ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯದಲ್ಲಿ ಹಿಂದಿ ಹಾಡಿಗೆ ಡ್ಯಾನ್ಸ್​​​; ಸೀರೆತೊಟ್ಟ ಭಾರತೀಯ ವಿದ್ಯಾರ್ಥಿನಿಯ ಮಸ್ತ್​​ ಸ್ಟೆಪ್ಸ್​​ | Viral Video

Untitled design - 2024-11-06T201848.417
Published on

ಬಾಲಿವುಡ್​ ಭಾಯಿಜಾನ್​​ ಸಲ್ಮಾನ್ ಖಾನ್ ಹಾಗೂ ಕರೀನಾ ಕಪೂರ್ ಅವರ ಅತ್ಯುತ್ತಮ ಚಿತ್ರ 'ದಬಾಂಗ್ 2'. ಈ ಸಿನಿಮಾದಲ್ಲಿನ ಫೆವಿಕೋಲ್ ಸೇ... ಐಟಂ ಸಾಂಗ್​ಗೆ ಕರೀನಾ ಕಪೂರ್​ ಮಸ್ತ್​​ ಆಗಿ ಸ್ಟೆಪ್ಸ್​ ಹಾಕಿರೋದು ಗೊತ್ತೆ ಇದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು(Viral Video), ಹುಡುಗಿಯೊಬ್ಬಳು ಅದೇ ಹಾಡಿಗೆ ಡ್ಯಾನ್ಸ್​​ ಮಾಡಿದ್ದಾರೆ.

ವಾಜಿದ್​​​ ಮತ್ತು ಮಮತಾ ಶರ್ಮಾ ಹಾಡಿರುವ ಈ ಹಾಡು ಪಾರ್ಟಿ ಮತ್ತು ಮದುವೆ ಸಮಾರಂಭದಲ್ಲಿ ಮಾತ್ರ ಕೇಳಿಬರುತ್ತಿತ್ತು, ಆದರೀಗ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ಡ್ಯಾನ್​​ ಮಾಡಿರುವುದನ್ನು ನೀವು ವೈರಲ್​ ವಿಡಿಯೋದಲ್ಲಿ ನೋಡಬಹುದು. ಅಂದ್ಹಾಗೆ ಈ ವಿಡಿಯೋದಲ್ಲಿ ಡ್ಯಾನ್ಸ್​ ಮಾಡುತ್ತಿರುವ ಹುಡುಗಿ ಹೆಸರು ಹಿಮಾ ಎಂದು ಹೇಳಲಾಗುತ್ತಿದ್ದು, ಆಸ್ಟ್ರೇಲಿಯಾದ ಚಾರ್ಲ್ಸ್ ಡಾರ್ವಿನ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿನಿ ಎನ್ನಲಾಗಿದೆ. ಆಸ್ಟ್ರೇಲಿಯಾದ ಚಾರ್ಲ್ಸ್ ಡಾರ್ವಿನ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಬಾಲಿವುಡ್​ ಹಿಟ್​​​ ಹಾಡಿಗೆ ಸೀರೆ ತೊಟ್ಟ ಡ್ಯಾನ್ಸ್​ ಮಾಡಿದ್ದಾರೆ.

ಈ ವೈರಲ್​ ವಿಡಿಯೋವನ್ನು ಇದುವರೆಗೂ 3 ಲಕ್ಷ 80 ಸಾವಿರ ಮಂದಿ ವೀಕ್ಷಿಸಿದ್ದಾರೆ. 18 ಸಾವಿರ ಮಂದಿ ಲೈಕ್​ ಮಾಡಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net