'ಕ್ರಿಷ್ 4' ಮೂಲಕ ಜಾದೂ ರೀಎಂಟ್ರಿ? ಬಾಲಿವುಡ್​ನಲ್ಲಿ ಹೀಗೊಂದು ಸುದ್ದಿ

Hrithik Roshan - Krish 4 - Final
Published on

ಮುಂಬೈ: ಹೃತಿಕ್​ ರೋಶನ್​ ಅಭಿನಿಯದ 'ಕ್ರಿಷ್​ 4' ಚಿತ್ರದ ಬಗ್ಗೆ ಕಳೆದ ಎಂಟು ವರ್ಷಗಳಿಂದ ಸುದ್ದಿ ಕೇಳಿಬರುತ್ತಲೇ ಇವೆ. ಆದರೆ, ಇದುವರೆಗೂ ಚಿತ್ರ ಸೆಟ್ಟೇರಿಲ್ಲ. ಹೃತಿಕ್ ರೋಶನ್​ ಅಭಿಮಾನಿಗಳು ಇನ್ನೇನು ಆ ಚಿತ್ರದ ಬಗ್ಗೆ ಆಸೆ ಬಿಡಬೇಕು ಎನ್ನುವಷ್ಟರಲ್ಲಿ ಹೃತಿಕ್​ ಒಂದು ಸುದ್ದಿ ಕೊಟ್ಟಿದ್ದಾರೆ.

'ಕ್ರಿಷ್​' ಫ್ರಾಂಚೈಸಿಯ ಮೊದಲ ಚಿತ್ರ ಬಿಡುಗಡೆಯಾಗಿ 15 ವರ್ಷಗಳಾಗಿವೆ. 2006ರ ಜೂನ್​ 23ರಂದು ಈ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಿ, ಸೂಪರ್​ ಹಿಟ್​ ಆಗಿತ್ತು. ಈ ಚಿತ್ರದ ಮೂಲಕ ಭಾರತಕ್ಕೆ ಒಬ್ಬ ಹೊಸ ಸೂಪರ್​ ಹೀರೋ ಸಿಕ್ಕಂತಾಗಿತ್ತು. 'ಕ್ರಿಷ್​​' ನಂತರ 'ಕ್ರಿಷ್ 3' ಚಿತ್ರ ಬಂತು. ಅದು ಸಹ ತಕ್ಕಮಟ್ಟಿಗೆ ಯಶಸ್ವಿಯಾಯಿತು. ಈ ಸರಣಿಯ ಮುಂದಿನ ಚಿತ್ರ ಯಾವಾಗ ಎಂಬ ಪ್ರಶ್ನೆಗೆ ಇದೀಗ ಹೃತಿಕ್​ ರೋಶನ್​ ಉತ್ತರ ಕೊಟ್ಟಿದ್ದಾರೆ.

'ಕ್ರಿಷ್​​' ಸರಣಿಗೆ 15 ವರ್ಷಗಳಾದ ಸಂತಸದಲ್ಲಿ ಸೋಷಿಯಲ್​ ಮೀಡಿಯಾದಲ್ಲೊಂದು ವೀಡಿಯೋ ಹಂಚಿಕೊಂಡಿರುವ ಹೃತಿಕ್​, 'ಹಳೆಯದು ಈಗ ಮುಗಿದ ಕಥೆ. ಭವಿಷ್ಯದಲ್ಲಿ ಏನಿದೆಯೋ ನೋಡೋಣ' ಎಂದು ಬರೆದುಕೊಂಡಿದ್ದಾರೆ. ಚಿತ್ರದ ಮುಂದಿನ ಭಾಗ ಯಾವಾಗ ಶುರುವಾಗುತ್ತದೆ? ಅದರ ಕಥೆ ಏನಿರಬಹುದು? ಈ ಚಿತ್ರದ ವಿಶೇಷತೆ ಏನು? ಎಂಬ ವಿಷಯಗಳ ಕುರಿತು ಹೃತಿಕ್​ ಯಾವುದೇ ರಹಸ್ಯ ಬಿಟ್ಟುಕೊಟ್ಟಿಲ್ಲ.

ಮೂಲಗಳ ಪ್ರಕಾರ, ಹೃತಿಕ್​ ಪೋಸ್ಟ್​ನಲ್ಲೊಂದು ಗೂಡಾರ್ಥವಿದೆಯಂತೆ. ಅದೇನೆಂದರೆ, ಈ ಚಿತ್ರದಲ್ಲಿ ಜಾದೂ ಎಂಬ 'ಕೋಯಿ ಮಿಲ್​ ಗಯಾ' ಚಿತ್ರದ ಏಲಿಯನ್​ ಪುನಃ ಎಂಟ್ರಿ ಕೊಡಲಿದೆಯಂತೆ. ಒಬ್ಬ ಸೂಪರ್​ ಹೀರೋ ಜತೆಗೆ ಒಂದು ಏಲಿಯನ್​ ಸೇರಿಕೊಂಡರೆ, ಏನೆಲ್ಲಾ ಜಾದೂ ಆಗುತ್ತದೆ ಎಂಬುದು ಚಿತ್ರದ ಕಥೆಯಂತೆ.

ಮೊದಲೇ ಹೇಳಿದಂತೆ, ಇದ್ಯಾವ ವಿಷಯವನ್ನೂ ಹೃತಿಕ್​ ಅಥವಾ ಚಿತ್ರತಂಡದವರು ಹೇಳಿಕೊಂಡಿಲ್ಲ. ಆದರೂ ಈ ಅಂತೆ-ಕಂತೆಗಳು ಎಲ್ಲಿಂದ ಹುಟ್ಟಿಕೊಂಡಿವೆಯೋ ಗೊತ್ತಿಲ್ಲ. ಆದರೆ, ಒಂದಂತು ಸತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net