More

    ರೈಲ್ವೆ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಪ್ರಯಾಣಿಕರು ಹೈರಾಣ

    ತುಮಕೂರು: ರೈಲ್ವೆ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಪ್ರಯಾಣಿಕರು ಹೈರಾಣಾಗಿರುವ ಘಟನೆ ತುಮಕೂರಿನ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಟಿಕೆಟ್ ಪಡೆದು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಾವಿರಾರು ರೈಲು ಪ್ರಯಾಣಿಕರಿಗೆ ಶಾಕ್ ಎದುರಾಗಿದ್ದು, ಮಾರ್ಗ ಮಧ್ಯೆಯೇ ಸಾವಿರಾರು ಪ್ರಯಾಣಿಕರನ್ನು ರೈಲ್ವೇ ಇಲಾಖೆ ಕೈಬಿಟ್ಟಿದೆ.

    ಎಂದಿನಂತೆ ಶಿವಮೊಗ್ಗದಿಂದ ಬೆಂಗಳೂರಿಗೆ ಎಕ್ಸ್​ಪ್ರೆಸ್ ರೈಲು ಹೋಗುತ್ತಿತ್ತು. ಆದರೆ ತುಮಕೂರಿನ ಸಿದ್ದಗಂಗಾ ಮಠದ ಬಳಿ ರೈಲ್ವೆ ಹಳಿ ದುರಸ್ಥಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈಲನ್ನು ತುಮಕೂರಿನಲ್ಲಿಯೇ ನಿಲ್ಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

    ಇದನ್ನೂ ಓದಿ: ಭರವಸೆಯ ಗ್ಯಾರಂಟಿ ಸರ್ಕಾರ ನಮ್ಮದು: ಎಂಎಲ್‌ಸಿ ದಿನೇಶ್ ಗೂಳಿಗೌಡ ಹೇಳಿಕೆ

    ಈ ವೇಳೆ ಗಂಟೆಗಟ್ಟಲೇ ಕಾದುಕುಳಿತ ಪ್ರಯಾಣಿಕರು ಸುಸ್ತಾಗಿ ಸಿಬ್ಬಂದಿಗಳನ್ನು ಈ ಕುರಿತು ಕೇಳಿದಾಗ ಪ್ರಯಾಣಿಕರ ಪ್ರಶ್ನೆಗೆ ಉತ್ತರಿಸಲಾಗದೇ ಸಿಬ್ಬಂದಿಗಳು ಕೌಂಟರ್​ನಿಂದ ಕಾಲ್ಕಿತ್ತಿದ್ದಾರೆ. ಅತ್ತ ಟಿಕೆಟ್​ ಹಣವೂ ಇಲ್ಲದೇ, ಇತ್ತ ಬೆಂಗಳೂರಿಗೆ ಹೋಗಲೂ ಆಗದೇ ಪ್ರಯಾಣಿಕರು ಮಾರ್ಗ ಮಧ್ಯೆ ಸಿಲುಕಿದ್ದಾರೆ.

    ಬೆಂಗಳೂರು-ತುಮಕೂರು ನಡುವೆ ಮುಂಜಾನೆಯಿಂದ ಸುಮಾರು 19 ರೈಲುಗಳ ಸಂಚಾರ ಸ್ಥಗಿತವಾಗಿದ್ದು, ತುರ್ತು ಕೆಲಸದ ನಿಮಿತ್ತ ಬೆಂಗಳೂರಿನ ಕಡೆಗೆ ಹೊರಟಿದ್ದ ಸಾವಿರಾರು ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಪರದಾಟ ನಡೆಸುವಂತಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts