

ಬೇಟೆಯಾಡುವ ಕಾಡುಪ್ರಾಣಿಗಳಲ್ಲಿ ಹುಲಿಗೆ ಸಾಟಿಯೇ ಇಲ್ಲ. ಶಕ್ತಿ, ವೇಗ ಮತ್ತು ಬುದ್ಧಿವಂತಿಕೆಯಲ್ಲಿ ಹುಲಿಗೆ ಹೊಂದಾಣಿಕೆಯೇ ಇಲ್ಲ. ಒಂದೇ ಜಿಗಿತದಲ್ಲಿ ಬಂಡೆಗಳ ಮೇಲೆ ಹಾರಿ ನದಿ ದಾಟುವ ಶಕ್ತಿ ಹುಲಿಗಿದೆ. ಸದ್ಯ ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ. ಆದರೆ ಈ ವಿಡಿಯೋ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬುದು ದೃಢಪಟ್ಟಿಲ್ಲ.
ವೈರಲ್ ವಿಡಿಯೋದಲ್ಲಿ ಹುಲಿ ನಡೆದುಕೊಂಡು ನದಿಯ ದಡವನ್ನು ತಲುಪುತ್ತದೆ. ಮಧ್ಯದಲ್ಲಿ ನದಿ ಇರುವುದನ್ನು ನೀವು ನೋಡಬಹುದು. ಆದರೆ ನಿರಾಯಾಸವಾಗಿ ಒಂದೇ ಜಿಗಿತಕ್ಕೆ ನದಿಯ ಇನ್ನೊಂದು ಬದಿಯನ್ನು ತಲುಪುವುದನ್ನು ನೀವು ಕಾಣಬಹುದು.
17 ಸೆಕೆಂಡುಗಳ ಈ ವಿಡಿಯೋವನ್ನು ಇಲ್ಲಿಯವರೆಗೆ 6.1 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. 64 ಸಾವಿರ ಮಂದಿ ಲೈಕ್ ಮಾಡಿದ್ದು ಹಲವರು ಪ್ರತಿಕ್ರಿಯಿಸಿದ್ದಾರೆ. ಹುಲಿಯ ಅದ್ಭುತ ಜಿಗಿತವನ್ನು ನೋಡಿ ಮಹಾರಾಣಾ ಪ್ರತಾಪನ ಕುದುರೆ ನೆನಪಾಯಿತು, ಅರಣ್ಯದ ಭಯಂಕರ ನರಭಕ್ಷಕಗಳಲ್ಲಿ ಹುಲಿಯು ಅಗ್ರಸ್ಥಾನದಲ್ಲಿದೆ ಎಂದು ಕಾಮೆಂಟ್ ಮಾಡಿದ್ದಾರೆ.