More

    ವಾಟ್ಸಾಪ್ ಗ್ರೂಪ್‌ ನಂಬಿ 9.30 ಲಕ್ಷ ರೂ. ಕಳೆದುಕೊಂಡ ಮಹಿಳೆ

    ಶಿರ್ವ: ವಾಟ್ಸ್‌ಅಪ್ ಗ್ರೂಪ್‌ನಿಂದ ಬಂದ ಮೆಸೇಜ್ ನಂಬಿ ಹಂತ-ಹಂತವಾಗಿ ಮಹಿಳೆಯೊಬ್ಬರು ಲಕ್ಷಾಂತರ ಹಣ ಕಳೆದುಕೊಂಡ ಘಟನೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ವಾಟ್ಸಾಪ್ ಗ್ರೂಪ್‌ನಿಂದ ರಿಕ್ವೆಸ್ಟ್

    ಮಾಯಾ(38) ಎಂಬುವರು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು 2023ರ ನವೆಂಬರ್ 15ರಂದು ವಾಟ್ಸಾಪ್ ಗ್ರೂಪ್‌ನಿಂದ ರಿಕ್ವೆಸ್ಟ್ ಬಂದಿದ್ದು ಗ್ರೂಪ್‌ಗೆ ಜಾಯಿನ್ ಆಗಿದ್ದರು. ಈ ಗ್ರೂಪ್‌ನಲ್ಲಿ ಸಹಾಯಕ ಮ್ಯಾನೇಜರ್ ಎಂದು ಮನೋಜ್ ಕುಮಾರ್ ಎಂಬಾತ ಪರಿಚಯಿಸಿಕೊಂಡಿದ್ದು ಟ್ರೇಡಿಂಗ್ ಅಕೌಂಟ್ ಎಂದು ಪರಿಚಯಿಸಿ ಬಳಿಕ ಪಿಟಿ-ವಿಸಿ ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡುವಂತೆ ತಿಳಿಸಿದ್ದ. ಆ ಮೇರೆಗೆ ಮಾಯಾ ಅವರು ಮೊಬೈಲ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಬ್ಯಾಂಕ್ ಆಫ್ ಬರೋಡ ಖಾತೆಯಿಂದ ಗೂಗಲ್‌ಪೇ ಮುಖಾಂತರ ಜ.24ರಿಂದ ಹಂತ ಹಂತವಾಗಿ 2.30 ಲಕ್ಷ ರೂ. ವಾಟ್ಸ್‌ಆಪ್‌ನಲ್ಲಿ ತಿಳಿಸಿದ ಗೂಗಲ್‌ಪೇ ನಂಬ್ರಕ್ಕೆ ಕಳುಹಿಸಿದ್ದಾರೆ.

    ಕೇಳಿದರೂ ವಾಪಾಸು ಬರಲಿಲ್ಲ ಹಣ

    ಬಳಿಕ ಫೆ.6ರಿಂದ ಖಾತೆಯಿಂದ ಹಂತ ಹಂತವಾಗಿ 3 ಲಕ್ಷ ರೂ. ಕಳುಹಿಸಿದ್ದು, ಫೆ.12ರಂದು ವಾಟ್ಸಾಪ್ ಗ್ರೂಪ್‌ನಲ್ಲಿ ಹಣ ವಾಪಾಸು ಕೇಳಿದಾಗ 21,000 ರೂ. ಖಾತೆಗೆ ಹಾಕಲಾಗಿತ್ತು. ಬಳಿಕ ಫೆ.13ರಂದು ಹಣ ಕೇಳಿದಾಗ 2 ಲಕ್ಷ ರೂ. ವಾಪಾಸು ಖಾತೆಗೆ ಬಂದಿತ್ತು. ಫೆ.14ರಿಂದ ಬ್ಯಾಂಕ್‌ಆಫ್ ಬರೋಡ ಖಾತೆಯಿಂದ ಹಂತ ಹಂತವಾಗಿ 4 ಲಕ್ಷ ರೂ. ಕಳುಹಿಸಿದ್ದು, ಹೀಗೆ ಖಾತೆಯಿಂದ ರೂ.9.30 ಲಕ್ಷ ಹಣ ಅವರು ತಿಳಿಸಿದ ವಿವಿಧ ಖಾತೆಗಳಿಗೆ ಕಳುಹಿಸಿದ್ದರು. ಫೆ.14ರಂದು ಹಣ ವಾಪಾಸು ಕೇಳಿದಾಗ 2 ಕೆಲಸದ ದಿನದಲ್ಲಿ ಹಣ ವಾಪಾಸು ಬರುತ್ತದೆ ಎಂದು ವಾಟ್ಸಾಪ್ ಮೆಸೇಜ್ ಬಂದಿತ್ತು. ಈ ಮೆಸೇಜ್‌ನ್ನು ನೋಡಿ ಸಂಶಯ ಬಂದು ಪಿಟಿ-ವಿಸಿ ಅಪ್ಲಿಕೇಶನ್‌ನಲ್ಲಿ ಅಪ್‌ಡೇಟ್ ನೋಡಿದಾಗ ಶೂನ್ಯ ಬ್ಯಾಲೆನ್ಸ್ ಇತ್ತು. ಆನ್‌ಲೈನ್ ಮುಖೇನ ಒಟ್ಟು 9.30 ಲಕ್ಷ ರೂ. ಹಣ ಪಡೆದು ಮೋಸ ಮಾಡಲಾಗಿದೆ ಎಂದು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts