲಿ ಉತ್ತಮ ಹಣ ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಈ ಸಿನಿಮಾ 200 ಕೋಟಿ ರೂ. ಗಳಿಸಿದೆ ಎನ್ನಲಾಗುತ್ತಿದೆ. ತಮಿಳು ಮತ್ತು ತೆಲುಗಿನಲ್ಲೂ ಈ ಸಿನಿಮಾ ಹಿಟ್ ಆಗಿತ್ತು. ಸೌಬಿನ್ ಶಾಹೀರ್, ಶ್ರೀನಾಥ್ ಬಾಸಿಲ್, ಬಾಲು ವರ್ಗೀಸ್, ಗಣಪತಿ, ಲಾಲ್ ಜೂನಿಯರ್, ಚಂತು ಸಲೀಂಕುಮಾರ್, ಅಭಿರಾಮ್ ರಾಧಾಕೃಷ್ಣನ್, ದೀಪಕ್ ಪರಂಬೋಲ್, ಖಾಲಿದ್ ರೆಹಮಾನ್, ಅರುಣ್ ಕುರಿಯನ್, ವಿಷ್ಣು ರಘು ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. (ಏಜೆನ್ಸೀಸ್)
ಆನಂದ್ ನೀನು ನನ್ನ ಕುಟುಂಬದವನು ನನ್ನನ್ಯಾಕೆ ಇಕ್ಕಟ್ಟಿಗೆ ಸಿಲುಕಿಸುತ್ತೀಯಾ? ಕೊನೆಗೂ ನಿಜ ಒಪ್ಪಿಕೊಂಡ್ರಾ ರಶ್ಮಿಕಾ?
ಸ್ಟಾರ್ಕ್ಗೆ 24.75 ಕೋಟಿ ನಿಮ್ಗೆ ಮಾತ್ರ 55 ಲಕ್ಷ ರೂ. ಏಕೆ? ರಿಂಕು ಕೊಟ್ಟ ಉತ್ತರಕ್ಕೆ ತಲೆಬಾಗಿತು ಕ್ರೀಡಾಜಗತ್ತು!