More

    ಕಾಪು ಮಾರಿಯಮ್ಮ ದರುಶನ ಪಡೆದ ನಟ ರಕ್ಷಿತ್ ಶೆಟ್ಟಿ

    ಪಡುಬಿದ್ರಿ: ನಟ ರಕ್ಷಿತ್ ಶೆಟ್ಟಿ ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿ ಮಾರಿಯಮ್ಮನ ದರುಶನ ಪಡೆದರು.
    ದೇವಳ ಜೀರ್ಣೋದ್ಧಾರ ಕಾರ್ಯ ವೀಕ್ಷಿಸಿ ಮಾತನಾಡಿ, ಪುರಾತನ ಕಾಲದಲ್ಲಿ ಕಲ್ಲಿನ ದೇವಸ್ಥಾನಗಳನ್ನು ಕಟ್ಟುತ್ತಿದ್ದರು. ಈಗಿನ ಕಾಲದಲ್ಲಿ ಅನೇಕ ಕಡೆ ಕಾಂಕ್ರೀಟ್‌ನಲ್ಲೆ ದೇವಸ್ಥಾನ ಕಟ್ಟುತ್ತಿದ್ದಾರೆ. ದೇವಸ್ಥಾನ ಇದ್ದರೆ ಹೀಗಿರಬೇಕು. ಇಳಕಲ್ ಕೆಂಪು ಶಿಲೆಯಲ್ಲಿ ಗರ್ಭಗುಡಿ ಬಹಳಷ್ಟು ಅದ್ಭುತವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಶ್ರೀದೇವಿಯಲ್ಲಿ ಪ್ರಾರ್ಥಿಸಿ ಪ್ರಸಾದ ನೀಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯಾ, ಜೀರ್ಣೋದ್ಧಾರ ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸಂದರ್ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ.ಶೆಟ್ಟಿ ಬಾಲಾಜಿ, ಪುಣೆ ಸಮಿತಿ ಕಾರ್ಯಾಧ್ಯಕ್ಷ ಮಾಧವ ಆರ್.ಶೆಟ್ಟಿ ಪಾದೂರು ಹೊಸಮನೆ, ಆರ್ಥಿಕ ಸಮಿತಿ ಚಂದ್ರಘಂಟಾ ತಂಡದ ಮುಖ್ಯ ಸಂಚಾಲಕ ಬಿ.ಕೆ.ಶ್ರೀನಿವಾಸ್, ಕಾತ್ಯಾಯಿನಿ ತಂಡದ ಮುಖ್ಯ ಸಂಚಾಲಕ ಬೀನಾ ವಿ.ಶೆಟ್ಟಿ, ಸಂಚಾಲಕರುಗಳಾದ ಅನುರಾಧಾ ಮನೋಹರ್ ಶೆಟ್ಟಿ, ಅರ್ಚನಾ ಶೆಟ್ಟಿ, ಕವಿತಾ ಶೆಟ್ಟಿ, ಅನಿತಾ ಹೆಗ್ಡೆ, ಪ್ರಬಂಧಕ ಗೋವರ್ಧನ್ ಸೇರಿಗಾರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts