ಹೈವೋಲ್ಟೇಜ್ ವಿದ್ಯುತ್ ಟವರ್ ಏರಿ ಡ್ಯಾನ್ಸ್​ ಮಾಡಿದ ಭೂಪ; ಮುಂದೇನಾಯ್ತು ನೀವೇ ನೋಡಿ.. | High Voltage Electricity pole

Untitled design - 2024-11-11T184637.455
Published on

ಲಖನೌ: ವ್ಯಕ್ತಿಯೊಬ್ಬರು ಹೈವೋಲ್ಟೇಜ್ ವಿದ್ಯುತ್ ಟವರ್(High Voltage Electricity pole) ಏರುವುದು ಮಾತ್ರವಲ್ಲದೆ, ಜನರನ್ನು ಚುಡಾಯಿಸಲು ನೃತ್ಯ ಮಾಡುರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ವಿದ್ಯುದಾಘಾತದಿಂದ ಸಾವಾಗುವ ಸಂಭವ ಹೆಚ್ಚಿದ್ದರೂ ಆತ ತನ್ನ ಹುಚ್ಚಾಟಕ್ಕೆ ಹೆಚ್ಚಿನ ವೋಲ್ಟೇಜ್​​​ ವಿದ್ಯುತ್​​ ಟವರ್​​​ ಏರಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೈರಲ್ ವಿಡಿಯೋದಲ್ಲಿ ವ್ಯಕ್ತಿ ಪಿಲ್ಲರ್ ಹತ್ತುವಾಗ ನೃತ್ಯ ಮಾಡುವುದನ್ನು ಕಾಣಬಹುದು. ಆ ವ್ಯಕ್ತಿ ಸುಮಾರ 2 ಗಂಟೆಗಳ ಕೋಕ್ಸಿಂಗ್ ನಂತರ ಕೆಳಗಿಳಿದಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆದರೆ ಪೊಲೀಸ್ ಆಡಳಿತ ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳಿಂದ ಪ್ರೋತ್ಸಾಹ ಮತ್ತು ಪ್ರಶಂಸೆ ಪಡೆದ ನಂತರ ವ್ಯಕ್ತಿ ಕೆಳಗೆ ಬಂದಿದ್ದಾನೆ ಎನ್ನಲಾಗಿದೆ. ವ್ಯಕ್ತಿ ಕಂಬ ಹತ್ತಿ ಜೋರಾಗಿ ಕೂಗಾಡಿದ ಬಳಿಕ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ವ್ಯಕ್ತಿಯನ್ನು ಕೆಳಗಿಳಿಸಲು ಕಂಬದ ಸುತ್ತಲೂ ಬಲೆ ಹಾಕಿ ರಕ್ಷಿಸುವ ಯೋಜನೆಯನ್ನೂ ಮಾಡಿದ್ದರು ಎನ್ನಲಾಗಿದೆ.

ವಿಡಿಯೋ ವೈರಲ್​ ಆದ ಬಳಿಕ ಲಕ್ಷಾಂತರ ಮಂದಿ ವೀಕ್ಷಿಸಿದ್ದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕುಡಿದ ವ್ಯಕ್ತಿಯ ಜೀವ ಉಳಿಸಿದ ನಂತರ ಜನರು ತುಂಬಾ ಸಂತೋಷವಾಗಿದ್ದಾರೆ ಎಂದು ಕೆಲವರು, ಟವರ್ ಹತ್ತಿದವನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮತ್ತೆ ಕೆಲವರು ಪ್ರತಿಕ್ರಿಯಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net