ಆಹಾರಕ್ಕಾಗಿ ಹಕ್ಕಿಗಳ ನಡುವೆ ಮೆಗಾಫೈಟ್​​; ಕ್ಯಾಮೆರಾದಲ್ಲಿ ಸೆರೆಯಾದ ಅಪರೂಪದ ಕ್ಷಣ! | Viral Video

Untitled design - 2024-11-05T202033.491
Published on

ಸಿಂಹ, ಚಿರತೆ, ಕರಡಿ, ಆನೆ ಮುಂತಾದ ಅನೇಕ ಶಕ್ತಿಶಾಲಿ ಪ್ರಾಣಿಗಳು ಅರಣ್ಯ ಭೂಮಿಯ ಮೇಲೆ ಅಧಿಕಾರ ಹೊಂದಿವೆ ಎಂಬುದು ಗೊತ್ತಿದೆ. ಆದರೆ ಆಕಾಶದಲ್ಲಿ ರಾಜನಾಗಲು ಶಕ್ತಿಯ ಜತೆಗೆ ಬುದ್ಧಿಯೂ ಬೇಕು. ಪಕ್ಷಗಳಲ್ಲಿಯೂ ಒಂದಕ್ಕಿಂತ ಒಂದು ಶಕ್ತಿ, ಬುದ್ಧಿವಂತಿಕೆಯಲ್ಲಿ ಮುಂದಿರುತ್ತವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​(VIral Video) ಆಗುತ್ತಿದೆ. ಅದರಲ್ಲಿ ಆಸ್ಪ್ರೆ ಹಕ್ಕಿಯಿಂದ ಬೇಟೆಯನ್ನು ಜಾಣತನದಿಂದ ಪೆಲಿಕನ್​ ಕಸಿದುಕೊಳ್ಳುತ್ತಿದೆ.

ಪೆಲಿಕನ್ ಒಂದು ಉದ್ದವಾದ ಕೊಕ್ಕು ಮತ್ತು ದೊಡ್ಡ ಗಂಟಲಿನ ಚೀಲವನ್ನು ಹೊಂದಿರುವ ಪಕ್ಷಿಯಾಗಿದೆ. ಇದು ತನ್ನ ಬೇಟೆಯನ್ನು ಹಿಡಿಯಲು ಮತ್ತು ನುಂಗಲು ತನ್ನ ಸಂಪೂರ್ಣ ದೇಹವನ್ನು ಬಳಸುತ್ತದೆ. ವೈರಲ್​ ವಿಡಿಯೋದಲ್ಲಿ ಪೆಲಿಕಾನ್ ಗಾಳಿಯಲ್ಲಿ ಹಾರುವ ಆಸ್ಪ್ರೆಯಿಂದ ಆಹಾರವನ್ನು ಕಸಿದುಕೊಂಡು ಓಡಿಹೋಗುವುದನ್ನು ಕಾಣಬಹುದು. ಪೆಲಿಕಾನ್ ಬಹಳ ಜಾಣ್ಮೆಯಿಂದ ಆಸ್ಪ್ರೆ ಹಕ್ಕಿಯ ಮೇಲೆ ಹಿಂದಿನಿಂದ ದಾಳಿ ಮಾಡಿ ಅದರಿಂದ ಆಹಾರವನ್ನು ಕಸಿದುಕೊಂಡು ಕೆಳಕ್ಕೆ ಬರುವುದನ್ನು ನೋಡಬಹುದು.

ಸುಮಾರು 37 ಸೆಕೆಂಡುಗಳಿರುವ ಈ ವಿಡಿಯೋವನ್ನು ಒಂದು ಗಂಟೆಯಲ್ಲಿ 2.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 10 ಸಾವಿರ ಮಂದಿ ಲೈಕ್​ ಮಾಡಿದ್ದು, ಹಲವರು ಪ್ರತಿಕ್ರಿಯಿಸಿದ್ದಾರೆ. ಎಂತಹ ಅದ್ಭುತ ದೃಶ್ಯ! ಉಳಿವಿಗಾಗಿ ಹೋರಾಟ ಪ್ರತಿಯೊಂದು ಜಾತಿಯಲ್ಲೂ ಇರುತ್ತದೆ, ಮಾರುಕಟ್ಟೆಯಲ್ಲಿ ಮೀನಿನ ಕೊರತೆ ಇದೆಯೇ? ಇದು ತುಂಬಾ ದಪ್ಪವಾಗಿದೆ, ಪೆಲಿಕಾನ್ ತನ್ನದೇ ಆದ ಬೇಟೆಯನ್ನು ಕಂಡುಕೊಳ್ಳಬೇಕು, ಗ್ರೇಟ್ ಕೆಲಸ ಮಾರ್ಕ್ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net