ಗಾಯಗೊಂಡ ಚಿರತೆಗೆ ಹಸುವಿನ ಸಾಂತ್ವನ; Viral Video ನೋಡಿ ಮನಸೋತ ನೆಟ್ಟಿಗರು

Untitled design - 2024-11-11T181752.658
Published on

ಕಾಡುಪ್ರಾಣಿಗಳು ನಮ್ಮೆದುರು ಬಂದರೆ ಸಾಕು ಪ್ರಜ್ಞೆ ಕಳೆದುಕೊಳ್ಳತ್ತೇವೆ. ಇನ್ನು ಹುಲಿ ಮತ್ತು ಸಿಂಹದಂತಹ ಕಾಡು ಪ್ರಾಣಿಗಳು ಬೇಟೆ ಆಡುವುದಕ್ಕೆ ಹೊಂಚುಹಾಕುತ್ತಿರುತ್ತವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಿರತೆಯು ಹಸುವಿನ ಬಳಿ ಕುಳಿತಿರುವ ವಿಡಿಯೋವೊಂದು ವೈರಲ್​(Viral Video) ಆಗುತ್ತಿದೆ.

ವೈರಲ್​ ವಿಡಿಯೋದಲ್ಲಿ ಕೊಟ್ಟಿಗೆಯಲ್ಲಿ ಹಸುವನ್ನು ಕಟ್ಟಿರುವುದನ್ನು ನೋಡಬಹುದು. ಪಕ್ಕದಲ್ಲಿ ಚಿರತೆಯೊಂದು ನೆಲದ ಮೇಲೆ ಮಲಗಿದೆ. ಹಸುವು ಅದನ್ನು ನೋಡಿ ಹೆದರುವುದಿಲ್ಲ ಆದರೆ ಅದನ್ನು ತನ್ನ ನಾಲಿಗೆಯಿಂದ ನೆಕ್ಕಲು ಪ್ರಾರಂಭಿಸುತ್ತದೆ. ಆಶ್ಚರ್ಯಕರ ವಿಷಯವೆಂದರೆ ಚಿರತೆ ಹಸುವಿನ ಮೇಲೆ ಅಥವಾ ಅದರ ಕರುವಿನ ಮೇಲೆ ದಾಳಿ ಮಾಡುವುದಿಲ್ಲ. ಒಂದು ಮೂಲೆಯಲ್ಲಿ ಮಲಗಿರುವುದನ್ನು ಕಾಣಬಹುದು.

ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಎರಡೂ ಪ್ರಾಣಿಗಳ ವಿಚಿತ್ರ ನಡವಳಿಕೆಯನ್ನು ನೋಡಲಾಗಿದೆ. ಚಿಕಿತ್ಸೆ ನೀಡಿ ಚಿರತೆಯನ್ನು ಮತ್ತೆ ಕಾಡಿಗೆ ಬಿಡಲಾಗಿದೆ! ಈ ವೀಡಿಯೊದಲ್ಲಿ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿಲ್ಲ ಎಂದು ಹೇಳಲಾಗಿದೆ.

ವೈರಲ್​ ಆದ ವಿಡಿಯೋವನ್ನು ನೋಡಿದ ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದರೆ. ಕೆಲವರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರೆ ಮತ್ತೆ ಕೆಲವರು ಚಿರತೆ ಗಾಯಗೊಂಡಿದ್ದು ಒಂದೇ ಸ್ಥಳದಲ್ಲಿ ಕುಳಿತಿದೆ ಎಂದು ಹೇಳಿದ್ದರೆ. ಈ ವಿಡಿಯೋ ಎಲ್ಲಿಂದ ಬಂದಿದೆ ಎಂದು ಕೆಲವು ಬಳಕೆದಾರರು ಕೇಳಿದ್ದಾರೆ. ವಿಡಿಯೋ ಎಲ್ಲಿಂದ ಬಂದಿದೆ ಎಂಬುದು ಇನ್ನು ದೃಢಪಡಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net