

ಜಪಾನ್: ಅಜ್ಜಿಯ ಮನೆಯಲ್ಲಿ ಪ್ರತಿಯೊಬ್ಬರಿಗೂ ಬಾಲ್ಯದ ಅತ್ಯಂತ ಕಹಿ ಮತ್ತು ಸಿಹಿ ನೆನಪುಗಳು ಇರುತ್ತವೆ. ಅಜ್ಜಿ ಮನೆ ಎಂದರೆ ಅಮ್ಮನ ಮನೆ! ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಅಮ್ಮನ ಮನೆ ತಲುಪಿದಾಗ ಅವರ ಕುತೂಹಲ ಇಮ್ಮಡಿಗೊಳ್ಳುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜಪಾನಿನನ ಹೋಂಟೂರ್ ವ್ಲಾಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಇದು ನನ್ನ ಅಜ್ಜಿಯ 50 ವರ್ಷದ ಹಳೆಯ ಮನೆ ಎಂದು ಹೇಳುವುದನ್ನು ಕೇಳಬಹುದು. ಅಜ್ಜಿಯ ಮನೆಯ ಎಲ್ಲಾ ಏಳು ಕೋಣೆಗಳನ್ನು ಪರಿಚಿಯಿಸುತ್ತಾರೆ. ಅದರಲ್ಲಿ ಅಡುಗೆಮನೆ, ಮಲಗುವ ಕೋಣೆ, ಶೌಚಗೃಹ ಮತ್ತು ಪೂಜಾ ಕೋಣೆ ಕೂಡ ಸೇರಿದೆ. ಈ ಮನೆಯಲ್ಲಿ ಇದು ನನ್ನ ನೆಚ್ಚಿನ ಕೋಣೆಯೆಂದು ಹೇಳುತ್ತಾರೆ. ವಿಡಿಯೋದಲ್ಲಿ ಹೋಂಟೂರ್ ಮಾಡಿರುವ ಜಪಾನ್ ವ್ಯಕ್ತಿಯು ಸಂಪೂರ್ಣ ವಿಡಿಯೋವನ್ನು ಹಿಂದಿಯಲ್ಲಿ ಮಾಡಿರುವುದ ವಿಶೇಷವಾಗಿದೆ. ಆ ವ್ಯಕ್ತಿಯನ್ನು ಕೋಕಿ ಶಿಶಿಡೋ ಎಂದು ನೆಟ್ಟಿಗರು ಗುರುತಿಸುತ್ತಿದ್ದಾರೆ.
ಈ ವಿಡಿಯೋ ವೈರಲ್ ಆದಗಿನಿಂದ ಇದುವರೆಗೂ 61 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 11 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 9 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. ಈ ಮನೆಯು ಶಿಶಿಡೋ ಅವರ ಅವರ ನೆರೆಹೊರೆಯಂತೆಯೇ ಕಾಣುತ್ತದೆ, ನೀವು ಹಿಂದಿಯನ್ನು ಹೇಗೆ ಇಷ್ಟು ಚೆನ್ನಾಗಿ ಕಲಿತಿದ್ದೀರಿ, ಭಾರತದಿಂದ ನಿಮಗೆ ಸಾಕಷ್ಟು ಪ್ರೀತಿ ಕಳುಹಿಸುತ್ತಿದ್ದೇವೆ, ಮನೆ ನಿಜವಾಗಿಯೂ ತುಂಬಾ ಚೆನ್ನಾಗಿದೆ, ನೀವು ಹಿಂದಿಯನ್ನು ಚೆನ್ನಾಗಿ ಮಾತನಾಡುತ್ತಿದ್ದೀರಿ, ನಿಮ್ಮ ಅಜ್ಜಿಯ ಮನೆಯೂ ತುಂಬಾ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)