More

    ದೇವರ ಜತೆ ಮೋದಿಯನ್ನು ಕೂರಿಸಿದ್ರೆ… ಅಮೆರಿಕದಲ್ಲಿ ಪ್ರಧಾನಿ ವಿರುದ್ಧ ರಾಹುಲ್​ ಗಾಂಧಿ ಟೀಕಾ ಪ್ರಹಾರ

    ಸ್ಯಾನ್​ ಫ್ರಾನ್ಸಿಸ್ಕೋ: ನೀವೇನಾದರೂ ಪ್ರಧಾನಿ ಮೋದಿ ಅವರನ್ನು ದೇವರ ಮುಂದೆ ಕೂರಿಸಿದರೆ, ಬ್ರಹ್ಮಾಂಡವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ದೇವರಿಗೆ ವಿವರಿಸಲು ಆರಂಭಿಸುತ್ತಾರೆ ಎನ್ನುವ ಮೂಲಕ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪ್ರಧಾನಿ ಮೋದಿ ಬಗ್ಗೆ ವ್ಯಂಗ್ಯವಾಡಿದ್ದಾರೆ.

    ಆರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ರಾಹುಲ್​ ಗಾಂಧಿ ಅವರು ಇಂದು ಸ್ಯಾನ್​ ಫ್ರಾನ್ಸಿಸ್ಕೋಗೆ ಆಗಮಿಸಿದರು. ಈ ವೇಳೆ ಅವರು ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ನಮಗೆ ಎಲ್ಲವೂ ಗೊತ್ತಿದೆ ಅಂದುಕೊಂಡಿರುವ ಒಂದು ಗುಂಪು ಭಾರತವನ್ನು ಆಳುತ್ತಿದೆ. ಅವರು ದೇವರೊಂದಿಗೂ ಕುಳಿತು ವಿಷಯಗಳನ್ನು ವಿವರಿಸಬಹುದು. ಅದಕ್ಕೆ ಒಂದು ಉದಾಹರಣೆ ಪ್ರಧಾನಿ ನರೇಂದ್ರ ಮೋದಿ ಎಂದು ರಾಹುಲ್​ ಕಾಲೆಳೆದರು.

    ಇದನ್ನೂ ಓದಿ: ಕುತೂಹಲ ಕೆರಳಿಸುತ್ತಿದೆ ರಾಜ್ ಬಿ.ಶೆಟ್ಟಿ ಮುಂದಿನ ಚಿತ್ರ; ಟೈಟಲ್ ಹೇಳದೆ ಸುಳಿವು ಕೊಟ್ಟ ನಟ-ನಿರ್ದೇಶಕ!

    ವಾಸ್ತವವಾಗಿ ಏನನ್ನೂ ತಿಳಿದಿಲ್ಲ

    ನನ್ನ ಪ್ರಕಾರ ನೀವೇನಾದರೂ ಮೋದಿಜಿ ಅವರನ್ನು ದೇವರ ಜತೆ ಕೂರಿಸಿದರೆ, ಇಡೀ ಬ್ರಹ್ಮಾಂಡ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ದೇವರಿಗೂ ವಿವರಿಸಲು ಆರಂಭಿಸುತ್ತಾರೆ. ಇದರಿಂದ ನಾನೇನು ಸೃಷ್ಟಿಸಿದೆ ಎಂದು ದೇವರಿಗೂ ಗೊಂದಲವಾಗಬಹುದು. ಒಂದು ಗುಂಪಿನ ಜನರಿದ್ದಾರೆ. ಅವರಿಗೆ ಎಲ್ಲವು ತಿಳಿದಿದೆ ಎಂದು ಅಂದುಕೊಂಡಿದ್ದಾರೆ. ಅವರು ವಿಜ್ಞಾನಿಗಳಿಗೆ ವಿಜ್ಞಾನ, ಇತಿಹಾಸಕಾರರಿಗೆ ಇತಿಹಾಸ ಮತ್ತು ಯೋಧರಿಗೆ ಯುದ್ಧವನ್ನು ವಿವರಿಸಬಲ್ಲರು. ಆದರೆ, ವಾಸ್ತವವಾಗಿ ಏನನ್ನೂ ತಿಳಿದಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

    ಭಾರತ್​​ ಜೋಡೋ ಯಾತ್ರೆ ಬಗ್ಗೆ ಮಾತು

    ಇದೇ ಸಂದರ್ಭದಲ್ಲಿ ಭಾರತ್​​ ಜೋಡೋ ಯಾತ್ರೆಯ ಬಗ್ಗೆ ಮಾತನಾಡಿದ ರಾಹುಲ್​​, ಸರ್ಕಾರಿ ಸಂಸ್ಥೆಗಳ ದುರುಪಯೋಗದಿಂದಾಗಿ ರಾಜಕೀಯವಾಗಿ ಕಾರ್ಯನಿರ್ವಹಿಸಲು ನಮಗೆ ಕಷ್ಟವಾಗುತ್ತಿದೆ ಎಂದು ಕಂಡುಕೊಂಡೆವು. ಹೀಗಾಗಿ ನಾವು ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಲು ನಿರ್ಧರಿಸಿದೆವು. ಅದನ್ನು ತಡೆಯಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡಿತು. ಆದರೆ, ಯಾತ್ರೆಯ ಪ್ರಭಾವ ಹೆಚ್ಚುತ್ತಲೇ ಹೋಯಿತು ಎಂದರು.

    ಇದನ್ನೂ ಓದಿ: ಅತ್ತೆ-ಸೊಸೆ ಜಗಳಕ್ಕೆ ಕಾರಣವಾಗುತ್ತಾ ಗೃಹಲಕ್ಷ್ಮಿ ಗ್ಯಾರಂಟಿ? ಮಹಿಳೆಯರ ಅಭಿಪ್ರಾಯ ಹೀಗಿತ್ತು…

    ಎಲ್ಲ ಧರ್ಮಗಳು ಮತ್ತು ಧರ್ಮದ ಜನರೊಂದಿಗೆ ಸಂಬಂಧ ಮತ್ತು ಪ್ರೀತಿಯ ಮೌಲ್ಯಗಳನ್ನು ಕಾಂಗ್ರೆಸ್​ ನಂಬುತ್ತದೆ. ಇದು ನೀವು ಪ್ರತಿನಿಧಿಸುವ ಭಾರತ. ನೀವು ಈ ಮೌಲ್ಯಗಳನ್ನು ಒಪ್ಪದಿದ್ದರೆ ನೀವು ಇಲ್ಲಿ ಇರುತ್ತಿರಲಿಲ್ಲ ಎಂದು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಹೇಳಿದ ರಾಹುಲ್​, ನೀವು ಕೋಪ, ದ್ವೇಷ ಮತ್ತು ದುರಹಂಕಾರವನ್ನು ನಂಬಿದ್ದರೆ, ನೀವು ಬಿಜೆಪಿ ಸಭೆಯಲ್ಲಿ ಕುಳಿತುಕೊಳ್ಳುತ್ತಿದ್ದೀರಿ ಮತ್ತು ನಾನು ‘ಮನ್ ಕಿ ಬಾತ್’ ಮಾಡುತ್ತಿದ್ದೆ ಎಂದು ಬಿಜೆಪಿ ಹಾಗೂ ಪ್ರಧಾನಿ ಮೋದಿಯನ್ನು ಟೀಕಿಸಿದರು. (ಏಜೆನ್ಸೀಸ್​)

    ತಂದೆಯ ಸ್ನೇಹಿತನ ಜತೆ ಅನೈತಿಕ ಸಂಬಂಧ: ಹೋಟೆಲ್​​ ಮಾಲೀಕನ ಹತ್ಯೆ ಕೇಸ್​ನಲ್ಲಿ ಸ್ಫೋಟಕ ಮಾಹಿತಿ ಬಯಲು

    ಪ್ರಧಾನಿ ಕಚೇರಿಯ ಉಪಕಾರ್ಯದರ್ಶಿಯಾಗಿ ಸೋಗು ಹಾಕಿದ್ದ ಕಿಲಾಡಿ! ಕಡೆಗೂ ಕುರಿ ಚರ್ಮದ ತೋಳ ಬಲೆಗೆ

    ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಕೊಟ್ಟ KSRTC; ಜೂನ್ 15ರ ವರೆಗೂ ಉಚಿತ ಪ್ರಯಾಣಕ್ಕೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts