

ಜಲೌನ್: ಎರಡು ಸಾವಿರ ಮುಖಬೆಲೆಯ ನೋಟನ್ನು ನೀಡಿ ಪೆಟ್ರೋಲ್ ಹಾಕಿಸಿಕೊಂಡ ಕಾರಣಕ್ಕಾಗಿ ಸ್ಕೂಟಿ ಟ್ಯಾಂಕ್ನಿಂದ ಪೆಟ್ರೋಲ್ನ್ನು ಹೊರೆತೆಗೆದಿರುವ ವಿಚಿತ್ರ ಘಟನೆ ನಡೆದಿದೆ. ಈ ಘಟನೆಯು ಉತ್ತರಪ್ರದೇಶದ ಜಲೌನ್ನಲ್ಲಿ ನಡೆದಿದ್ದು, ಈ ಕುರಿತ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗುತ್ತಿದೆ.
ಗ್ರಾಹಕನೋರ್ವ ತನ್ನ ಸ್ಕೂಟಿಯೊಂದಕ್ಕೆ ಪೆಟ್ರೋಲ್ ಹಾಕಿಸಿದ ಬಳಿಕ, ಪೆಟ್ರೋಲ್ ಬಂಕ್ ಸಿಬ್ಬಂದಿಗೆ 2000 ರೂ. ಮುಖಬೆಲೆಯ ನೋಟನ್ನು ನೀಡಿದ್ದಾನೆ. ಆಗ ಪೆಟ್ರೋಲ್ ಬಂಕ್ ಸಿಬ್ಬಂದಿ ನೋಟನ್ನು ಪಡೆಯಲು ನಿರಾಕರಿಸಿ, ಸ್ಕೂಟಿಯಿಂದ ಮತ್ತೆ ಪೆಟ್ರೋಲ್ನ್ನು ಹೊರ ತೆಗೆದು ಗ್ರಾಹಕನನ್ನು ಕಳುಹಿಸಿದ್ದಾರೆ.
ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳುವ ವಿಷಯದಲ್ಲಿ ಜನರು ಗಾಬರಿಯಾಗುವ ಅಗತ್ಯವಿಲ್ಲ. ಇದು ಮಾನ್ಯವಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದರೂ, ಜನರ ಗೊಂದಲ ಇನ್ನು ನಿವಾರಣೆಯಾದಂತೆ ಕಾಣುತ್ತಿಲ್ಲ.(ಏಜೆನ್ಸೀಸ್)