More

    ಸಂಶೋಧನಾ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅವಕಾಶ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ವಿಜ್ಞಾನ ವಿಷಯದ ವಿದ್ಯಾಥಿರ್ಗಳಿಗೆ ಸಂಶೋಧನೆಗೆ ವಿದೇಶಗಳಲ್ಲಿ ಹಲವಾರು ಉತ್ತಮ ಅವಕಾಶಗಳಿವೆ. ಧೈರ್ಯದಿಂದ ಮುನ್ನುಗ್ಗಿ ಅವಕಾಶಗಳ ಸದುಪಯೋಗ ಪಡೆಯಬೇಕು ಎಂದು ಕೆನಡಾದ ಕ್ಯಾನ್ಮೋರದ ವೈಜ್ಞಾನಿಕ ಸಲಹೆಗಾರ ಡಾ.ರವೀಂದ್ರ ಮಲಾಬಾದಿ ಹೇಳಿದರು.
    ನಗರದ ಕರ್ನಾಟಕ ವಿಜ್ಞಾನ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಡಾ.ಜಗದೀಶಚಂದ್ರ ಬೋಸ್​ ಸ್ಟಡಿ ಸರ್ಕಲ್​ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕೆನಡಾದಲ್ಲಿ ಸಂಶೋಧನೆಗಳು ವಿಷಯ ಕುರಿತು ಮಾತನಾಡಿದರು.
    ಪ್ರಸ್ತುತ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿದ್ಯಾಥಿರ್ಗಳಿಗೆ ವಿದೇಶದಲ್ಲಿ ಹೆಚ್ಚು ಬೇಡಿಕೆ. ಹೀಗಾಗಿ ಪದವಿ ಹಂತದಲ್ಲಿ ಸಂಶೋಧನೆಗೆ ಹೆಚ್ಚು ಗಮನ ನೀಡುವುದು ಸೂಕ್ತ. ಅದರಲ್ಲೂ ಕರ್ನಾಟಕದ ವಿದ್ಯಾಥಿರ್ಗಳು ಹೆಚ್ಚು ಅಧ್ಯಯನಶೀಲರಾಗಿದ್ದು, ಸಂಶೋಧನೆಯಲ್ಲಿ ಆಸಕ್ತಿ ಹೊಂದಿದ ವಿದ್ಯಾಥಿರ್ಗಳು ವಿಶಾಲ ದೃಷ್ಟಿಕೋನದ ಜತೆಗೆ ಆಳವಾದ ಜ್ಞಾನ ಹೊಂದುವುದು ಅಗತ್ಯವಾಗಿದೆ ಎಂದರು.
    ವಿದೇಶದಲ್ಲಿ ಹಲವಾರು ಸಂಶೋಧನಾ ಸಂಸ್ಥೆಗಳಿಗೆ ಸಂಶೋಧನೆಯಲ್ಲಿ ನೈಪುಣ್ಯತೆ ಪಡೆದ ಸಂಶೋಧಕರಿಗೆ ಹೆಚ್ಚು ಬೇಡಿಕೆ ಇದೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಂಶೋಧನಾ ೇತ್ರ ಉತ್ತಮವಾಗಿದೆ. ಪದವಿ ಹಂತದಿಂದಲೇ ಸಂಶೋಧನಾ ಲೇಖನ ಬರೆಯುವುದನ್ನು ರೂಢಿಸಿಕೊಳ್ಳಿ ಎಂದರು.
    ಡಾ. ಕೆ. ಕೊಟ್ರೇಶ ಮಾತನಾಡಿ, ಇಂದಿನ ವಿದ್ಯಾಥಿರ್ಗಳು ಪ್ರಾಯೋಗಿಕ ಸಂಶೋಧನೆಗಳಿಗೆ ಒತ್ತು ನೀಡಬೇಕು. ವಿಭಿನ್ನವಾಗಿ ಯೋಚಿಸುವುದನ್ನು ರೂಢಿಸಿಕೊಂಡು ನಿದಿರ್ಷ್ಟ ಗುರಿ ಸಾಧನೆಗೆ ಸತತ ಅಧ್ಯಯನ ಮಾಡಬೇಕು ಎಂದರು.
    ಅಧ್ಯತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಎಸ್​. ಸಾಳುಂಕೆ ಮಾತನಾಡಿದರು. ಡಾ. ಜಗದೀಶಚಂದ್ರ ಬೋಸ್​ ಸ್ಟಡಿ ಸರ್ಕಲ್​ ಚೇರ್ಮನ್​ ಡೋರೀಸ್​ ಎಂ.ಸಿಂಗ್​, ಪ್ರಾಧ್ಯಾಪಕ ಡಾ. ಕಿರಣ ಕೋಲ್ಕಾರ, ಕಾವೇರಿ ನೇಕಾರ. ಶಿಕರು, ವಿದ್ಯಾಥಿರ್ಗಳು, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts