More

    ಟಿಪ್ಪು ಜಯಂತಿ ಕರಾಳ ಘಟನೆಗೆ ನಾಳೆ ಆರು ವರ್ಷ; ಕೊಡಗು ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ..

    ಕೊಡಗು: ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಮಡಿಕೇರಿಯಲ್ಲಿ ಗಲಭೆ ನಡೆದು ಇಬ್ಬರ ಹತ್ಯೆಯಾದ ಪ್ರಕರಣ ಸಂಭವಿಸಿ ನಾಳೆಗೆ ಆರು ವರ್ಷವಾಗಲಿದೆ. ಅಂದಿನ ಕರಾಳ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಮಡಿಕೇರಿಯ ಪ್ರಮುಖ ಬೀದಿಗಳಲ್ಲಿ ಇಂದೇ ಸಂಚರಿಸಲಾರಂಭಿಸಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸಿದ್ದಾರೆ.

    2015ರಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಉಂಟಾದ ಪರ-ವಿರೋಧ ಸಂಘರ್ಷ ಬಳಿಕ ಗಲಭೆಗೆ ತಿರುಗಿತ್ತು. ಈ ಸಂದರ್ಭದಲ್ಲಿ ಕುಟ್ಟಪ್ಪ ಹಾಗೂ ಶಾಹುಲ್ ಹಮೀದ್ ಅವರ ಹತ್ಯೆಯಾಗಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತ್ತು.

    ಇದನ್ನೂ ಓದಿ: ಜೀವಂತ ಹೂತುಹೋದ ಕಾರ್ಮಿಕ; ಜೆಸಿಬಿ ಚಾಲಕನ ಅಚಾತುರ್ಯಕ್ಕೆ ಬಲಿಯಾಯಿತು ಜೀವ..

    ಆ ಕರಾಳ ದಿನದ ಹಿನ್ನೆಲೆಯಲ್ಲಿ ಹಿಂದೂಪರ ಕಾರ್ಯಕರ್ತರು ನಾಳೆ ಮಡಿಕೇರಿಯಲ್ಲಿ ಹುತಾತ್ಮ ಕುಟ್ಟಪ್ಪ ಅವರ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಇಂದೇ ಹೆಚ್ಚಿನ ನಿಗಾ ವಹಿಸಿದ್ದಾರೆ. ಆರ್​ಎಎಫ್​ ಮತ್ತು ಡಿಎಆರ್ ತುಕಡಿಗಳು ಕೂಡ ಪಥ ಸಂಚಲನ ನಡೆಸಿ ಸಾರ್ವಜನಿಕರಿಗೆ ಅಭಯವನ್ನು ನೀಡಿದ್ದಲ್ಲದೆ, ಕಿಡಿಗೇಡಿಗಳಿಗೆ ಪರೋಕ್ಷವಾಗಿ ಎಚ್ಚರಿಕೆಯನ್ನೂ ರವಾನಿಸಿವೆ.

    ಇದನ್ನೂ ಓದಿ: ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

    ಜತೆಗೆ ನಾಳೆ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಬಿ.ಸಿ.ಸತೀಶ ಆದೇಶ ಹೊರಡಿಸಿದ್ದಾರೆ. ಬೆಳಗ್ಗೆ 6ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ವಿಧಿಸಲಾಗಿದೆ. ನಿಗದಿತ ಕಾರ್ಯಕ್ರಮ ಹೊರತುಪಡಿಸಿ ಬೇರೆ ಸಭೆ, ಸಮಾರಂಭ, ಮೆರವಣಿಗೆ ನಡೆಸುವಂತಿಲ್ಲ ಎಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ.

    ಜನಮಾನಸದಲ್ಲಿ ಶಂಕರ್ ನಾಗ್ ಸದಾ ಜೀವಂತ; ಜನ್ಮದಿನದಂದು ಸ್ಮರಿಸಿಕೊಂಡ ಸ್ಯಾಂಡಲ್​ವುಡ್, ಅಭಿಮಾನಿ ವೃಂದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts