More

    ಕೋಟ ಶ್ರೀ ಹಿರೇಮಹಾಲಿಂಗೇಶ್ವರ ರಥೋತ್ಸವ ಸಂಪನ್ನ

    ಕೋಟ: ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ವಾರ್ಷಿಕ ರಥೋತ್ಸವ ಶನಿವಾರ ಸಂಪನ್ನಗೊಂಡಿತು.
    ಶ್ರೀ ದೇಗುಲದಿಂದ ಕೋಟದ ಅಮೃತೇಶ್ವರಿ ದೇಗುಲದವರೆಗೆ ತೇರು ಸಂಚರಿಸಿ ಮರಳಿ ಶ್ರೀ ದೇಗುಲ ತಲುಪಿತು. ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದದ ಸದಸ್ಯರ ನೆರವಿನೊಂದಿಗೆ ಸುಡುಮದ್ದು ಪ್ರದರ್ಶನ, ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳು, ಕೀಲು ಕುದುರೆ, ಡೊಳ್ಳು ಕುಣಿತ, ಚೆಂಡೆ ವಾದನ, ಸಂಚಾರಿ ಆರ್ಕೆಸ್ಟ್ರಾ, ವಿವಿಧ ಭಜನಾ ತಂಡದಿಂದ ಕುಣಿತ ಭಜನೆ ಗಮನ ಸೆಳೆಯಿತು.

    ಕೋಟ ಶ್ರೀ ಹಿರೇಮಹಾಲಿಂಗೇಶ್ವರ ರಥೋತ್ಸವ ಸಂಪನ್ನ

    ಮಧ್ಯಾಹ್ನ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿ ಅನ್ನಪ್ರಸಾದ ಸ್ವೀಕರಿಸಿದರು. ಪೂರ್ವಾಹ್ನ ಶ್ರೀ ದೇಗುಲದಲ್ಲಿ ಹಣ್ಣುಕಾಯಿ ಸೇವೆ, ಮಹಾಮಂಗಳಾರತಿ, ರುದ್ರಾಭಿಷೇಕ ವಿವಿಧ ರೀತಿಯ ಪೂಜಾ ಕಾರ್ಯ ರಾಜೇಂದ್ರ ಅಡಿಗರ ನೇತೃತ್ವದಲ್ಲಿ ನಡೆಯಿತು.
    ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಜಿ.ಗಣೇಶ್ ಭಟ್, ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರ ವೃಂದದ ಜಿ.ಎಸ್.ಆನಂದ್ ದೇವಾಡಿಗ, ಸಮಿತಿ ಪ್ರಮುಖರಾದ ಚಂದ್ರ ದೇವಾಡಿಗ ಬೆಂಗಳೂರು, ಅಜಿತ್ ದೇವಾಡಿಗ, ಚಂದ್ರ ದೇವಾಡಿಗ, ರಾಜೇಶ್ ದೇವಾಡಿಗ, ಅರ್ಚಕರಾದ ಸದಾಶಿವ ಅಡಿಗ, ತೀರ್ಥೇಶ್ ಭಟ್, ಅನಂತಮೂರ್ತಿ ಭಟ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts