“ನನ್ನ ಹೆಂಡತಿ ನನ್ನನ್ನು ಸೋಲಿಸಿದಳು” ಎಂದು ಟ್ವೀಟ್ ಮಾಡಿದ ಭಾರತದಲ್ಲಿನ ಜಪಾನ್ ರಾಯಭಾರಿ! ಪ್ರಧಾನಿ ಮೋದಿ ಪ್ರತಿಕ್ರಿಯೆ ಹೀಗಿತ್ತು…

modi wadapav
Published on

ನವದೆಹಲಿ: ಇತ್ತೀಚೆಗೆ ಭಾರತದಲ್ಲಿನ ಜಪಾನ್ ರಾಯಭಾರಿ, “ನನ್ನ ಹೆಂಡತಿ ನನ್ನನ್ನು ಸೋಲಿಸಿದ್ದಾಳೆ” ಎಂದು ಬರೆದು ಟ್ವೀಟ್ಟರ್ ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಆ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನೊಂದು ಭಾರತದ ಸ್ಟ್ರೀಟ್ ಫುಡ್ಗೆ ಸಂಬಂಧಿಸಿದ ವಿಡಿಯೋದಲ್ಲಿ ಸುಜುಕಿ, “ನನ್ನ ಹೆಂಡತಿ ನನ್ನನ್ನು ಸೋಲಿಸಿದಳು” ಎಂದು ಬರೆದುಕೊಂಡಿದ್ದಾರೆ.

ಭಾರತದಲ್ಲಿನ ಜಪಾನ್ ರಾಯಭಾರಿ ಸುಜುಕಿ, ಪುಣೆಯಲ್ಲಿ ಮಹಾರಾಷ್ಟ್ರ ಶೈಲಿಯ ಸ್ಟ್ರೀಟ್ ಫುಡ್ ಅನ್ನು ಸವಿಯುತ್ತಿದ್ದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪುಣೆಗೆ ಬಂದಿದ್ದ ರಾಯಭಾರಿ ವಡಾ ಪಾವ್ ಮತ್ತು ಮಿಸಾಲ್ ಪಾವ್ ಅನ್ನು ಪ್ರಯತ್ನಿಸಿದರು. ಅವರಿಗೆ ಭಾರತೀಯ ತಿನಿಸುಗಳ ಬಗ್ಗೆ ಇರುವ ಒಂದು ಸಣ್ಣ ದೂರು ಏನೆಂದರೆ, ಇಲ್ಲಿನ ಆಹಾರ ಖಾರವಂತೆ!

ಈ ವಿಚಾರವಾಗಿ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದು “ರಾಯಭಾರಿ ಅವರೇ, ಈ ಒಂದು ವಿಚಾರದಲ್ಲಿ ನೀವು ಸೋಲಲು ಹಿಂಜರಿಯುವುದಿಲ್ಲ. ನೀವು ಭಾರತದ ಆಹಾರ ಪದ್ಧತಿಯನ್ನು ಆಸ್ವಾದಿಸುತ್ತಿರುವುದು ಖುಷಿ ತರುತ್ತಿದ್ದು ನಿಮ್ಮ ಅನುಭವವನ್ನು ನವೀನ ಮಾದರಿಯಲ್ಲಿ ಹಂಚಿಕೊಳ್ಳುತ್ತಿದ್ದೀರಿ. ಇನ್ನಷ್ಟು ವಿಡಿಯೋಗಳು ಬರುತ್ತಿರಲಿ” ಎಂದು ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net