

ಸಿಹಿ ಅಂದ್ರೆ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟ. ಅದರಲ್ಲೂ ಹಬ್ಬ ಬಂದ್ರೆ ಸಾಕು ಮನೆಯಲ್ಲಿ ಪ್ರತಿದಿನವೂ ಸಿಹಿಯ ಔತಣಕೂಟ ಇರುತ್ತದೆ. ಮನೆಯಲ್ಲಿ ತಯಾರಿಸುವುದೋ ಅಥವಾ ಬೇಕರಿಯಿಂದ ತರುವುದೋ.. ಒಟ್ಟಿನಲ್ಲಿ ಸಂಭ್ರಮದಿಂದ ಸಿಹಿಯನ್ನು ಸವಿಯುತ್ತಾರೆ. ಅದರಲ್ಲಿ ಎಲ್ಲಾ ಕಡೆ ಸಿಗುವ ಸೋನ್ಪಾಪ್ಡಿ ಯಾರಿಗೆ ಇಷ್ಟಾ ಇಲ್ಲ ಹೇಳಿ. (Viral Video)
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಸೋನ್ಪಾಪ್ಡಿ ತಯಾರಿಸುವ ವಿಧಾನವನ್ನು ತೋರಿಸಲಾಗಿದೆ. ಈ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೋನ್ಪಾಪ್ಡಿ ಮಾಡೋದನ್ನು ನೀವು ಒಮ್ಮೆ ನೋಡಿದ್ರೆ ತಿನ್ನುವುದನ್ನೇ ಬಿಡುತ್ತೀರಿ ಅನ್ನಿಸುತ್ತೆ.
ವೈರಲ್ ವಿಡಿಯೋದಲ್ಲಿ ಕಲಸಿಟ್ಟಿರುವ ಹಿಟ್ಟಿಗೆ ಬಿಸಿಯಾದ ಎಣ್ಣೆ ಹಾಕಿ ಮಿಕ್ಸ್ ಮಾಡಿ ಗೋಡೆಗೆ ಹೊಡೆಯುವುದನ್ನು ನೋಡಬಹುದು. ಮತ್ತೊಂದು ಗೋಡೆಗೆ ಹೊಡೆಯುತ್ತಿರುವ ಹಿಟ್ಟನ್ನು ಇನ್ನೊಂದು ಹಿಟ್ಟಿಗೆ ಹಾಕಿ ನಾಲ್ವರು ಸೇರಿ ಹಗ್ಗಜಗ್ಗಾಟದಂತೆ ಹಿಟ್ಟನ್ನು ಹಿಡಿದು ಜಗ್ಗಾಡುವುದನ್ನು ಕಾಣಬಹುದು. ಮಂದೇನೂ ಮಾಡುತ್ತಾರೆ ಎಂದು ನೀವೇ ನೋಡಿ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ತುಂಬಾ ಆಘಾತಕಾರಿ, ಸ್ವಚ್ಛತೆ ಕಾಪಾಡದೆ ಜನರ ಜೀವನದ ಜತೆ ಆಟವಾಡುತ್ತಿದ್ದಾರೆ, ಈ ವಿಧಾನ ಅನೈರ್ಮಲ್ಯದಿಂದ ಕೂಡಿದೆ, ಅವರ ಪರಿಶ್ರಮದ ಬಗ್ಗೆ ಹೆಮ್ಮೆ ಗೌರವ ಪಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.