ಮೋದಿ ‘ಮನ್ ಕೀ ಬಾತ್’ಗೆ ಸಲಹೆ ಆಹ್ವಾನ

Mann ki bath
Published on

ನವದೆಹಲಿ: ಮಾ. 29ರಂದು ನಡೆಯಲಿರುವ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದ 62ನೇ ಆವೃತ್ತಿಗಾಗಿ ಪ್ರಧಾನಿ ನರೇಂದ್ರ ಮೋದಿ ಜನರಿಂದ ಸಲಹೆಗಳನ್ನು ಕೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಆಯ್ದು ಕೊಳ್ಳಬಹುದಾದ ಸೂಕ್ತ ವಿಚಾರಗಳನ್ನು ತಿಳಿಸಿ. 1800-11-7800 ಸಂಖ್ಯೆಗೆ ಕರೆ ಮಾಡಿ ಸಲಹೆ ಸೂಚನೆಗಳನ್ನು ನೀಡಬಹುದು. ಸರ್ಕಾರದ ಅಧಿಕೃತ ವೆಬ್​ಸೈಟ್ ಮತ್ತು ನಮೋ ಆಪ್ ಮೂಲಕವೂ ಮಾಹಿತಿ ಹಂಚಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿ ತಮ್ಮ ಅನೇಕ ವಿಚಾರಧಾರೆಗಳನ್ನು ದೇಶದ ಜನತೆಯ ಜತೆ ಹಂಚಿಕೊಳ್ಳುವ ಸಲುವಾಗಿ 2014ರಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ಪ್ರಾರಂಭಿಸಿದ್ದು, ಈವರೆಗೆ 61 ಆವೃತ್ತಿಗಳನ್ನು ಪೂರೈಸಿದೆ. ಪ್ರತಿ ತಿಂಗಳು ಕೊನೆ ಭಾನುವಾರ ಆಲ್ ಇಂಡಿಯಾ ರೇಡಿಯೋ ಮತ್ತು ಡಿಡಿ ವಾಹಿನಿಗಳಲ್ಲಿ ಇದು ಪ್ರಸಾರವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net