More

  ಕುತೂಹಲ ಕೆರಳಿಸುತ್ತಿದೆ ರಾಜ್ ಬಿ.ಶೆಟ್ಟಿ ಮುಂದಿನ ಚಿತ್ರ; ಟೈಟಲ್ ಹೇಳದೆ ಸುಳಿವು ಕೊಟ್ಟ ನಟ-ನಿರ್ದೇಶಕ!

  ಬೆಂಗಳೂರು: ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೇ ಹೆಸರು ಮಾಡಿ, ಚಿತ್ರರಸಿಕರಿಗೆ ಮೊಟ್ಟೆಯ ಅರಿವು ಮೂಡಿಸಿದ ನಟ ರಾಜ್.ಬಿ.ಶೆಟ್ಟಿ, ಇದೀಗ ಹೊಸ ಸಿನಿಮಾದತ್ತ ಸದ್ದಿಲ್ಲದೇ ಹೆಜ್ಜೆಯಿಟ್ಟಿದ್ದಾರೆ.

  ಕರಾವಳಿ ಮಣ್ಣಿನ ಸೊಗಡು ಹೊಂದಿರುವ ನಟ ರಾಜ್, ತಮ್ಮ ಅಮೋಘ ಅಭಿನಯ, ಪಾತ್ರಗಳ ಆಯ್ಕೆ, ಬರಹದಿಂದಲೇ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಸದಾ ಹಸನ್ಮುಖಿಯಾಗಿರುವ ರಾಜ್.ಬಿ. ಶೆಟ್ಟಿ, ಕನ್ನಡಿಗರನ್ನು ಚಿತ್ರದಲ್ಲಿ ಮಾತ್ರ ನಗಿಸದೇ, ಪರದೆಯ ಹೊರಗೂ ಜನರನ್ನು ನಕ್ಕು ನಲಿಸುವ ಕಲಾವಿದ. ಸದ್ಯ ಈ ಕಲಾವಿದ ಇದೀಗ ಕನ್ನಡ ಸಿನಿರಸಿಕರಿಗೆ ತಮ್ಮ ಮುಂದಿನ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ ವಿನಃ ಯಾವ ಚಿತ್ರ, ಯಾವ ಜಾನರ್ ಎಂಬುದರ ಬಗ್ಗೆ ಕಿಂಚಿತ್ತು ಮಾಹಿತಿ ರಿವೀಲ್ ಮಾಡಿಲ್ಲ.

  ಇದನ್ನೂ ಓದಿ: ನೀನೇನ್​ ದೊಡ್ಡ ಡಾನಾ​? ನಾನಾ-ನೀನಾ ನೋಡೇ ಬಿಡೋಣ್ವಾ? ರಾಜ್ ಬಿ ಶೆಟ್ಟಿಗೆ ಚಮಕ್ ಕೊಟ್ಟ ಶಿವಣ್ಣ

  ಕಳೆದ ವರ್ಷ ಬಿಡುಗಡೆಗೊಂಡ ಗರುಡ ಗಮನ ವೃಷಭ ವಾಹನ, 777 ಚಾರ್ಲಿ ಸಿನಿಮಾಗಳ ಮುಖೇನ ಕನ್ನಡಿಗರನ್ನು ಮನರಂಜಿಸಿದ ರಾಜ್.ಬಿ.ಶೆಟ್ಟಿ, ತದನಂತರ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ! ಸದ್ಯ ಮಲೆಯಾಳಂ ಭಾಷೆಯಲ್ಲಿ ‘ರುಧಿರಂ’ ಸಿನಿಮಾದ ಮೂಲಕ ಮಾಲಿವುಡ್ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದು, ಕನ್ನಡದಲ್ಲಿ ತಾವೇ ನಟಿಸಿ, ನಿರ್ದೇಶನ ಮಾಡಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವನ್ನು ಇದೇ ಜೂನ್ 30 ರಂದು ತೆರೆ ಮೇಲೆ ತರಲು ತಯಾರಿ ನಡೆಸಿದ್ದಾರೆ.

  ಇದನ್ನೂ ಓದಿ: ಮಲಯಾಳಂಗೆ ರಾಜ್​ ಬಿ ಶೆಟ್ಟಿ; ‘ರುಧಿರಂ’ ಚಿತ್ರದಲ್ಲಿ ನಟನೆ

  ‘ಸಾಮಾಜಿಕ ಜಾಲತಾಣದಲ್ಲಿ ಅಷ್ಟಾಗಿ ಎಲ್ಲರಂತೆ ಆಕ್ಟಿವ್ ಇಲ್ಲದಿದ್ದರೂ, ತಮ್ಮ ಚಿತ್ರದ ಬಗ್ಗೆ ಅಪರೂಪಕ್ಕೆ ಒಮ್ಮೆ ಬರಹದ ಮೂಲಕ ಅಥವಾ ವಿಡಿಯೋ ತುಣಕನ್ನು ಹಂಚಿಕೊಳ್ಳುವ ಮುಖೇನ ಮಾಹಿತಿ ಹಂಚಿಕೊಳ್ಳುತ್ತಾರೆ. ಸದ್ಯ ಇದೀಗ ಅದೇ ರೀತಿಯಲ್ಲಿ ತಮ್ಮ ಹೊಸ ಚಿತ್ರದ ಕುರಿತು ವೀಡಿಯೋ ತುಣಕೊಂದನ್ನು ಹಂಚಿಕೊಂಡಿದ್ದಾರೆ.

  ಈ ವೀಡಿಯೋದಲ್ಲಿ ರಾಜ್.ಬಿ.ಶೆಟ್ಟಿ, ತಮ್ಮ ಮುಂದಿನ ಚಿತ್ರದ ಚಿತ್ರೀಕರಣದಲ್ಲಿ ಕುಳಿತು ಆನಂದಿಸುತ್ತಿರುವ ದೃಶ್ಯವೊಂದನ್ನು ಹಂಚಿಕೊಂಡಿದ್ದಾರೆ. “ತಂತ್ರಜ್ಞ ಮತ್ತು ಕಲಾವಿದನಾಗಿ ನನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿದ ಚಿತ್ರ ಇದಾಗಿದೆ. ಶೀಘ್ರದಲ್ಲೇ ಈ ಯೋಜನೆಯ ಕುರಿತು ಇನ್ನಷ್ಟು ಹಂಚಿಕೊಳ್ಳುತ್ತೇನೆ. ಆದರೆ ಇದುವರೆಗಿನ ನಮ್ಮ ಕೆಲಸದಲ್ಲಿ ಇದು ಅತ್ಯುತ್ತಮವಾಗಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

  ಇದನ್ನೂ ಓದಿ: ಅತಿಯಾದ ಆತ್ಮವಿಶ್ವಾಸ; ಉಲ್ಟಾ ಹೊಡೆದ ಬಿಜೆಪಿ ಲೆಕ್ಕಾಚಾರ

  ಮತ್ತೊಂದು ಫೋಟೋ ಹಂಚಿಕೊಂಡ ನಟ ರಾಜ್, “ಎರಡು ದಿನದ ಹಿಂದೆ ನನಗೆ ಅತ್ಯಂತ ತೃಪ್ತಿ ಕೊಟ್ಟ ಸಿನಿಮಾವೊಂದರ ಬಗ್ಗೆ ಹಂಚಿಕೊಂಡಿದ್ದೆ. ಅದೇ ಚಿತ್ರದ ಸೆಟ್ ನಲ್ಲಿ ನಾನು ಮತ್ತು ಇವಳು(ಶ್ವಾನ)” ಎಂದು ಶೀರ್ಷಿಕೆ ಕೊಟ್ಟು ಪೋಸ್ಟ್ ಮಾಡಿದ್ದಾರೆ. ರಾಜ್.ಬಿ.ಶೆಟ್ಟಿ ಹಂಚಿಕೊಂಡ ವೀಡಿಯೋ ತುಣಕು ಮತ್ತು ಫೋಟೋ ಅವರ ಅಭಿಮಾನಿಗಳಲ್ಲಿ ಹಾಗೂ ಚಿತ್ರರಸಿಕರಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.
  ಒಟ್ಟಾರೆ ಈ ಚಿತ್ರದ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುತ್ತಿರುವ ಅಭಿಮಾನಿಗಳಿಗೆ ನಟ ರಾಜ್.ಬಿ.ಶೆಟ್ಟಿ ಸಂಪೂರ್ಣ ಮಾಹಿತಿ ನೀಡುವುದು ಯಾವಾಗ? ಎಂಬುದನ್ನು ಕಾದು ನೋಡಬೇಕಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts