ಸಾಂಗ್​​ಗೆ ವಿದ್ಯಾರ್ಥಿನಿಯರೊಂದಿಗೆ ಹೆಚ್​​ಒಡಿ ಸ್ಟೆಪ್ಸ್​​​​​​​​​​; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..

Untitled design - 2024-11-08T191927.541
Published on

ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಯಾವಾಗಳೂ ನೆನಪಿಸಿಕೊಳ್ಳಬೇಕಾದ ಶಿಕ್ಷಕರೊಬ್ಬರು ಇರುತ್ತಾರೆ. ಆ ಶಿಕ್ಷಕ ಒಳ್ಳೆಯವರೂ ಆಗಿರಬಹುದು ಮತ್ತು ಕೆಟ್ಟವರೂ ಆಗಿರಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗಳೊಂದಿಗೆ ಡ್ಯಾನ್ಸ್​ ಮಾಡಿರುವ ವಿಡಿಯೋ ವೈರಲ್​​​(Viral Video) ಆಗಿದೆ. ಈ ವಿಡಿಯೋ ಕೇರಳದ ಕಾಲೇಜಿನಲ್ಲಿ ನಡೆದ ಡ್ಯಾನ್ಸ್​​ ಎಂದು ಹೇಳಲಾಗುತ್ತಿದೆ.

ವೈರಲ್​ ವಿಡಿಯೋದಲ್ಲಿ ಕಾಲೇಜು ವಿದ್ಯಾರ್ಥಿನಿಯರು ವೇದಿಕೆ ಮೇಲೆ ನೃತ್ಯ ಮಾಡುತ್ತಿರುವುದನ್ನು ನೋಡಬಹುದು. ಡ್ಯಾನ್ಸ್​ ಮಧ್ಯದಲ್ಲಿ ಶಿಕ್ಷಕರೊಬ್ಬರು ತಾವು ಹೋಗಿ ವಿದ್ಯಾರ್ಥಿನಿಯರೊಂದಿಗೆ ಸೇರಿ ಸ್ಟೆಪ್ಸ್​ ಹಾಕಿರುವುದನ್ನು ಕಾಣಬಹುದು. ಫ್ರೆಶರ್ಸ್ ಡೇಯಂದು ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಹೆಚ್​​ಒಡಿ ಸರ್​ ಅದ್ಭುತ ಪ್ರದರ್ಶನಕ್ಕೆ ಇತರೆ ವಿದ್ಯಾರ್ಥಿಗಳು ಶಿಳ್ಳೆ ಮತ್ತು ಚಪ್ಪಾಳೆ ತಟ್ಟಿದ್ದಾರೆ. ಸರ್ ಡ್ಯಾನ್ಸ್ ನೋಡಿ ಮಕ್ಕಳ ಖುಷಿಗೆ ಮಿತಿಯೇ ಇಲ್ಲ ಎಂಬುದು ಕಾಣುತ್ತದೆ.

ಸುಮಾರು 27 ಸೆಕೆಂಡ್​​ಗಳ ಈ ವಿಡಿಯೋವನ್ನು 31 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 4 ಲಕ್ಷ ಮಂದಿ ಲೈಕ್​ ಮಾಡಿದ್ದು, 1100ಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. ಹಲವರು ಹೆಚ್​​ಒಡಿ ಸರ್​ ಡ್ಯಾನ್ಸ್​ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net