ಮದುವೆಗೆ ಆಫೀಸ್​ನಲ್ಲಿ ರಜೆ ನೀಡಲಿಲ್ಲ; ಕೊನೆಗೆ ವಿಡಿಯೋ ಕಾಲ್​ನಲ್ಲಿ ವಿವಾಹವಾದ ದಂಪತಿ | Viral Post

Untitled design - 2024-11-08T193109.851
Published on

ಮಂಡಿ: ಪ್ರತಿ ದಂಪತಿಗಳ ಜೀವನದಲ್ಲಿ ಮದುವೆ ಒಂದು ವಿಶೇಷ ಕ್ಷಣವಾಗಿದೆ. ಯಾವುದೇ ದಂಪತಿ ತಮ್ಮ ಜೀವನದ ಸ್ಮರಣೀಯ ಕ್ಷಣವನ್ನು ವಿಡಿಯೋ ಕರೆಯಂತೆ ಚಿಕ್ಕದಾಗಿಸಲು ಬಯಸುವುದಿಲ್ಲ. ಆದರೆ ಸಂದರ್ಭಕ್ಕನುಗುಣವಾಗಿ ವಿಡಿಯೋ ಕರೆಯಲ್ಲಿ ಮದುವೆಯಾಗಿದರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ(Viral Post) ಹರಿದಾಡುತ್ತಿದೆ.

ಈ ರೀತಿ ಮದುವೆ ಆಗಲು ವರನ ಬಾಸ್​ ಕಾರಣ ಎನ್ನಲಾಗಿದೆ. ಟರ್ಕಿಯಲ್ಲಿ ವಾಸಿಸುವ ಹುಡುಗನಿಗೆ ಅವನ ಮ್ಯಾನೇಜರ್ ತನ್ನ ಮದುವೆಗೆ ರಜೆ ನಿರಾಕರಿಸಿದ್ದಾನೆ. ನಂತರ ವಧು ಹಿಮಾಚಲ ಪ್ರದೇಶದಲ್ಲಿ ಹಾಗೂ ವರ ಟರ್ಕಿಯಲ್ಲಿದ್ದುದ್ದರಿಂದ ವಿವಾಹವನ್ನು ಆನ್​ಲೈನ್​ನಲ್ಲಿ ಮಾಡಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ವಧುವಿನ ಅಜ್ಜನ ಕೊನೆಯ ಆಸೆಯನ್ನು ಪೂರೈಸಲು ಕುಟುಂಬವು ಬೇಗ ಮದುವೆ ಮಾಡಲು ಈ ಶಾರ್ಟ್‌ಕಟ್ ಅನ್ನು ಕಂಡುಹಿಡಿದಿದೆ. ಬಿಲಾಸ್‌ಪುರದ ನಿವಾಸಿ ಅದ್ನಾನ್ ಮುಹಮ್ಮದ್, ಆರಂಭದಲ್ಲಿ ತನ್ನ ಮದುವೆಗಾಗಿ ಟರ್ಕಿಯಿಂದ ಭಾರತಕ್ಕೆ ಬರಲು ಯೋಜಿಸಿದ್ದರು. ಆದರೆ ಕೊನೆಗೂ ರಜೆ ಸಿಗದ ಕಾರಣ ಕುಟುಂಬಸ್ಥರು ವಿಡಿಯೋ ಕಾಲ್​ ಮದುವೆಗೆ ಮುಂದಾಗಿದ್ದಾರೆ.

ಆದಷ್ಟು ಬೇಗ ಮೊಮ್ಮಗಳಿಗೆ ತನ್ನ ಕಣ್ಣೆದುರೇ ಮದುವೆ ಮಾಡಿಸುವ ಆಸೆಯನ್ನು ವೃದ್ಧ ಅಜ್ಜ ವ್ಯಕ್ತಪಡಿಸಿದಾಗ. ಅಸಾಂಪ್ರದಾಯಿಕವಾಗಿದ್ದರೂ, ಅದ್ನಾನ್ ಅವರ ಕುಟುಂಬವು ಸಾಂಪ್ರದಾಯಿಕ ಮೆರವಣಿಗೆಯನ್ನು ತೆಗೆದುಕೊಂಡು ಬಿಲಾಸ್‌ಪುರದಿಂದ ಮಂಡಿಗೆ ಪ್ರಯಾಣ ಬೆಳೆಸಿತು. ಬಳಿಕ ವಿಡಿಯೋ ಕಾಲ್ ಮೂಲಕ ಮದುವೆ ನಡೆಸಿದೆ.

ಅಲ್ಲಿ ಖಾಜಿಯವರ ಸಮ್ಮುಖದಲ್ಲಿ ದಂಪತಿಗಳು ಪರಸ್ಪರ ಪ್ರತಿಜ್ಞೆ ಮಾಡಿದರು ಮತ್ತು ಸಾಧ್ಯವಾದ ವಿಧಿವಿಧಾನಗಳ ಪ್ರಕಾರ ವಿವಾಹವಾದರು. ಮದುವೆಯಂತಹ ಪ್ರಮುಖ ಕೌಟುಂಬಿಕ ಕಾರ್ಯದಲ್ಲಿ ತಂತ್ರಜ್ಞಾನವು ಪಾತ್ರವಹಿಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಜುಲೈ 2023 ರಲ್ಲಿ ಭೂಕುಸಿತ ಮತ್ತು ಪ್ರವಾಹದಿಂದಾಗಿ ದಂಪತಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮದುವೆಯಾಗಲು ನಿರ್ಧರಿಸಿದ್ದರು.

ಮದುವೆಯ ಸಮಯದಲ್ಲಿ ಒಬ್ಬ ವ್ಯಕ್ತಿಗೆ ರಜೆ ಸಿಗದಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಇಂತಹ ಹಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರಲ್ಲಿ ವ್ಯಕ್ತಿ ತನ್ನ ಮದುವೆಯಲ್ಲೂ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಇಂಥಾ ಘಟನೆ ನೋಡಿದ ಜನರು ಮದುವೆಯಂತಹ ಶುಭ ಕಾರ್ಯಕ್ರಮಗಳಿಗೆ ಕಂಪನಿಯು ರಜೆ ನೀಡಬೇಕೆಂದು ಒತ್ತಾಯಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net