More

    ಆಲೂಗಡ್ಡೆ ಬೆಳೆಯಲು ಸೂಕ್ತ ಕಾಲ ಯಾವುದು? ಮಣ್ಣು ಹಾಗೂ ನಾಟಿಗೆ ಸೂಕ್ತ ತಳಿಗಳಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ….

    ಪ್ರಶ್ನೆ: ಆಲೂಗಡ್ಡೆ ಬೆಳೆಯಲು ಸೂಕ್ತ ಕಾಲ ಯಾವುದು? ಮಣ್ಣು ಹಾಗೂ ನಾಟಿಗೆ ಸೂಕ್ತ ತಳಿಗಳಾವುವು?

    | ರಾಮಚಂದ್ರ ಕೋಲಾರ

    ಉತ್ತರ: ಆಲೂಗಡ್ಡೆಯು ಮುಖ್ಯವಾಗಿ ತಂಪು ಹವಾಗುಣ ಬಯಸುವ ಬೆಳೆಯಾಗಿದ್ದು, ಮಳೆಯಾಶ್ರಿತ ಮುಂಗಾರು ಬೆಳೆಯಾಗಿ ಮತ್ತು ನೀರಾವರಿ ಸೌಲಭ್ಯವಿದ್ದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆಯುತ್ತಾರೆ. ಅಂದರೆ ಮೇ-ಜೂನ್ ತಿಂಗಳಲ್ಲಿ ಬಿತ್ತನೆ ಮಾಡುವುದರಿಂದ ತಡವಾಗಿ ಬರುವ ಅಂಗಮಾರಿ ರೋಗ ಕಡಿಮೆಯಾಗಿ ಇಳುವರಿ ಹೆಚ್ಚಾಗುತ್ತದೆ ಮತ್ತು ನೀರಾವರಿ ಸೌಲಭ್ಯವಿದ್ದಲ್ಲಿ ಅಕ್ಟೋಬರ್- ನವೆಂಬರ್ ತಿಂಗಳಲ್ಲೂ ಬಿತ್ತನೆ ಮಾಡಬಹುದು. ಈ ಬೆಳೆಗೆ 16-240 ಸೆಲ್ಸಿಯಸ್ ಉಷ್ಣತೆ ಇದ್ದರೆ ಮಾತ್ರ ಚೆನ್ನಾಗಿ ಗಡ್ಡೆ ಕಟ್ಟುತ್ತದೆ.

    ಮಣ್ಣು: ಈ ಬೆಳೆಯನ್ನು ಫಲವತ್ತಾದ ಕಪ್ಪು ಹಾಗೂ ಮರಳು ಮಿಶ್ರಿತ ನೀರು ಬಸಿದು ಹೋಗುವಂತಹ ಕೆಂಪು ಮಣ್ಣಿನಲ್ಲಿ ಬೆಳೆಯಬಹುದು. ಸವಳು ಮತ್ತು ಜೇಗು ಪ್ರದೇಶಗಳಲ್ಲಿ ಈ ಬೆಳೆಯನ್ನು ಬೆಳೆಯುವುದು ಯೋಗ್ಯವಲ್ಲ. ಮಣ್ಣಿನ ರಸಸಾರ 5.5 ರಿಂದ 7.5 ಇದ್ದರೆ ಅನುಕೂಲ.

    ನಾಟಿಗೆ ಬಳಸಬಹುದಾದ ತಳಿಗಳು: ಕುಫ್ರಿ ಚಂದ್ರಮುಖಿ, ಕುಪ್ಪಿ ಜ್ಯೋತಿ, ಕುಪ್ರಿ ಸಿಂಧೂರಿ, ಕುಫ್ರಿ ಪುಕರಾಜ್, ಕುಫಿ ಜವಾಹರ್, ಕುಫ್ರಿ ಲವಕರ್, ಕುಫ್ರಿ ಬಾದಶಹಾ, ಕುಪ್ಲಿ ಕುಬೇರ ಹಾಗೂ ಕುಫ್ರಿ ಸೂರ್ಯ, ಪ್ರಮಾಣೀಕೃತ, ರೋಗಮುಕ್ತ ಹಾಗೂ ಮೊಳಕೆ ಒಡೆಯಲು ಪ್ರಾರಂಭವಾದ ಬೀಜದ ಗಡ್ಡೆಗಳನ್ನು ಬಿತ್ತನೆಗೆ ಆಯ್ಕೆ ಮಾಡಬೇಕು.

