More

    ಕಟಪಾಡಿ ಬೀಡು ಮೂಡು-ಪಡು ಜೋಡುಕರೆ ಕಂಬಳದಲ್ಲಿ ಪಡುಕರೆಯ ಕೋಣಗಳೇ ಗೆಲುವು ಸಾಧಿಸಿದ ವಿಶೇಷ

    ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
    31 ಗಂಟೆಯಲ್ಲಿ ಮುಕ್ತಾಯವಾದ ಕಟಪಾಡಿ ಬೀಡು ಮೂಡು ಪಡು ಜೋಡುಕರೆ ಕಂಬಳದ ಪೈನಲ್‌ನಲ್ಲಿ 5 ವಿಭಾಗದ ಕೋಣಗಳ ಸ್ಪರ್ಧೆಯಲ್ಲಿ ಪಡುಕರೆಯ ಕೋಣಗಳೇ ಗೆಲುವು ಸಾಧಿಸುವ ಮೂಲಕ ಅಪರೂಪದ ಘಟನೆಗೆ ಸಾಕ್ಷಿಯಾಯಿತು.

    ಹಗ್ಗ ಹಿರಿಯ ವಿಭಾಗದ ಪೈನಲ್‌ನ ಪ್ರಥಮ ಸ್ಪರ್ಧೆಯಲ್ಲಿ ನಂದಳಿಕೆ ಶ್ರೀಕಾಂತ ಭಟ್ ಅವರ ಎ ಕೋಣಗಳು ಹಾಗೂ ಮಿಜಾರು ಪ್ರಸಾದ್ ನಿಲಯ ಶಕ್ತಿಪ್ರಸಾದ್ ಎ ಕೋಣಗಳ ನಡುವೆ ತುರುಸಿನ ಸ್ಪರ್ಧೆ ನಡೆದು ಸಮಬಲ ಸಾಧಿಸಿದವು. ಎರಡನೇ ಬಾರಿ ನಡೆದ ಸ್ಪರ್ಧೆಯಲ್ಲಿ ಮಿಜಾರು ಕೋಣಗಳು ಗೆಲುವು ಸಾಧಿಸಿದವು. ಕಳೆದ ವಾರ ನಡೆದ ವಾಮಂಜೂರು ತಿರುವೈಲ್‌ಗುತ್ತಿನ ಕಂಬಳದಲ್ಲಿಯೂ ಪೈನಲ್‌ನಲ್ಲಿ ಈ ಕೋಣಗಳು ಒಮ್ಮೆ ಸಮಬಲ ಸಾಧಿಸಿ ಬಳಿಕ ನಂದಳಿಕೆ ಕೋಣಗಳು ಪ್ರಥಮ ಬಹುಮಾನಕ್ಕೆ ಪಾತ್ರವಾಗಿತ್ತು. ಕನೆ ಹಲಗೆ ವಿಭಾಗದಲ್ಲಿ ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ್ ಭಟ್ ಅವರ 4 ಜೊತೆ ಕೋಣಗಳು ಸೇರಿ 9 ಜೊತೆ ಕೋಣಗಳು ಸ್ಪರ್ಧೆಯಲ್ಲಿದ್ದರೂ ಯಾವೊಂದು ಕೋಣಗಳು ನಿಶಾನೆಗೆ ನೀರು ಚಿಮ್ಮಿಸದ ಕಾರಣ ಎಲ್ಲ ಕೋಣಗಳಿಗೆ ಸಮಾನ ಬಹುಮಾನ ಹಂಚಲಾಯಿತು.

    ಕನೆಹಲಗೆಯಲ್ಲಿ ಸಮಾನ

    ಕನೆಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ.ಪೂಜಾರಿ, ವಾಮಂಜೂರು ತಿರುವೈಲುಗುತ್ತು ನವೀನಚಂದ್ರ ಆಳ್ವ, ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್ ಎ, ಬಿ, ಸಿ, ಡಿ, ತೋನ್ಸೆ ಜಾಕ್ಯೂಮ್ ಲೂಯಿಸ್, ನೇರಳಕಟ್ಟೆ ಕೊಡ್ಲಾಡಿ ಅದ್ವಿನ್ ರವಿರಾಜ್ ಶೆಟ್ಟಿ, ಸಾಸ್ತಾನ ಪಾಂಡೇಶ್ವರ ಗಣೇಶ್ ಪೂಜಾರಿ ಕೋಣಗಳಿಗೆ ಸಮಾನ ಬಹುಮಾನ.

    ಫಲಿತಾಂಶ

    ಅಡ್ಡ ಹಲಗೆ ಪ್ರಥಮ ಕೋಟ ಕಾಸನಗುಂಡು ಗೋಪಾಲ್ ಮಡಿವಾಳ(ಹಲಗೆ ಮುಟ್ಟಿದವರು ಭಟ್ಕಳ ಹರೀಶ್), ದ್ವಿತೀಯ: ಬೋಳಾರ ತ್ರಿಶಾಲ್ ಕೆ.ಪೂಜಾರಿ(ಹಲಗೆ ಮುಟ್ಟಿದವರು ಸಾವ್ಯ ಗಂಗಯ್ಯ ಪೂಜಾರಿ), ಹಗ್ಗ ಹಿರಿಯ ಪ್ರಥಮ ಮಿಜಾರು ಪ್ರಸಾದ್ ನಿಲಯ ಪ್ರಖ್ಯಾತ್ ಶಕ್ತಿ ಪ್ರಸಾದ್ ಶೆಟ್ಟಿ(ಎ) (ಓಡಿಸಿದವರು ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ), ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್(ಎ)(ಬಂಬ್ರಾಣಬೈಲು ವಂದಿತ್ ಶೆಟ್ಟಿ), ಹಗ್ಗ ಕಿರಿಯ ಪ್ರಥಮ ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ(ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್), ದ್ವಿತೀಯ ಅಲ್ಲಿಪಾದೆ ದೇವಸ್ಯ ಪಡೂರು ವಿಜಯ ವಿ.ಕೋಟ್ಯಾನ್(ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ), ನೇಗಿಲು ಹಿರಿಯ ಪ್ರಥಮ ಉಡುಪಿ ಚಿತ್ಪಾಡಿ ಅಪ್ಪು ಶೆಟ್ಟಿ(ಎ)(ನಕ್ರೆ ಪವನ್ ಮಡಿವಾಳ), ದ್ವಿತೀಯ ನಾವುಂದ ಆಶ್ರಿತ ಇಶಾನಿ ವಿಶ್ವನಾಥ ಪೂಜಾರಿ(ಎ)(ಬೈಂದೂರು ಮಂಜುನಾಥ ಗೌಡ), ನೇಗಿಲು ಕಿರಿಯ ಪ್ರಥಮ ಉಡುಪಿ ಕೊರಂಗ್ರಪಾಡಿ ಪಡುಮನೆ ವೀರ್ ಕರ್ಣ ಪ್ರಭಾಕರ ಹೆಗ್ಡೆ (ಆದಿ ಉಡುಪಿ ಜಿತೇಶ್), ದ್ವಿತೀಯ ಕಾಪು ಕಲ್ಯ ಜವನೆರ್(ಕಕ್ಕೆಪದವು ಗೌತಮ್ ಗೌಡ) ಬಹುಮಾನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts