ಪ್ರಧಾನಿ ಮೋದಿ, ಝೆಲೆನ್ಸ್ಕಿಮಾತುಕತೆ: ನಮಗೆ ಭಾರತದ ಬೆಂಬಲ ಮುಖ್ಯ ಎಂದ ಯುಕ್ರೇನ್​ ಅಧ್ಯಕ್ಷ| Narendra Modi

zelenskyy
Published on

Narendra Modi: ಯುಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿ ಕರೆ ಮೂಲಕ ಸೋಮವಾರ (ಆಗಸ್ಟ್​,11) ಮಾತುಕತೆ ನಡೆಸಿದ್ದಾರೆ.

ಈ ಬಗ್ಗೆ ಎಕ್ಸ್​ ಪೋಸ್ಟ್​ ಮಾಡಿರುವ ಝೆಲೆನ್ಸ್ಕಿ, ನಮ್ಮ ಶಾಂತಿ ಪ್ರಯತ್ನಗಳನ್ನು ಭಾರತ ಬೆಂಬಲಿಸುವುದು ಮುಖ್ಯ ಮತ್ತು ಉಕ್ರೇನ್‌ಗೆ ಸಂಬಂಧಿಸಿದ ಎಲ್ಲವನ್ನೂ ಉಕ್ರೇನ್‌ ನಿರ್ಧರಿಸಬೇಕು ಎಂಬ ನಿಲುವನ್ನು ಸ್ಪಷ್ಟಪಡಿಸಿದರು.

ಈ ಯುದ್ಧದ ಮುಂದುವರಿಕೆಗೆ ಹಣಕಾಸು ಒದಗಿಸುವ ಸಾಮರ್ಥ್ಯವನ್ನು ಕಡಿಮೆ ಮಾಡಲು ರಷ್ಯಾದ ಇಂಧನ, ವಿಶೇಷವಾಗಿ ತೈಲದ ರಫ್ತನ್ನು ಮಿತಿಗೊಳಿಸುವುದು ಅಗತ್ಯವಾಗಿದೆ ಎಂದು ನಾನು ಗಮನಿಸಿದ್ದೇನೆ ಎಂದು ಝೆಲೆನ್ಸ್ಕಿ ಹೇಳಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ, ಯುಕ್ರೇನಿಯನ್ ಅಧ್ಯಕ್ಷರೊಂದಿಗಿನ ಸಂಭಾಷಣೆಯನ್ನು ಎಕ್ಸ್​ನಲ್ಲಿ ಹಂಚ್ಚಿಕೊಂಡಿರುವ ಮೋದಿ, ಸಂಘರ್ಷದ ಆರಂಭದಿಂದ ನಾವು ಶಾಂತಿಯುತ ಪರಿಹಾರದ ಅಗತ್ಯತೆಯ ಕುರಿತು ಭಾರತದ ಸ್ಥಿರ ನಿಲುವನ್ನು ನಾನು ತಿಳಿಸಿದ್ದೇನೆ. ಈ ನಿಟ್ಟಿನಲ್ಲಿ ಭಾರತವು ಸಾಧ್ಯವಿರುವ ಎಲ್ಲ ಕೊಡುಗೆಗಳನ್ನು ನೀಡಲು ಮತ್ತು ಉಕ್ರೇನ್‌ನೊಂದಿಗಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಮತ್ತು ಯುದ್ಧ ಯಂತ್ರಕ್ಕೆ ಇಂಧನ ತುಂಬಿಸಿದ್ದಕ್ಕಾಗಿ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್ಚುವರಿಯಾಗಿ ಶೇಕಡಾ 25 ರಷ್ಟು ಸುಂಕವನ್ನು ವಿಧಿಸಿದ್ದಾರೆ.

ಟ್ರಂಪ್ ಸುಂಕ ನೀತಿ ಪ್ರತಿಕ್ರಿಯಿಸಿರುವ ಮೋದಿ, ಆರ್ಥಿಕ ಪರಿಣಾಮಗಳ ಬೆಲೆ ತೆರಬೇಕಾದರೂ ಸಹ, ಭಾರತ ತನ್ನ ರೈತರ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net