    | ಡಾ. ಶಾಲಿನಿ ಎಂ. ತೋಟಗಾರಿಕೆ ತಜ್ಞರು

    ಪ್ರಶ್ನೆ: ಕೆಲವು ಮಾವಿನ ತಳಿಗಳಲ್ಲಿ ಒಂದು ವರ್ಷ ಹೂ ಫಲವತ್ತಾಗಿ ಬಿಟ್ಟು ನಂತರದ ವರ್ಷದಲ್ಲಿ ಹೂಬಿಡುವುದು ಕಡಿಮೆಯಾಗುತ್ತಿದ್ದು, ಇದನ್ನು ತಡೆಯುವುದು ಹೇಗೆ?

    | ಸೋಮಣ್ಣ ಮಾಗಡಿ

    ಉತ್ತರ: ಮಾವಿನಲ್ಲಿ ಎರಡು ವರ್ಷಗಳು ಹೆಚ್ಚು ಇಳುವರಿ ಕೊಟ್ಟು ನಂತರದ ವರ್ಷದಲ್ಲಿ ಇಳುವರಿ ಕಡಿಮೆಯಾಗುವುದು ಪ್ರಕೃತಿದತ್ತ ನಿಯಮ. ಇದನ್ನು ತಡೆಯಲು ಮಾವು ಹೂ ಬಿಡುವ ಮೂರು ತಿಂಗಳ ಮುಂಚೆ 5 ಮಿ.ಲೀ. ಪ್ಯಾಕ್ಲೋಬುಟಾಜಾಲ್ (Paclobutrazol) ಅನ್ನು 10 ಲೀಟರ್ ನೀರಿನಲ್ಲಿ ಬೆರೆಸಿ ಗಿಡದ ಪಾತಗಳಿಗೆ 90 ಸೆಂ.ಮೀ. ದೂರದಲ್ಲಿ ಹಾಕುವುದರಿಂದ ಪ್ರತಿ ವರ್ಷ ಹೂಬಿಡುವಂತೆ ಮಾಡಬಹುದು.
    | ಡಾ. ಬಿ.ಮೋಹನ್ ರಾಜು ಬೆಳೆ ಶರೀರಕ್ರಿಯಾಶಾಸ್ತ್ರ ವಿಜ್ಞಾನಿ

    ಪ್ರಶ್ನೆ: ಕೋಸು ಬೆಳೆಯಲ್ಲಿ ಕಪ್ಪು ಕೊಳೆರೋಗ ಕಂಡು ಬರುತ್ತಿದ್ದು, ಅದನ್ನು ತಡೆಯುವುದು ಹೇಗೆ?

    | ಸಂಜನಾ ಕೋಲಾರ

    ಉತ್ತರ: ದುಂಡಾಣುಗಳು ಮೊದಲಿಗೆ ಎಲೆಯ ಅಂಚಿನ ಭಾಗದಲ್ಲಿ ಹಳದಿ ಬಣ್ಣದ ‘V’ ಆಕಾರದ ಚುಕ್ಕೆಗಳಾಗಿ ಕಾಣಿಸುತ್ತವೆ. ನಂತರ ಎಲೆಯ ನರಗಳು, ಕಂದು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ರೋಗದ ತೀವ್ರತೆ ಹೆಚ್ಚಾದಾಗ ಎಲೆಗಳು ಒಣಗುತ್ತವೆ.

    ನಿರ್ವಹಣಿ: ಈ ರೋಗವನ್ನು ತಡೆಗಟ್ಟಲು ವರುಷಕ್ಕೊಮ್ಮೆ ಬೆಳೆ ಪರಿವರ್ತನೆ ಮಾಡಬೇಕು. ದುಂಡಾಣು ಕಪ್ಪು ರೋಗ ತಡೆಯಲು 0.5 ಗ್ರಾಂ ಸ್ಟೆಪೊಸೈಕ್ಲಿನ್ ಅಥವಾ 0.5 ಗ್ರಾಂ ಕೆ.ಸೈಕ್ಲಿನ್ ಬೀಜೋಪಚಾರ ಮಾಡುವುದು (ಒಂದು ಗಂಟೆಯ ಕಾಲ ನೆನೆಸಿ ನಂತರ ಬೀಜವನ್ನು ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು) ಕಪ್ಪು ಕೊಳೆರೋಗದ ಬಾಧೆ ಕಂಡಾಗ ಪ್ರತಿ ಲೀಟರ್ ನೀರಿನಲ್ಲಿ 0.1 ಮಿ.ಗ್ರಾಂ ಟೆಟ್ರಾಸೈಕ್ಲಿನ್ ಹೈಡಾಕ್ರೆಡ್ ಅಥವಾ 0.5 ಗ್ರಾಂ ಸ್ಟೆಫೋಮೈಸಿನ್ ಸಲ್ವೇಟ್ ಮತ್ತು 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಬೆರೆಸಿ ಸಿಂಪಡಿಸಬೇಕು.

    | ಪ್ರಿಯಾಂಕಾ ಬಿ. ಸಸ್ಯರೋಗ ತಜ್ಞರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts