

Rohit Sharma: 2027ರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಡಬೇಕು ಎಂದು ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಹೇಳಿದ್ದಾರೆ.
ಈ ಬಗ್ಗೆ ಐಎಎನ್‌ಎಸ್ ಜತೆ ಮಾತನಾಡಿದ ಲಾಡ್, ರೋಹಿತ್ ಶರ್ಮಾ ಖಂಡಿತವಾಗಿಯೂ 2027ರ ಏಕದಿನ ವಿಶ್ವಕಪ್ ಆಡಬೇಕು. ಟ್ರೋಫಿ ಗೆಲ್ಲುವುದು ಅವರ ಕನಸಾಗಿತ್ತು, ಮತ್ತು 2011ರ ವಿಜೇತ ತಂಡದ ಭಾಗವಾಗಲು ಅವರಿಗೆ ಅವಕಾಶ ಸಿಕ್ಕಿರಲಿಲ್ಲ ಎಂದು ತಿಳಿಸಿದರು.
ಅಲ್ಲದೆ, ಮುಂದೂವರೆದು ಮಾತನಾಡಿದ ರೋಹಿತ್ ಬ್ಯಾಲ್ಯದ ಕೋಚ್, ರೋಹಿತ್ ಭವಿಷ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ರೋಹಿತ್ ಭಾರತ ತಂಡವನ್ನು ಮುನ್ನಡೆಸಬೇಕೆ ಅಥವಾ ಬೇಡವೇ ಎಂಬುದನ್ನು ಬಿಸಿಸಿಐ ಮತ್ತು ಆಯ್ಕೆದಾರರು ನಿರ್ಧರಿಸಬೇಕು. ಆದರೆ, ರೋಹಿತ್ ಇನ್ನೂ 2027ರ ವಿಶ್ವಕಪ್ ತಂಡದ ಭಾಗವಾಗಬೇಕೆಂಬ ಹಸಿವು ಮತ್ತು ದೃಢಸಂಕಲ್ಪ ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
2025 ಆರಂಭದಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಮುಂಡಿಗೇರಿಸಿಕೊಂಡಿತ್ತು. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಮೇ ತಿಂಗಳಲ್ಲಿ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಕಳೆದ ವರ್ಷ ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಗೆಲುವಿನ ನಂತರ 38 ವರ್ಷದ ರೋಹಿತ್ ಟಿ20 ಕ್ರಿಕೆಟ್‌ಗೆ ಗುಡ್ ಬೈ ಹೇಳಿದರು.
ಭಾರತದ ಪರ 273 ಏಕದಿನ ಪಂದ್ಯಗಳಲ್ಲಿ, ರೋಹಿತ್ 48.76 ಸರಾಸರಿಯಲ್ಲಿ 11,168 ರನ್ ಗಳಿಸಿದ್ದಾರೆ, ಇದರಲ್ಲಿ 32 ಶತಕಗಳು ಮತ್ತು 58 ಅರ್ಧಶತಕಗಳು ಸೇರಿವೆ. ಒನ್ಡೇ ಮಾದರಿಯಲ್ಲಿ ಮೂರು ದ್ವಿಶತಕಗಳನ್ನು ಗಳಿಸಿದ ವಿಶಿಷ್ಟ ದಾಖಲೆಯನ್ನು ಹಿಟ್ಮ್ಯಾನ್ ಹೊಂದಿದ್ದಾರೆ.(ಏಜೆನ್ಸೀಸ್)