More

  ಗಣಿ ಇಲಾಖಾಧಿಕಾರಿಯಿಂದ ಕಾವಡಿ ಸೇತುವೆ ಮರಳುಗಾರಿಕೆ ಸ್ಥಳ ಪರಿಶೀಲನೆ: ಸ್ಥಳೀಯರಿಂದ ವಾಹನ ತಡೆದು ತರಾಟೆ

  ಕೋಟ: ಇಲ್ಲಿನ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಾರ್ಕಡದ ಕಾವಡಿ ಸೇತುವೆ ಬಳಿ ಅವೈಜ್ಞಾನಿಕ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ರೈತರ ದೂರಿನ ಅನ್ವಯ ಸ್ಥಳಕ್ಕೆ ಉಡುಪಿ ಗಣಿ ಇಲಾಖೆ ಅಧಿಕಾರಿ ಅಶ್ವಿನಿ ಭೇಟಿ ನೀಡಿ ಪರಿಶೀಲಿಸಿದರು.

  ಈ ವೇಳೆ ಇಲಾಖಾಧಿಕಾರಿಗಳು ಅವೈಜ್ಞಾನಿಕ ಮರಳುಗಾರಿಕೆಗೆ ಸಹಕರಿಸಿದ್ದಾರೆ ಎಂದು ಆರೋಪಿಸಿ ವಾಹನ ತಡೆದು ಗ್ರಾಮಸ್ಥರು ತರಾಟೆ ತೆಗೆದುಕೊಂಡರು.

  ಸಾಮಾಜಿಕ ಹೋರಾಟಗಾರ ನಾಗರಾಜ್ ಗಾಣಿಗ ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿಗಳು ಪ್ರಭಾವಿ ವ್ಯಕ್ತಿಗಳ ಕೈಯೊಳಗೆ ಕಾರ್ಯನಿರ್ವಹಿಸುವಂತೆ ತೋರ್ಪಡಿಸುತ್ತದೆ. ಸುತ್ತಮುತ್ತ ಸಾವಿರಾರು ಎಕರೆ ಕೃಷಿ ಭೂಮಿ ಇರುವ ಈ ಪರಿಸರದಲ್ಲಿ ಕೃಷಿಕರ ಅಥವಾ ಗ್ರಾಮಸ್ಥರ ಪರಿಗಣನೆ ಶೂನ್ಯವಾಗಿದೆ ಎಂದರು. ಈ ವೇಳೆ ಗ್ರಾಮಸ್ಥರು, ಕೃಷಿಕರು ಧ್ವನಿಗೂಡಿಸಿದರು.

  ಮರಳುಗಾರಿಕೆ ನಡೆಸುತ್ತಿರುವವರ ಮತ್ತು ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸ್ವಲ್ಪ ಹೊತ್ತು ಬಿಗುವಿನ ವಾತಾವರಣ ನಿರ್ಮಾಣಗೊಂಡಿತು.

  ಗಣಿ ಇಲಾಖಾಧಿಕಾರಿಯಿಂದ ಕಾವಡಿ ಸೇತುವೆ ಮರಳುಗಾರಿಕೆ ಸ್ಥಳ ಪರಿಶೀಲನೆ: ಸ್ಥಳೀಯರಿಂದ ವಾಹನ ತಡೆದು ತರಾಟೆ

  ಹೋರಾಟ ತೀವ್ರ

  ಜನಸಾಮಾನ್ಯರ, ಕೃಷಿಕರ ಅಳಲಿಗೆ ಸ್ಪಂದಿಸದೆ ಅವೈಜ್ಞಾನಿಕ ಮರಳುಗಾರಿಕೆಗೆ ಜಿಲ್ಲಾಡಳಿತ ತಡೆ ನೀಡದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.

  ಪೊಲೀಸರ ಮಧ್ಯಪ್ರವೇಶ

  ಸ್ಥಳದಲ್ಲಿ ಅಧಿಕಾರಿಗಳು, ಗ್ರಾಮಸ್ಥರು, ಮರಳುಗಾರಿಕೆ ನಡೆಸುವವರ ಮಧ್ಯೆ ಮಾತಿನ ಚಕಮಕಿ ಮಿತಿಮೀರಿದಾಗ ಕೋಟ ಪೊಲೀಸ್ ಠಾಣಾಧಿಕಾರಿ ತೇಜಸ್ವಿ ಮಧ್ಯಪ್ರವೇಶಿಸಿ ಕಾನೂನಿನ ಚೌಕಟ್ಟಿನ ಒಳಗೆ ಸಮಸ್ಯೆ ಇತ್ಯರ್ಥಗೊಳಿಸಿಕೊಳ್ಳಿ. ಅಧಿಕಾರಿಗಳ ವಾಹನ ಅಡ್ಡಗಟ್ಟುವುದು ಸೂಕ್ತವಲ್ಲ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟು ಅಧಿಕಾರಿಗಳು ತೆರಳುವಂತೆ ಮಾಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts