More

    ಮ್ಯೂನಿಕ್ ನಗರಿಯ ಸಂಗೀತ ಪ್ರಿಯರನ್ನು ಮೋಡಿ ಮಾಡಿದ ಪ್ರವೀಣ್ ಗೋಡ್ಕಿಂಡಿ ಕೊಳಲು ವಾದನ

    ನಿಮ್ಫೆನ್ಬರ್ಗ್: ಖ್ಯಾತ ಕಲಾವಿದ ಪ್ರವೀಣ್ ಗೋಡ್ಕಿಂಡಿ ಅವರ ಕೊಳಲು ವಾದನ ನಿಮ್ಫೆನ್ಬರ್ಗ್ (Nymphenburger)ನಲ್ಲಿ ನಡೆಯಿತು. ಲಕ್ಷ್ಮಿ ಆಳ್ವಾರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಿರಿಗನ್ನಡ ಕೂಟ ಮ್ಯೂನಿಕ್ ನಗರದಲ್ಲಿ ಇದೇ ಮೊದಲ ಬಾರಿಗೆ ಕಾರ್ಯಕ್ರಮ ಆಯೋಜಿಸಿತ್ತು.

    ಪ್ರವೀಣ್ ಗೋಡ್ಕಿಂಡಿ ಅವರಿಂದ ಕೊಳಲು ವಾದನ ಸಂಗೀತಾಸಕ್ತರನ್ನು ಮೂಕ ವಿಸ್ಮಿತರನ್ನಾಗಿ ಮಾಡಿತು. ಪ್ರವೀಣ್ ಗೋಡ್ಕಂಡಿ ಅವರ ಕೊಳಲಿನ ವಾದನಕ್ಕೆ ತಬಲಾ ಮಾಸ್ಟರ್ ಅರುಪ್ ಸೇನ್ ಗುಪ್ತ ಹಾಗೂ ದತ್ತಾತ್ರೇಯ ದೇಸಾಯಿ ಸಾಥ್ ನೀಡಿದರು.

    ಇದನ್ನೂ ಓದಿ: ಪ್ರಧಾನಿ ಮೋದಿ ಬೆಂಗಳೂರು ಮೆಗಾ ರೋಡ್​ ಶೋ ಫೋಟೋ ಝಲಕ್​ ಇಲ್ಲಿದೆ…

    ಮನಗೆದ್ದ ರಾಗಮಾಲಿಕೆ

    ಮಿಶ್ರ ಪಹಾಡಿ ರಾಗದಲ್ಲಿ ಪ್ರಕೃತಿಯ ಸುಂದರ ಸೊಬಗನ್ನು ಕೊಳಲಿನ ಮೂಲಕ ಹೊರಸೂಸಿದ್ದು, ಹಲವಾರು ದೇಶೀಯ ಸ್ವರಗಳನ್ನು ನುಡಿಸುತ್ತ ಒಂದು ಹಂತದಲ್ಲಿ ಒಂದೇ ಕೈಯಲ್ಲಿ ಕೊಳಲನ್ನು ನುಡಿಸಿದ್ದು ಪ್ರೇಕ್ಷಕರನ್ನು ಸೆಳೆಯಿತು. ಮಿಶ್ರ ಪಹಾಡಿ ರಾಗದಲ್ಲಿ ವಿವಿಧ ಸ್ವರಸಂಯೋಜೋನೆಯಿರುವ ಹಲವಾರು ಜನಪ್ರಿಯ ಭಕ್ತಿಗೀತೆ, ಭಾವಗೀತೆ ಜನಪದದಿಂದ ಹಿಡಿದು ಕನ್ನಡ ಹಾಗೂ ಹಿಂದಿ ಚಲನಚಿತ್ರ ಗೀತೆಗಳ ರಾಗಮಾಲಿಕೆ ನುಡಿಸಿದರು.

    ಕಲಾವಿದರಿಂದ ಸಹಕಾರ

    ಆರಂಭದಲ್ಲಿ ಪಂಡಿತ್ ರವಿಶಂಕರ್ ಅವರಿಂದ ಸಂಯೋಜನೆಯಾದ ಪಿಲೂಯಿ ರಾಗದಿಂದ ಪ್ರಾರಂಭವಾದ ಲಾಲ್ ಗುಡಿ ಜಯರಾಮನ್ ಅರವರ ಮೋಹನ ಕಲ್ಯಾಣಿ ತಿಲ್ಲಾನ ರಾಗದೊಂದಿಗೆ ಸಂಗೀತ ಕಾರ್ಯಕ್ರಮ ನಡೆಯಿತು. ಸ್ಥಳೀಯ ಪ್ರತಿಭೆಗಳಾದ ಡಾ. ಮಹತಿ ಭಾರ್ಗವಪುರಿ(ಪಿಟೀಲು), ಅಮಿತ್ ನಾಯಕ್ (ಮ್ಯಾಂಡೋಲಿನ್) ಹಾಗೂ ಡಾ. ಬಾಲಕೃಷ್ಣ(ಮೃದಂಗ)ದಲ್ಲಿ ಸಹಕರಿಸಿದರು.

    ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಚಿತ್ರ ಬ್ಯಾನ್ ಮಾಡಲು ಸಾಕಷ್ಟು ಪ್ರಯತ್ನಗಳು ನಡೆದಿವೆ: ಕಂಗನಾ ರಣಾವತ್

    ಪ್ರವೀಣ್ ಗೋಡ್ಕಿಂಡಿ ಅವರ ಕೊಳಲು ವಾದನ ಕಾರ್ಯಕ್ರಮದಲ್ಲಿ ಭಾರತೀಯರಲ್ಲದೆ, ಜರ್ಮಿನಿ ಪ್ರಜೆಗಳು ಹಾಗೂ ವಿವಿಧ ಸಂಗೀತ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts