ಮೈಸೂರಿನಲ್ಲಿ ವಿಷಾನಿಲ ಸೋರಿಕೆ; ಪ್ರಜ್ಞೆ ತಪ್ಪಿ ಬಿದ್ದರು ಮೂವರು ಅಗ್ನಿಶಾಮಕ ಸಿಬ್ಬಂದಿ: ಸುತ್ತಮುತ್ತ ಆತಂಕದ ವಾತಾವರಣ

Untitled 1
ಸಮೀಪದ ರಸ್ತೆ ಬಂದ್ ಮಾಡಿರುವುದು
Published on

ಮೈಸೂರು: ತಿರುಮಕೂಡಲು ನರಸೀಪುರ ಪಟ್ಟಣದ ವಾಟರ್ ಫಿಲ್ಟರ್ ಹೌಸ್​ನಲ್ಲಿ ವಿಷ ಅನಿಲ ಸೋರಿಕೆ ಉಂಟಾಗಿದ್ದು, ತುರ್ತು ಕಾರ್ಯಾಚರಣೆಗೆ ಬಂದಿದ್ದ ಅಗ್ನಿಶಾಮಕ ಸಿಬ್ಬಂದಿ ಪೈಕಿ ಮೂವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ವಿಷ ಅನಿಲ ಸೋರಿಕೆ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಆತಂಕ ಉಂಟಾಗಿದ್ದು, ಫಿಲ್ಟರ್​ ಹೌಸ್ ರಸ್ತೆಯನ್ನೇ ಬಂದ್ ಮಾಡಿ, ಸೋರಿಕೆ ತಡೆ ಕಾರ್ಯಾಚರಣೆಗೆ ಹರಸಾಹಸ ಕೈಗೊಳ್ಳಲಾಗುತ್ತಿದೆ.

ವಿಷ ಅನಿಲ ಸೋರಿಕೆಗೆ ಕಾರಣ ಏನು ಎಂಬುದು ಇನ್ನೂ ಖಚಿತಗೊಂಡಿಲ್ಲ. ಸೋರಿಕೆ ಮುಂದುವರಿದಿದ್ದು, ತಡೆಯಲು ಅಗ್ನಿಶಾಮಕ ಸಿಬ್ಬಂದಿ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದು, ಅವರನ್ನು ಚದುರಿಸಲು ಪೊಲೀಸರು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net