More

    ನಾನು ಮೋದಿ ಹತ್ರವೇ ಮಾತಾಡಿ ಬಂದೆ ಎಂದ ತುಳಸಿ ಗೌಡ ಹೇಳಿದ್ದೇನು?; ಪದ್ಮಶ್ರೀ ಪುರಸ್ಕೃತೆ ದೆಹಲಿಯಲ್ಲಿ ಮಿಸ್​ ಮಾಡ್ಕೊಂಡಿದ್ದೇನು?

    ದೆಹಲಿ: ರಾಷ್ಟ್ರಪತಿ ಭವನದಲ್ಲಿ ನಿನ್ನೆ ಪದ್ಮಶ್ರೀ ಪುರಸ್ಕೃತರಾದ ಪೈಕಿ ಹೆಚ್ಚು ಗಮನ ಸೆಳೆದವರಲ್ಲಿ ಅಂಕೋಲಾದ ವೃಕ್ಷಮಾತೆ ತುಳಸಿ ಗೋವಿಂದ ಗೌಡ ಕೂಡ ಒಬ್ಬರು. ನಿನ್ನೆ ಅವರು ಬರಿಗಾಲಿನಲ್ಲೇ ರಾಷ್ಟ್ರಪತಿಯವರ ಬಳಿಗೆ ತೆರಳಿ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.

    ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಾಗೂ ಮಾತಿಗೂ ಅವಕಾಶ ಸಿಕ್ಕ ಖುಷಿಯನ್ನು ಆ ಬಳಿಕ ಹಂಚಿಕೊಂಡಿರುವ ತುಳಸಿ ಗೌಡ ರಾಷ್ಟ್ರ ರಾಜಧಾನಿಯಲ್ಲೂ ತಾವು ರಾಜ್ಯ ಭಾಷೆ ಕನ್ನಡವನ್ನು ಮಿಸ್​ ಮಾಡಿಕೊಂಡಿದ್ದನ್ನೂ ಹೇಳಿಕೊಂಡಿದ್ದಾರೆ. ಪ್ರಶಸ್ತಿ ಸ್ವೀಕಾರ, ಪ್ರಧಾನಿ ಭೇಟಿ ಎಲ್ಲದರ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ತುಳಸಿ ಗೌಡ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಟಿಪ್ಪು ಜಯಂತಿ ಕರಾಳ ಘಟನೆಗೆ ನಾಳೆ ಆರು ವರ್ಷ; ಕೊಡಗು ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ..

    ನಾನು ಮೋದಿ ಹತ್ರವೇ ಮಾತಾಡ್ಕೊಂಡ್ ಬಂದೆ, ಅವರು ಎಲ್ಲರಿಗೂ ನಮಸ್ಕಾರ ಮಾಡ್ತ ಮಾತಾಡ್ಸಿದ್ರು. ನಾನು ಅವರ ಕೈ ಮುಟ್ಟಿ ನಮಸ್ಕಾರ ಮಾಡ್ದೆ. ನಾನು ಗಿಡ ನೆಡುತ್ತೇನೆ ಅಂದೆ, ಕೇಳೋಕೆ ಅವರಿಗೆ ಕನ್ನಡ ಬರೋಲ್ಲ, ಅದ್ಕೆ ನಾನೇ ಹೇಳ್ದೆ. ನಾನು ಹೇಳಿದ್ದಕ್ಕೆ ಅವರಿಗೆ ನಗೆ ಬರ್ತಿತ್ತು, ಅವರು ಹೇಳಿದ್ದಕ್ಕೆ ನನಗೆ ಬರ್ತಿತ್ತು, ಅವರು ಏನು ಹೇಳ್ತಿದ್ರೋ ನನಗೆ ಅರ್ಥ ಆಗಿಲ್ಲ.. ಎಂದು ತುಳಸಿ ಗೌಡ ದೆಹಲಿಯಲ್ಲಿ ಕನ್ನಡವನ್ನು ಮಿಸ್​ ಮಾಡ್ಕೊಂಡ ಅನುಭವವನ್ನು ಹಂಚಿಕೊಂಡಿದ್ದಾರೆ.

    ಜನಮಾನಸದಲ್ಲಿ ಶಂಕರ್ ನಾಗ್ ಸದಾ ಜೀವಂತ; ಜನ್ಮದಿನದಂದು ಸ್ಮರಿಸಿಕೊಂಡ ಸ್ಯಾಂಡಲ್​ವುಡ್, ಅಭಿಮಾನಿ ವೃಂದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts