ಪಟಾಕಿ ಸಿಡಿಸಿ ರಾಕೆಟ್​ನಂತೆ ಡ್ರಮ್​ ಉಡಾವಣೆ; ಹುಡುಗರ ಕ್ರೇಜಿ Video Viral

Untitled design - 2024-11-03T192513.255
Published on

ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸುವುದೆ ಒಂದು ರೀತಿಯ ಸಂಭ್ರಮ. ಪಟಾಕಿ ಸಿಡಿಸುವಾಗ ಅಪಾಯದ ಸಾಧ್ಯತೆ ಹೆಚ್ಚೆಂದು ತಿಳಿದಿದ್ದರೂ ಜನರು ಸ್ವಲ್ಪವು ಹಿಂಜರಿಯುವುದಿಲ್ಲ. ಉತ್ಸಾಹದಿಂದ ತಮ್ಮ ಧೈರ್ಯ ಪ್ರದರ್ಶಿಸುತ್ತಾ ವಿಶಿಷ್ಟ ರೀತಿಯಲ್ಲಿ ಪಟಾಕಿ ಹೊಡೆಯುವುದನ್ನು ನೋಡಬಹುದು. ಇಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​( Video Viral) ಆಗುತ್ತಿದೆ.

ವೈರಲ್​ ವಿಡಿಯೋದಲ್ಲಿ ನಾಲ್ವರು ಹುಡುಗರು ನೀಲಿ ಬಣ್ಣದ ನೀರಿನ ಡ್ರಮ್ ಅಡಿಯಲ್ಲಿ ಬಾಂಬ್​ ಪಟಾಕಿ ಇಟ್ಟು ಹಚ್ಚುತ್ತಿರುವುದನ್ನು ನೋಡಬಹುದು. ಕೇವಲ 8 ಸೆಕೆಂಡುಗಳಲ್ಲಿ ಸ್ಫೋಟ ಸಂಭವಿಸಿ ನೀರಿನ ಡ್ರಮ್​​​ ರಾಕೆಟ್‌ನಂತೆ ಎತ್ತರಕ್ಎಕ ಉಡಾವಣೆಯಾಗುತ್ತದೆ. ಆದರೆ ಮುಂದಿನ 4 ಸೆಕೆಂಡುಗಳಲ್ಲಿ ಡ್ರಮ್​ ಕೆಳಗೆ ಬೀಳುವುದನ್ನು ಕಾಣಬಹುದು.

ಆದರೆ ಡ್ರಮ್​​​ ಅಡಿಯಲ್ಲಿ ಪಟಾಕಿ ಸಿಡಿಸುವುದನ್ನು ನೋಡಲು ವಿದ್ಯಾರ್ಥಿಗಳು ಬಾಲ್ಕನಿಯಲ್ಲಿ ಜಮಾಯಿಸಿದ್ದರು. ಫಲಿತಾಂಶ ವೀಕ್ಷಿಸಲು ನಿಂತಿದ್ದ ವಿದ್ಯಾರ್ಥಿಗಳು ಡ್ರಮ್​ ಹಾರುವುದನ್ನು ನೋಡಿ ಆಶ್ಚರ್ಯಗೊಂಡರು. ಕೊನೆಯಲ್ಲಿ ಎಲ್ಲ ಕಡೆಯಿಂದಲೂ ಶಿಳ್ಳೆಗಳು ಮತ್ತು ಚಪ್ಪಾಳೆಗಳು ಕೇಳಿಬರುವುದನ್ನು ವಿಡಿಯೋದಲ್ಲಿ ಗಮನಿಸಬಹುದು.

20 ಸೆಕೆಂಡ್​​ಗಳ ಈ ವಿಡಿಯೋವನ್ನು (108 ಮಿಲಿಯನ್) ಇದುವರೆಗೆ 10 ಕೋಟಿ 80 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 64 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಇಂತಹ ದೃಶ್ಯಗಳನ್ನು ನೋಡುವುದು ಜೀವನದ ದೊಡ್ಡ ಸಂತೋಷ, ಈ ರೀತಿ ಹುಡುಗರ ಹಾಸ್ಟೆಲ್‌ನಲ್ಲಿ ಮಾತ್ರ ನಡೆಯುತ್ತದೆ, ನಾಸಾ ಕೂಡ ಈ ಹುಡುಗರನ್ನು ಹುಡುಕುತ್ತಿರಬೇಕು, ನೆರೆಯ ಪಾಕಿಸ್ತಾನವು ಈ ಘಟನೆಯನ್ನು ತಮ್ಮ ಚಂದ್ರನ ಕಾರ್ಯಾಚರಣೆ ಎಂದು ಪರಿಗಣಿಸಿರಬೇಕು ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net