More

    ಆಗಿಲ್ಲದ ಪ್ರಶ್ನೆಗಳು ಈಗೇಕೆ? ಪ್ರಕಾಶ್​ ರೈ ಪ್ರಶ್ನೆ …

    ಹೈದರಾಬಾದ್​: ತೆಲುಗಿನ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷಗಿರಿಗೆ ಸ್ಪರ್ಧಿಸುತ್ತಿರುವ ಪ್ರಕಾಶ್​ ರೈ (ಪ್ರಕಾಶ್​ ರಾಜ್​), ಅಲ್ಲಿ ಕೆಲವು ವಿಷಯಗಳ ಬಗ್ಗೆ ತೀವ್ರ ಮುಜುಗರ ಎದುರಿಸುತ್ತಿದ್ದಾರೆ. ಪ್ರಮುಖವಾಗಿ, ಅವರು ಕನ್ನಡದವರಾದ್ದರಿಂದ ಅವರನ್ನು ಅಲ್ಲಿ ಹೊರಗಿನವರು ಎಂದು ನೋಡಲಾಗುತ್ತಿದೆ. ಅಷ್ಟೇ ಅಲ್ಲ, ಕಲಾವಿದರ ಸಂಘದ ಅಧ್ಯಕ್ಷಪಟ್ಟವನ್ನು ಹೊರಗಿನವರಿಗೆ ಬಿಟ್ಟುಕೊಡಬಾರದು ಎಂದು ಕಾರಣಕ್ಕೆ, ಅವರನ್ನು ಸೋಲಿಸುವುದಕ್ಕೆ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ.

    ಇದನ್ನೂ ಓದಿ: ಅನುಪಮ್​ ಖೇರ್ ಯಾರೂ ಅಂತಲೇ ಗೊತ್ತಿಲ್ಲವಂತೆ …

    ಈ ವಿಷಯ ಪ್ರಕಾಶ್​ ರೈಗೆ ಬೇಸರ ತರಿಸಿದೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ವಿಶಾಲ್​ ಎಂಬ ತೆಲುಗು ಮೂಲದ ನಟನೊಬ್ಬ ತಮಿಳುನಾಡಿನ ಕಲಾವಿದರ ಸಂಘದ ಅಧ್ಯಕ್ಷರಾಗಬೇಕಾದರೆ, ತಾವು ತೆಲುಗು ಕಲಾವಿದರ ಸಂಘದ ಅಧ್ಯಕ್ಷರಾಗುವುದಕ್ಕೆ ಏಕೆ ಸಾಧ್ಯವಿಲ್ಲ’ ಎಂದು ಪ್ರಶ್ನಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ತಮ್ಮನ್ನು ಹೊರಗಿನವರು ಎಂದು ಹೇಳುವವರ ಸಣ್ಣತನ ತೋರಿಸುತ್ತದೆ ಎಂದು ಹೇಳಿದ್ದಾರೆ. ‘ನಾನು ತೆಲಂಗಾಣದಲ್ಲಿ ಒಂದು ಹಳ್ಳಿಯನ್ನು ದತ್ತು ತೆಗೆದುಕೊಂಡಾಗ, ಯಾರೂ ನನ್ನನ್ನು ಹೊರಗಿನವನು ಎಂದಿಲ್ಲ. ನನ್ನ ಸಹಾಯಕರಿಗೆ ಹೈದರಾಬಾದ್​ನಲ್ಲಿ ಮನೆ ಕೊಡಿಸಿದಾಗ ಹೊರಗಿನವ ಎಂದು ಬೆಟ್ಟು ಮಾಡಿ ತೋರಿಸಲಿಲ್ಲ. ನನ್ನ ಮಗ ಹೈದರಾಬಾದ್​ನಲ್ಲಿ ಶಾಲೆಗೆ ಹೋಗುತ್ತಾನೆ. ನನ್ನ ಆಧಾರ ಕಾರ್ಡ್​ನಲ್ಲಿ ಇಲ್ಲಿನ ವಿಳಾಸವಿದೆ. ‘ಅಂತಪುರಂ’ ಎಂಬ ತೆಲುಗು ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. ತೆಲುಗು ಚಿತ್ರಗಳಲ್ಲಿನ ಅಭಿನಯಕ್ಕಾಗಿ ನನಗೆ ಒಂಬತ್ತು ನಂದಿ ಪ್ರಶಸ್ತಿಗಳು ಸಿಕ್ಕಿವೆ. ಇವೆಲ್ಲ ಆಗುವಾಗ ಬರದಿದ್ದ ಹೊರಗಿನ ಎಂಬ ಚರ್ಚೆ, ಈಗ್ಯಾಕೆ? ನನ್ನನ್ನು ಹೊರಗಿನವನು ಎಂದು ಹೇಳುವವರ ಸಂಕುಚಿತ ಮನೋಭಾವ ತೋರಿಸುತ್ತದೆ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ‘ಕ್ರಿಷ್ 4’ ಮೂಲಕ ಜಾದೂ ರೀಎಂಟ್ರಿ? ಬಾಲಿವುಡ್​ನಲ್ಲಿ ಹೀಗೊಂದು ಸುದ್ದಿ

    ಇಷ್ಟಕ್ಕೂ ಪ್ರಕಾಶ್​ ರೈ ಅವರಿಗೇಕೆ ತೆಲುಗು ಚಲನಚಿತ್ರ ಕಲಾವಿದರ ಸಂಘದ ಜವಾಬ್ದಾರಿ ಎಂಬ ಪ್ರಶ್ನೆ ಬರಬಹುದು. ಈ ಕುರಿತು ಮಾತನಾಡಿರುವ ಅವರು, ‘ಇದು ನಿನ್ನೆ-ಮೊನ್ನೆ ತೆಗೆದುಕೊಂಡ ನಿರ್ಧಾರವಲ್ಲ. ಒಂದು ವರ್ಷದಿಂದ ಅಳೆದು ತೂಗಿ ತೆಗೆದುಕೊಂಡ ನಿರ್ಧಾರ. ನಾನು ಚಿತ್ರರಂಗದಲ್ಲಿ ಮೂರು ದಶಕಗಳಿಂದ ಇದ್ದೇನೆ. ಚಿತ್ರರಂಗ ನನಗೆ ಎಲ್ಲವನ್ನೂ ಕೊಟ್ಟಿದೆ. ಆದರೆ, ಇತ್ತೀಚಿನ ಬೆಳವಣಿಗೆಗಳು ನನಗೆ ಈ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು. ನನಗೆ ಸುಮ್ಮನೆ ಮಾತನಾಡುವುದಕ್ಕೆ ಇಷ್ಟವಿಲ್ಲ. ಇಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕೊಡುವುದು ನನ್ನ ಮೊದಲ ಆದ್ಯತೆ. ಒಂದೊಳ್ಳೆಯ ತಂಡ ಕಟ್ಟಿಕೊಂಡಿದ್ದೇನೆ. ಗೆಲ್ಲುವ ವಿಶ್ವಾಸವಿದೆ’ ಎಂದು ಪ್ರಕಾಶ್​ ರೈ ಹೇಳಿದ್ದಾರೆ.

    ಬಿಗ್​ಬಾಸ್​ ಎರಡನೇ ಇನ್ನಿಂಗ್ಸ್​ ಆರಂಭದಲ್ಲೇ ಲ್ಯಾಗ್​ ಮಂಜುಗೆ ಶಾಕ್​ ಕೊಟ್ಟ ದಿವ್ಯಾ ಸುರೇಶ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts